ಶಾಲೆಯಲ್ಲಿ ಸಂತೆ ಮೇಳ
ವಾಡಿ:ಆ.೨೬: ಸಮೀಪದ . ಚಾಜು ನಾಯಕ್ ತಾಂಡಾದಲ್ಲಿ ಸಂತೆ ಮೇಳದ ಮೂಲಕ ಮಕ್ಕಳ ಕಲಿಕಾ ಚಟುವಟಿಕೆಗಳ ಪ್ರೇರಣೆಯ ಉದ್ದೇಶದಿಂದ ವಿಶೇಷವಾಗಿ ತಾಂಡದ ಮಕ್ಕಳಲ್ಲಿ ಭಾಷೆ ಕಲಿಕೆಗೆ ಪೂರ್ವಕವಾದಂತ ಒಂದು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ಸರಕಾರಿ ಶಿಕ್ಷಕರು ಆಗಿರುವ ಚಾ ಜು ನಾಯಕ್ ತಾಂಡದ ಮುಖ್ಯ ಗುರುಗಳು ರುದ್ರಪ್ಪ ಶಿಕ್ಷಕರು ಹಾಗೂ ಸಹಶಿಕ್ಷಕರಾದ ಸುರೇಶ್ ರವರು. ಮತ್ತು ಲರ್ನಿಂಗ್ ಲಿಂಕ್ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ. ಸಿದ್ದಣ್ಣ ಎಂ ಮುಧೋಳ್ ಅವರು ಅಳ್ಳಳ್ಳಿ ಕ್ಲಸ್ಟರ್ ನ ಹಿರಿಯ ಸಂಪನ್ಮೂಲ ವ್ಯಕ್ತಿ ವೀರಣ್ಣ ರವರು ಎಲ್ಲಾ ಶಿಕ್ಷಕರೊಂದಿಗೆ ಈ ಒಂದು ಸಂತೆ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ವ್ಯವಹಾರಿಕ ಜ್ಞಾನ. ಸಂಖ್ಯಾ ಜ್ಞಾನಗಳು. ಪದಗಳ ಉಚ್ಚಾರಣೆಯ ಭಾಷಾ ಕೌಶಲ್ಯವನ್ನು ಬೆಳೆಸುವುದು. ಸಂಖ್ಯಾ ಜ್ಞಾನವನ್ನು ಮೂಡಿಸುವುದು ಲರ್ನಿಂಗ್ ಲಿಂಕ್ ಫೌಂಡೇಶನ್ ಮುಖ್ಯ ಗುರಿ ಮತ್ತು ಉದ್ದೇಶವಾಗಿರುತ್ತದೆ. ಎಸ್ ಡಿ ಎಮ್ ಸಿ ಅಧ್ಯಕ್ಷರು ಮತ್ತು ಸದಸ್ಯರು ಈ ಚಟುವಟಿಕೆಯನ್ನು ನೋಡಿ ಒಳ್ಳೆಯ ಉದ್ದೇಶ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.