ಬಹು ಉಪಯೋಗಿ ಬಿಲ್ವಪತ್ರೆ
ಕಲಬುರಗಿ,ಆ.25:ಭಾರತೀಯ ಸಂಸ್ಕøತಿಯಲ್ಲಿ ಬಿಲ್ವಕ್ಕೆ ಬಹು ವಿಶೇಷ ಸ್ಥಾನವಿದೆ. ಈ ಮರದ ಎಲೆ ಶಿವನ ಪೂಜೆಗೆ ಅತ್ಯಂತ ಯೋಗ್ಯವೆಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ. ಶ್ರಾವಣಮಾಸದಲ್ಲಿ ಬಿಲ್ವಪತ್ರೆಗೆ ಎಲ್ಲಿಲ್ಲದ ಮಹತ್ವ.
ಇದರ ಬೇರು ತೊಗಟೆ ಎಲೆ ಹೂ ಕಾಯಿಗಳಲ್ಲಿ ಔಷಧಿಯ ಗುಣಹೊಂದಿದೆ.
ಬಿಲ್ವ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೆ ಎರಡು ಭಾರಿ ಸೇವಿಸಿದರೆ ಬಾಯಿ ಹುಣ್ಣು ಕಡಿಮೆಯಾಗುವದು. ಬಿಲ್ವದ ಎಲೆಗಳನ್ನು ರಾತ್ತಿ ನೀರಿನಲ್ಲಿ ನೆನಸಿಟ್ಟು ಬೆಳಿಗ್ಗೆ ಆ ನೀರಿಂದ ಕಣ್ಣನ್ನು ತೊಳೆದರೆ ಕಣ್ಣಿನ ಉರಿ ತುರಿಕೆ ಶಮನವಾಗುವದು.ಬಿಲ್ವ ಹಣ್ಣಲ್ಲಿ ಕೊಲೆಸ್ಟ್ರಾಲ ಕಡಿಮೆ ಮಾಡುವ ಗುಣವಿದೆ. ಪ್ರತಿದಿನ ಅದರ ಸಿಹಿ ಪಾನಕ ಕುಡಿಯುವದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಪ್ರತಿ ದಿನ ಬಿಸಿ ನೀರಿನಲ್ಲಿ ಬಿಲ್ವದ ಎಲೆಗಳನ್ನು ಹಾಕಿ ಸ್ನಾನ ಮಾಡುವದರಿಂದ ಕಜ್ಜಿ, ತುರಿಕೆ ,ಮುಂತಾದ ಚರ್ಮರೋಗ ದೂರವಾಗುತ್ತದೆ. ಇದು ಮಾಹಿತಿಗೆ ಮಾತ್ರ. ಸೇವಿಸುವ ಮುನ್ನ ವೈದ್ಯರ ಸೂಕ್ತ ಮಾರ್ಗದರ್ಶನ ಅಗತ್ಯ.