ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಿ: ಮಲ್ಲಿಕಾರ್ಜುನ ಲೋಣಿ ಕರೆ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೨೬:ಬರಲಿರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಭಾನವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಕಾಂಗ್ತೆಸ್ ಶಿಕ್ಷಕರ ಜಿಲ್ಲಾ ಘಟಕದ ಅಧ್ಯಕ್ಷ, ಬ್ಲಾಕ್ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರಲಿರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಹೆಚ್ಚು ಮುತುರ್ವಜಿಯಿಂದ ಕೆಲಸ ಮಾಡಬೇಕು ಎಂದರು.
ಕರ್ನಾಟಕ ಸರಕಾರ ಜನಸಾಮಾನ್ಯರ ಕಲ್ಯಾಣಕ್ಕಾಗಿ ಹಾಗೂ ಜನಸಾಮಾನ್ಯರಿಗೆ ಒಳ್ಳೆಯ ಸೇವೆ ನೀಡುತ್ತಿದೆ. ನೀವು ಕೂಡಾ, ಜನರಿಗೆ ಸರಕಾರ ನೀಡುವ ಯೋಜನೆ ಕುರಿತು ಮಾಹಿತಿ ನೀಡುವ ಮೂಲಕ ಜನಸೇವೆ ಮಾಡುವುದರ ಜೊತೆ ಜೊತೆಯಲ್ಲಿ ಪಕ್ಷ ಸಂಘಟನೆ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಶಿಕ್ಷಕರ ಘಟಕದ ಅಧ್ಯಕ್ಷ ಎಂ.ಬಿ. ಮೆಡೇಗಾರ, ಉಪಾಧ್ಯಕ್ಷÀ ಆರ್. ಎ. ಇನಾಮದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಚಲವಾದಿ, ವಿಜಯಪುರ ನಗರ ಘಟಕದ ಅಧ್ಯಕ್ಷÀ ಬಿ. ಎಂ. ತೋಳಿ ವೇದಿಕೆಯ ಮೇಲಿದ್ದರು.
ಈ ಸಭೆಯಲ್ಲಿ ಎಸ್. ಎನ್. ಕನ್ನೂರ, ಡಿ. ಎಸ್. ಲಮಾಣಿ, ಸೈಯ್ಯದ ಮಹಿಬೂಬಕಾದ್ರಿ ಪೀರಜಾದೆ, ಮಹ್ಮದರಫೀಕ ಬಂಗಡಿವಾಲೆ, ಎಂ.ಜೆ. ಅಂಬಲ್‌ನೂರ, ಎಂ.ಬಿ. ಬಳ್ಳಾರಿ, ಎನ್.ಆಯ್. ಬೋಸರಾಜ, ಡಿ.ಬಿ. ಮೇಲಿನಮನಿ. ಎಸ್. ಎಂ. ಪತಂಗಿ, ಜಿ.ಎಂ. ನಾಯಿಕ, ಎಂ.ಎಚ್. ಚನೇಗಾಂವ, ಎ.ಪಿ. ಬಿದರಿ, ಎಲ್.ಎಸ್. ಮಾಳಿ, ಬಿ.ಎಂ. ತಾಂಬೆ, ಎಂ.ಎನ್. ಚಲವಾದಿ, ಬಿ. ಎಸ್. ಹೆಗಡಿಹಾಳ, ಕೆ.ಎಂ. ಶಾನವಾಲೆ, ಎಚ್.ಎಸ್. ಬನಸೋಡೆ, ಅಶೋಕ ಕಾಂಬಳೆ, ಎಸ್.ಟಿ. ಪೂಜಾರಿ ಇತರರು ಸಂಘಟನೆಯ ಕುರಿತು ಸಲಹೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಹಾಜರಿದ್ದರು.