ಕ್ರೀಡಾಕೂಟ: ವಿದ್ಯಾರ್ಥಿಗಳ ಸಾಧನೆಗೆ ಶುಭ ಹಾರೈಕೆ
ಚಿಂಚೋಳಿ,ಆ.25- ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ರಾಮಚಂದ್ರ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕರ ಕಬ್ಬಡ್ಡಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಕ್ರಮವಾಗಿ ಬಾಲಕಿಯರ ಥ್ರೊಬಾಲ್ ನಲ್ಲಿ ದ್ವಿತೀಯ ಸ್ಥಾನ ಮತ್ತು ವೈಯಕ್ತಿಕ ಆಟಗಳಾದ ಬಾಲಕರಿಗಾಗಿ 100 ಮೀಟರ್ ಓಟದಲ್ಲಿ ರೀತಿಕ್ ಪ್ರಥಮ ಸ್ಥಾನ ಅಷ್ಟೇ ಅಲ್ಲದೇ 200 ಮೀಟರ್ ಓಟದಲ್ಲಿಯೂ ಕೂಡ ದ್ವೀತಿಯ ಸ್ಥಾನ ಮತ್ತೆ 400ಮೀಟರ್ ಓಟದಲ್ಲೂ ಕೂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜಶೇಖರ ಮುಸ್ತರಿ ಇವರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕರಾದ ಶುಭುಲಿಂಗಯ್ಯ ಸ್ವಾಮಿ, ರಾಮಶೇಟ್ಟಿ ಮಾಡಗೋಳ್, ಧನಸಿಂಗ್ ಜಾಧವ್, ಬಾಲಾಜಿ ಪಾಟೀಲ್, ಯಲ್ಲಾಲಿಂಗ ದಂಡಿನ್, ಮತ್ತು ನಾಗರೇಡ್ಡಿ ಸೇರಿದಂತೆ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಶುಭಾಶಯಗಳನ್ನು ಕೋರಿ ಅಭಿನಂದಿಸಿದರು.