ವಿಜ್ಞಾನಿಗಳ ಕಾರ್ಯ ಸಾಧನೆ ಅಮೋಘ: ಎಸ್.ವಿ. ಬುರ್ಲಿ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೨೬:ಭಾರತೀಯ ವಿಜ್ಞಾನಿಗಳು ತಮ್ಮ ಅಪ್ರತಿಮ ಜ್ಞಾನವನ್ನು ದೇಶ ಹಾಗೂ ದೇಶದ ಜನತೆಗೆ ಮೀಸಲಿಟ್ಟಿರುವುದು ಶ್ಲಾಘನೀಯ. ಬಾಹ್ಯಾಕಾಶz ಕಾರ್ಯ ಸಾಧನೆ ಅಮೋಘವಾದದ್ದು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್.ವಿ. ಬುರ್ಲಿ ಹೇಳಿದರು.
ನಗರದ ನಂದಿನಿ ಬಡಾವಣೆಯಲ್ಲಿರುವ ಶ್ರೀ ರೇಣುಕಾಚಾರ್ಯ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಜಿಲ್ಲಾ ಘಟಕ ಹಾಗೂ ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಸೈಂಟಿಸ್ಟ, ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ರಾಷ್ಟಿçÃಯ ಬಾಹ್ಯಾಕಾಶ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಹ್ಯಾಕಾಶದ ಅನ್ವೇಷಣೆಯಲ್ಲಿ ಭಾರತ ಮಂಚೂಣಿಯಲ್ಲಿದ್ದು, ಇದಕ್ಕಾಗಿ ವಿಜ್ಞಾನಿಗಳು ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಇಸ್ರೋದ ವಿಜ್ಞಾನಿಗಳು ತಯಾರಿಸಿದ ಅನೇಕ ಮಾನವ ಉಪಯೋಗಿ ಉಪಗ್ರಹಗಳು ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಕ್ಷಮತೆ ಹೊಂದಿವೆ. ಉಡಾವಣೆಗೊಂಡ ‘ಚಂದ್ರಯಾನ-೩’ ಚಂದ್ರನ ಕಕ್ಷೆ ಪ್ರವೇಶಿಸಿ ಯಶಸ್ವಿಯಾಗಿ ಚಂದ್ರನಮೇಲೆ ನೆಲೆಸಿತು. ಅದರ ಅಂಗವಾಗಿ ಇಂದು ಮೊದಲನೆ ‘ರಾಷ್ಟಿçÃಯ ಬಾಹ್ಯಾಕಾಶ ದಿನ’ ಆಚರಿಸುತ್ತಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಂದ್ರಯಾನ -೩ರ ಉಡಾವಣೆಯ ವಿವರದ ವಿಡಿಯೋವನ್ನು ಮಕ್ಕಳಿಗೆ ಪ್ರದರ್ಶಿಸಿದರು.
ಶಾಲೆಯ ಆಡಳಿತಾಧಿಕಾರಿ ರಾಘವೇಂದ್ರ ಮಿಸಾಳೆ ರಾಕೆಟ್ ಮಾದರಿಯ ವಿವಿದ ಭಾಗಗಳು ಹಾಗೂ ಅವುಗಳ ಕಾರ್ಯಗಳನ್ನು ಮಕ್ಕಳಿಗೆ ವಿವರಿಸಿದರು.
ಅತಿಥಿಗಳಾದ ಅಶೋಕ ಹಿರೇಮಠ, ಬಿ.ಎ. ಆಸಂಗಿ, ಆಡಳಿತಾಧಿಕಾರಿ ರೂಪಾ ಪಡನಾಡ, ಮುಖ್ಯೋಪಾಧ್ಯಾಯಿನಿ ವಸುಂಧರಾ ಐನಾಪೂರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಉಪಸ್ಥಿರಿದ್ದರು.