ಬ. ತೀ. ವಿ. ಪಿ. ಕಾಲೇಜಿನಲ್ಲಿ ರೇಬಿಸ್ ಜಾಗೃತಿ ಶಿಬಿರ
ಸಂಜೆವಾಣಿ ವಾರ್ತೆ
ಹುಮನಾಬಾದ್:ಆ.೨೬:ಪ್ರಾಣಿಜನ್ಯ ರೋಗಗಳ ನಿರ್ವಹಣೆ ಮಾಡುವ ಕುರಿತು ಪ್ರತಿಯೊಬ್ಬರು ಜಾಗೃತಿ ವಹಿಸಿವುದು ಸಾರ್ವಜನಿಕ ಅರೋಗ್ಯದ ದ್ರಷ್ಟಿಯಿಂದ ಇಂದಿನ ಅಗತ್ಯವಾಗಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಶಾಂತಕುಮಾರ ಸಿದ್ಧೇಶ್ವರ ಹೇಳಿದರು.
ಬಸವ ತೀರ್ಥ ವಿದ್ಯಾಪೀಠ ಪದವಿ ಪೂರ್ವ ಕಾಲೇಜು ಹುಮನಾಬಾದ ರಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಶುಕ್ರವಾರ ನಡೆದ ಪ್ರಾಣಿಜನ್ಯ ರೋಗ ತಡೆ ಮತ್ತು ರೇಬಿಸ್ ಜಾಗೃತಿ ಶಿಬಿರ ಉದ್ದೇಶಿಸಿ ಮಾತನಾಡಿದರು.
ನೈಸರ್ಗಿಕವಾಗಿ ಪ್ರಾಣಿ ಮತ್ತು ಮನುಷ್ಯ ಸಂಕುಲದ ನಡುವೆ ಪರಸ್ಪರ ರೋಗ ಹರಡುವ ಪ್ರಕ್ರಿಯೆ ಇದೆ. ಪ್ರಾಣಿ ಜನ್ಯ ರೋಗಗಳ ಸರಿಯಾದ ನಿರ್ವಹಣೆ ಆಗದಿದ್ದರೆ ಮನುಕುಲದ ಮೇಲೆ ಭಾರಿ ಪರಿಣಾಮ ಬೀರಲಿದೆ. ಮಾರಣನಾಂತಿಕ ರೋಗ ಆಗಿರುವ ರೇಬಿಸ್ (ಹುಚ್ಚು ನಾಯಿ ರೋಗ) ನಿಯಂತ್ರಣಕ್ಕೆ ಸಾಕು ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳಿಗೆ ಲಸಿಕೆ ಪಡೆದುಕೊಳ್ಳಬೇಕು.ಈ ಸಂದರ್ಭದಲ್ಲಿ ರೇಬಿಸ್ ಕುರಿತು ಸಂಪೂರ್ಣ ಮಾಹಿತಿ ನೀಡಿ,ಪ್ರಾಣಿಗಳಿಂದ ಬರುವ ಕಾಯಿಲೆಗಳ ಬಗ್ಗೆ ಜಾಗೃತಿ ವಹಿಸುವುದು ಅವಶ್ಯಕ ಎಂದು ತಿಳಿಸಿದರು.
ಪ್ರಾಣಿಜನ್ಯ ಸಾಂಕ್ರಾಮಿಕ ರೋಗಗಳ ಮಹತ್ವ ಮತ್ತು ಜಾಗತಿಕ ಪ್ರಾಣಿ ಜನ್ಯ ರೋಗಗಳ ನಿಯಂತ್ರಣ ಕುರಿತು ವಿದ್ಯಾರ್ಥಿಗಳು ಸಂಪೂರ್ಣ ಮಾಹಿತಿ ಪಡೆದುಕೊಂಡು ತಮ್ಮ ಮನೆಯ ಸುತ್ತಮುತ್ತಲಿನ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಸವ ತೀರ್ಥ ವಿದ್ಯಾಪೀಠ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವರಾಜ ಕಲಗೊಂಡ, ಉಪನ್ಯಾಸಕಿ ಮಹಾನಂದ ಹತ್ತಿ, ಉಪನ್ಯಾಸಕ ಹಣಮಂತ ಮಡಿವಾಳ, ಉಪನ್ಯಾಸಕ ರಾಜು ಪೂಜಾರಿ,ಉಪನ್ಯಾಸಕ ಅಲಿಯಾರಖಾನ್ ದುಬಲಗುಂಡಿ ಸೇರಿ ಅನೇಕರಿದ್ದರು.