ವಿಜಯಪುರದಲ್ಲಿ ಸಂಜೆವಾಣಿ ವರದಿಗಾರರ ವಿಶೇಷ ಸಭೆ
ವಿಜಯಪುರ,ಆ.25: ನಗರದ ಹೋಟಲ್ ಬಸವ ರೆಸಿಡೆನ್ಸಿ ಅವರಣದಲ್ಲಿ ರವಿವಾರ ಸಂಜೆವಾಣಿ ದಿನಪತ್ರಿಕೆಯಿಂದ ಈ ವರ್ಷ ಹೊರ ತರಲಾಗುತ್ತಿರುವ ದೀಪಾವಳಿ ವಿಶೇಷ ಸಂಚಿಕೆಗಾಗಿ ವಿಜಯಪುರ ಜಿಲ್ಲಾ ಸಂಜೆವಾಣಿ ಪತ್ರಿಕೆಯ ಸರ್ವ ವರದಿಗಾರರ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಟಿ.ಗಣೇಶಕುಮಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೆಯ ಉಪ ಸಂಪಾದಕರು ಹಾಗೂ ಬೀದರ್ ಜಿಲ್ಲಾ ವರದಿಗಾರ ಶಿವಕುಮಾರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಪುರ ಜಿಲ್ಲಾ ವರದಿಗಾರ ರುದ್ರಪ್ಪ ಅಸಂಗಿ ಸ್ವಾಗತಿಸಿದರು. ಕಲಬುರಗಿ ಹಿರಿಯ ವರದಿಗಾರ ನಾಗರಾಜ ಹೂವಿನಳ್ಳಿ, ಜಾಹಿರಾತು ಎಕ್ಷಿಕ್ಯೂಟಿವ್ ಶರಣಪ್ಪ ಬೀಳಗಿ, ಮಹೇಶ ತಳಕೇರಿ, ಸಂಜೆವಾಣಿ ಯುಟ್ಯುಬ್ ವರದಿಗಾರ್ತಿ ಗಿರಿಜಾ ಕನಮಡಿ, ಪತ್ರಿಕೆಯ ವರದಿಗಾರರಾದ ಮಡಿವಾಳಪ್ಪ ತೋಟದ್, ಲಕ್ಷ್ಮಣ ಶಿಂಧೆ, ಅಬ್ದುಲ್ ಜಬ್ಬಾರ್ ಚಿಂಚಲಿ, ಜೈ ಭೀಮ ಶಿಂಧೆ, ನಾಗರಾಜ ಕುಂಬಾರ, ಮಹಾಂತೇಶ ಹಾದಿಮನಿ, ಸಿದ್ದಾರಾಮ ಬಿರಾದಾರ, ಕಲಬುರಗಿ ಸಿಬ್ಬಂದಿ ಕೆಂಪರಾಯ(ಆಕಾಶ) ಹಾಗೂ ಇತರರು ಸಭೆಯಲ್ಲಿ ಹಾಜರಿದ್ದರು.