ಹವಾಮಲ್ಲಿನಾಥ ಮಹಾರಾಜರ ಜನ್ಮ ದಿನೋತ್ಸವ ನಾಳೆ
ಕಲಬುರಗಿ,ಆ 25: ನವದೆಹಲಿಯ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಪೂಜ್ಯ ಹವಾ ಮಲ್ಲಿನಾಥ ವiಹಾರಾಜ ನಿರಗುಡಿ ಅವರ 57 ನೇ ಜನ್ಮ ದಿನೋತ್ಸವ ನಾಳೆ ( ಆ. 26 ) ದೇಶದ ಸರ್ವ ಧರ್ಮದ ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಲಿದ್ದಾರೆ. ಈ ಪ್ರಯುಕ್ತ ನಾಳೆ ( ಆ. 26 ) ಸಮಿತಿ ಹಾಗೂ ಭಕ್ತರ ವತಿಯಿಂದ ಬೆಳಿಗ್ಗೆ 7 ಗಂಟೆಗೆ ಮಾಧವ ಗೋಶಾಲೆಯಲ್ಲಿ ಗೋ ಪೂಜೆ ನೆರವೇರಿಸಿ ಗೋವುಗಳಿಗೆ ಮೇವು ವಿತರಿಸಿ ನಂತರ ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಶ್ರೀ ಕೃಷ್ಣಜನ್ಮಾಷ್ಟಮಿ, ಶ್ರಾವಣ ಸೋಮವಾರ ಹಾಗೂ ಹವಾ ಮಲ್ಲಿನಾಥರ ಜನ್ಮಾಷ್ಟಮಿ ಪ್ರಯುಕ್ತ ನಿರಂತರ ಅನ್ನದಾಸೋಹ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸತ್ಕಾರ ಸಮಾರಂಭ ಆಯೋಜಿಸಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ. ದ್ರಾಕ್ಷಾಯಣಿ ಅಮ್ಮನವರು ಮಾಡಲಿದ್ದಾರೆ.ಅತಿಥಿಗಳಾಗಿ ಶಾಸಕ ಅಲ್ಲಮಪ್ರಭು ಪಾಟೀಲ,ಬಸವರಾಜ ಮತ್ತಿಮುಡ ,ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವೀರಶೈವ ಸಮಾಜದ ಮುಖಂಡ ಅರುಣಕುಮಾರ ಪಾಟೀಲ ಕೊಡಲಹಂಗರಗಾ, ಸೇವಾ ಭಾರತಿ ಸಂಸ್ಥೆಯ ಕರ್ನಾಟಕ ಉತ್ತರ ಪ್ರಾಂತದ ಮುಖ್ಯಸ್ಥ ರಮೇಶ ತಿಪನೂರ ಸೇರಿದಂತೆ ಹಾಲಿಮಾಜಿ ಜನಪ್ರತಿನಿಧಿಗಳು ಆಗಮಿಸಲಿದ್ದು ಈ ಕಾರ್ಯಕ್ರಮಕ್ಕೆ ದೇಶಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಮಿತಿ ವತಿಯಿಂದ ಕೋರಲಾಗಿದೆ ಎಂದು ಸಮಿತಿಯ ವಕ್ತಾರರಾದ ವೈಜನಾಥ ಎಸ್ ಝಳಕಿ ತಿಳಿಸಿದ್ದಾರೆ.