ಮೊಬೈಲ್ ವಿದ್ಯಾರ್ಥಿ ಜೀವನದಲ್ಲಿ ಶಾಪವಿದ್ದಂತೆ :- ನ್ಯಾ. ಮಹಾವೀರ್ ಕರಣ್ಣವರ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೬; ಮೊಬೈಲ್ ವಿದ್ಯಾರ್ಥಿ ಜೀವನದಲ್ಲಿ ಒಂದು ಕೆಟ್ಟ ಶಾಪವಿದ್ದಂತೆ ಇದರಿಂದ ದೂರವಿದ್ದರೆ ಜೀವನ ತುಂಬಾ ಸುಂದರವಾಗಿರುತ್ತದೆ ಹಾಗೂ ತಂದೆ ತಾಯಿಗೆ ಸುಳ್ಳನ್ನು ಹೇಳುವುದು ಒಂದು ಕೆಟ್ಟ ದುಶ್ಚಟ ಇದ್ದಂತೆ ಎಂದು ದಾವಣಗೆರೆ ಜಿಲ್ಲಾ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಕರಣ್ಣವರು ಹೇಳಿದರು.  ಸಮೀಪದ ಆನಗೋಡಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಾತೃಶ್ರೀ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಬಿ ಚನ್ನಪ್ಪ ಪದವಿಪೂರ್ವ ಕಾಲೇಜು, ಆನಗೋಡು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರುಒಂದು ಕಾಲದಲ್ಲಿ ಸಾವಿಲ್ಲದ ಮನೆಯಲ್ಲಿ ವಧುವನ್ನು ತಂದು ಮನೆ ತುಂಬಿಸಿಕೊಳ್ಳಬೇಕು ಎಂಬ ನೀತಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯಾರ ಮನೆಯಲ್ಲಿ ಮೊಬೈಲ್ ಇರುವುದಿಲ್ಲವೋ ಅಂತವರ ಮನೆಯಲ್ಲಿ ವಧುವನ್ನ ಮದುವೆ ಮಾಡಿಕೊಳ್ಳಬೇಕು ಎಂಬ ಪರಿಸ್ಥಿತಿ ಬಂದಿದೆ. ಆದ್ದರಿಂದ ಮೊಬೈಲ್ ನಿಂದ ಅಂತರವನ್ನು ಕಾಯ್ದುಕೊಳ್ಳಿ ಎಂಬ ವಿಷಯವನ್ನು ತಿಳಿಸಿದರು.