ಶೈಕ್ಷಣಿಕ ಸಾಧನೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ಅಗತ್ಯ
ಕಲಬುರಗಿ:ಆ.25:ಶೈಕ್ಷಣಿಕವಾಗಿ ಬೆಳೆಯಲು ಉನ್ನತ ಶಿಕ್ಷಣ ಸಂಸ್ಥೆಗಳ ಕೊಡುಗೆ ಬಹಳ ಅಮೂಲ್ಯವಾಗಿರುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಜಿ.ಡೊಳ್ಳೆಗೌಡರ್ ಹೇಳಿದರು,
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಭಾನುವಾರ ಶರಣಬಸವೇಶ್ವರ ಸಂಸ್ಥಾನ ಉನ್ನತ ಶಿಕ್ಷಣ ಸಂಸ್ಥೆಗಳು ಎಂಬ ವಿಷಯ ಕುರಿತು ಮಾತನಾಡಿದರು.
ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶಿಕ್ಷಣ ಮಟ್ಟವನ್ನು ಹೆಚ್ಚಿಸಲಿಕೆ ಸಹಾಯ ಮಾಡುತ್ತವೆ. ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು 80ಕ್ಕಿಂತ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಈ ಭಾಗವನ್ನು ಆರ್ಥಿಕ, ಸಾಮಾಜಿಕವಾಗಿ ಬೆಳೆಯಲು ಕಾರಣರಾಗಿದ್ದಾರೆ. ಶರಣಬಸವೇಶ್ವರ ಶಿಕ್ಷಣ ಸಂಸ್ಥೆ ಇಲ್ಲದಿದ್ದರೆ ಈ ಭಾಗ ಶೈಕ್ಷಣಿಕವಾಗಿ ಹಿಂದುಳಿಯುತ್ತಿತ್ತು. ಅದನ್ನು ಪೂಜ್ಯರು ಹೋಗಲಾಡಿಸಿದ್ದಾರೆ.
1957 ರಲ್ಲಿ ಎಂ.ಎ. ಫೈನ್‍ಆರ್ಟ್ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ, 1961 ರಲ್ಲಿ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ, ಬಸವಕಲ್ಯಾಣದಲ್ಲಿ 1967 ರಲ್ಲಿ ಎಸ್‍ಎಸ್‍ಕೆ ಬಸವೇಶ್ವರ ಕಾಲೇಜ್ ಆಫ್ ಆರ್ಟ್ & ಸೈನ್ಸ್ ಕಾಲೇಜ್, 1973 ರಲ್ಲಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ & ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯ, 2004 ರಲ್ಲಿ ಬಸವಕಲ್ಯಾಣ, ದೊಡ್ಡಪ್ಪ ಅಪ್ಪ ಬಿ.ಎಡ್. ಕಾಲೇಜ್, 2004 ರಲ್ಲಿ ಗೋದುತಾಯಿ ಬಿ.ಎಡ್ ಕಾಲೇಜ್, 2004 ರಲ್ಲಿ ಶರಣಬಸವೇಶ್ವರ ಬಿ.ಎಡ್.ಕಾಲೇಜ್, 2012 ರಲ್ಲಿ ಸ್ನಾತ್ತಕೋತ್ತರ ಕಂಪ್ಯೂಟರ್ ಸೈನ್ಸ್ ಶರಣಬಸವೇಶ್ವರ ಕಾಲೇಜ್ ಆಫ್ ಸೈನ್ಸ್, ಹೀಗೆ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪೂಜ್ಯ ಡಾ.ಅಪ್ಪಾಜಿಯವರು ಆರಂಭಿಸಿ ವಿದ್ಯಾರ್ಥಿಗಳ ಏಳಿಗೆಗೆ ಸಹಕಾರಿಯಾಗಿದ್ದಾರೆ. ಗುರುಶಿಷ್ಯರ ಪರಂಪರೆಯನ್ನು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪೂಜ್ಯರು ಅಳವಡಿಸಿದ್ದಾರೆ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ವಿದ್ಯಾಥಿಗಳಲ್ಲಿ ಬೆಳೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿವರ್ಗದವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಾರೆ. ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಗ್ರಂಥಾಲಯ ಶರಣಬಸವೇಶ್ವರ ಸಂಸ್ಥಾನದಲ್ಲಿದೆ. ಇಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉತ್ತಮ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ ಇದಕ್ಕೆಲ್ಲ ಮುಖ್ಯ ಕಾರಣ ಪೂಜ್ಯ ಡಾ.ಅಪ್ಪಾಜಿ ಮತ್ತು ಪೂಜ್ಯ ಡಾ.ಅವ್ವಾಜಿಯವರ ಶೈಕ್ಷಣಿಕ ದೂರದೃಷ್ಟಿ ಎಂದು ಹೇಳಿದರು.