ಯುವ ಪೀಳಿಗೆ ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಲಿ – ಅಂಜಿನಪ್ಪ ಡಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೨೬; ನಗರದ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ವಿಗಮಾ2K24  ಎಂ ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾವಹಿಸಿದ ಅಂಜಿನಪ್ಪ ಡಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ತಾಳ್ಮೆಯನ್ನು ಕಲಿಯಬೇಕು. ಮಾನವೀಯ‌ ಮೌಲ್ಯಗಳನ್ನುಬೆಳಸಿಕೊಳ್ಳಬೇಕು. ತಂದೆ, ತಾಯಿ, ಗುರು, ಹಿರಿಯರಿಗೆ ಗೌರವಕೊಡುವುದನ್ನು ಕಲಿಯಿರಿ, ಪದವಿ ಮುಗಿದ ನಂತರ ನಿಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ. ಆ ಅವಕಾಶಗಳನ್ನು ಬಳಸಿಕೊಳ್ಳಿ. ನಿಮಗೆ ನೀವೆ ದಾರಿ ದೀಪವಾಗಿ.‌ ಸಮಾಜಕ್ಕೆ ಮಾರ್ಗದರ್ಶಕರಾಗಿ ಎಂದು ಹೇಳಿದರು.ಉಪಸ್ಥಿತರಿದ್ದ ವಿಭಾದ ಮುಖ್ಯಸ್ಥರಾದ ಶ್ರೀಮತಿ ತ್ರಿವೇಣಿ ಸಿ ಡಿ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಸಂಸ್ಕಾರವನ್ನು ಕಲಿತುಕೊಳ್ಳಬೇಕು. ಹಸುವಿನ ಹಾಲು ಮೊಸರಾಗುತ್ತೆ, ಮೊಸರು ಬೆಣ್ಣಿಯಾಗುತ್ತೆ, ಬೆಣ್ಣಿ ತುಪ್ಪವಾಗುತ್ತೆ. ಹಾಲು ಕ್ಷಣಕ್ಷಣಕ್ಕೂ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತ ಹೋಗುತ್ತೆದೆ. ಹಾಗೆ ನೀವು ಕೂಡ ಹಾಗೆ ನಿಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳಿ ಎಂದರು.ಅಧ್ಯಕ್ಷತೆ ವಹಿಸಿದ ಎಂ ಡಿ ಅಣ್ಣಯ್ಯ ಮಾತನಾಡಿ ಕಾಲ ಬರುತ್ತವೆ ಹೋಗುತ್ತವೆ. ಅದನ್ನು ಸ್ವೀಕರಿಸಿ ಮುಂದೆ ಹೋಗುವುದೆ ಜೀವನ. ಶೈಕ್ಷಣಿಕ ಅವಧಿಯಲ್ಲಿ ನೀವು ಕಲಿತ ಕಲಿಕೆಯ ಮೇಲೆ ನಿಮ್ಮ ಜೀವನ ನಿರ್ಧಾರವಾಗುತ್ತದೆ. ಕಂಪ್ಯೂಟರ್ ಯುಗದಲ್ಲಿ ಪದವಿ ಪ್ರಮಾಣ ಪತ್ರ ಉಪಯೋಗಕ್ಕೆ ಬರುವುದಿಲ್ಲ. ನಾವು ಕಲಿತ ಜ್ಞಾನದ ಕೌಶಲಗಳು ಉಪಯೋಗಕ್ಕೆ ಬರುತ್ತವೆ. ಅನುಭವದ ಶಿಕ್ಷಣಬೇಕು. ಅದರ ಆಧಾರದ ಮೇಲೆ ಜೀವನ ಕಟ್ಟಿಕೊಳ್ಳಬೇಕು. ಜೀವನಕ್ಕೆ ಅನುಭವ ದೊಡ್ಡದು. ಕೆಲಸ ಸಣ್ಣದಿರಲಿ, ದೊಡ್ಡದಿರಲಿ ನಿಷ್ಠೆಯಿಂದ ದುಡಿಯಬೇಕು.‌ಜೀವನದಲ್ಲಿ‌ ನಂಬಿಕೆ, ಪ್ರಯತ್ನ ಪರಿಶ್ರಮದಿಂದ ನಮ್ಮ ಭವಿಷ್ಯವನ್ನು ನಾವೆ ರೂಪಿಸಿಕೊಳ್ಳಬೇಕೆಂದರು.ವೇದಿಕೆ ಮೇಲೆ ಎಂ ಕಾಂ ವಿಭಾಗದ ಗುರುಮೂರ್ತಿ ನಾಯ್ಕ್ ಟಿ. ಗಣೇಶ ಬಿ,ಎಂ. ಮಮತ. ಎನ್.ಎಚ್. ಗೀತಾ ಪಾಟೇಲ ಹಾಗೂ ಪ್ರಥಮ ಹಾಗೂ ದ್ವಿತೀಯ ವರ್ಷದ ಎಂ ಕಾಂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಷಾ ಸ್ವಾಗತಿಸಿದರು. ಪೂಜಾ ವಂದಿಸಿದರು. ಚಂದನ ನಿರೂಪಿಸಿದರು.