ಬಂಡಳ್ಳಿ ಗ್ರಾಮದಲ್ಲಿ ವಿಷ್ಣು ವಿಗ್ರಹ ರಾಜಗೋಪುರ: ಉದ್ಘಾಟನೆ
ಸಂಜೆವಾಣಿ ವಾರ್ತೆ
ಹನೂರು ಆ 26 :- ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ವಿಷ್ಣು ವಿಗ್ರಹ ರಾಜಗೋಪುರ ಉದ್ಘಾಟನೆ ಯನ್ನ ಸೃಷ್ಟಿ ಭರಣಿ ನಕ್ಷತ್ರದಂದು ದಿನಾಂಕ 25 .08. 2024 .ಭಾನುವಾರ ದಿನ ಇಂದು ಬೆಳಗ್ಗೆ 7.00 ಗಂಟೆಯಿಂದ 11:00 ವರೆಗೆ ಸುದರ್ಶನ ಹೋಮ ಮತ್ತು ಕುಂಭಾಭಿಷೇಕ ವಿಜೃಂಭಣೆಯಿಂದ ಜರುಗಿತು.
ಹಾಗೆಯೇ ಇಂದು 26 .08 .2024 ಸೋಮವಾರದಂದು ಸಪ್ತಮಿಯ ಕೃತಿಕ ನಕ್ಷತ್ರದಲ್ಲಿ ಚೆನ್ನಿಗರಾಯ ಸ್ವಾಮಿಯವರ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಚೆನ್ನಿಗಸ್ವಾಮಿಯವರ ಗರುಡೋತ್ಸವ ಬೆಳಿಗ್ಗೆ 9.00 ರಿಂದ 11.00 ಘಂಟೆ ಯವರೆಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಜರುಗಿತು. ಹಾಗೂ ನಾಳೆ ಬರುವಂತಹ ಜನಕ್ಕೆ ಭೋಜನ ವ್ಯವಸ್ಥೆ ಮಾಡಲಾಗಿದೆ.
ಆದ್ದರಿಂದ ಎಲ್ಲಾ ಗ್ರಾಮದ ಜನರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮನ ಧನ ಧಾನ್ಯಗಳನ್ನು ಅರ್ಪಿಸಿ ಚನ್ನಿಗರಾಯ ಸ್ವಾಮಿ ಕೃಪೆಗೆ ಪಾತ್ರರಾಗಬೇಕು ಭಗವಂತನ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ದೇವಸ್ಥಾನದ ಅರ್ಚಕರಾದ ಬಿ.ಎನ್ ಲೋಕೇಶ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷರಾದ ಡಿ ನಾರಾಯಣ್ ರಾಜ್ ಕೆ ವಿ ಎನ್ ದೊಡ್ಡಿ, ಅಧ್ಯಕ್ಷರಾದ ಶ್ರೀನಿವಾಸ್ ನಾಯಕ, ವೆಂಕಟಾಚಲ, ಗ್ರಾಮಸ್ಥರಾಧಿಪತಿಗಳು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗೆ ಕಮಿಟಿಯ ಅಧ್ಯಕ್ಷರು ಡಿ ನಾರಾಯಣ್ ರಾಜ್ ಕೆ ವಿ ಎನ್ ದೊಡ್ಡಿ ಇವರನ್ನು ದೂರವಾಣಿಯಲ್ಲಿ
ಸಂಪರ್ಕಸಿ:7349453815 ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.