ಮಹಿಳಾ ಅಧಿಕಾರಿಗೆ ಕಿರುಕುಳ,ಕಲಬುರಗಿ ಸಿಇಓ ಜಾಣ ಮೌನ..?
ಮಡಿವಾಳಪ್ಪ ಟಿ ಯತ್ನಾಳ
ಯಡ್ರಾಮಿ:ಆ.25: ಅಕ್ಷರ ದಾಸೋಹ ಇಲಾಖೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ನೀಡಿ,ಮಕ್ಕಳಿಗೆ ಅಕ್ಷರ ಕಲಿಕೆಗೆ ನಾಂದಿ ಹಾಡಲು ಸರ್ಕಾರ ಕೋಟ್ಯಂತರ ರುಪಾಯಿಗಳು ಖರ್ಚು ಮಾಡುತ್ತಿದೆ.ಆ ಇಲಾಖೆಗೆ ಇಬ್ಬರು ಅಯೋಗ್ಯರು ಯಾರದೋ ದುಡ್ಡು ಯಲ್ಲಮ್ಮಳ ಜಾತ್ರೆ ಮಾಡುತ್ತಿದ್ದಾರೆ.ಅಲ್ಲದೇ ಅಲ್ಲಿನ ಮಹಿಳಾ ಮೇಲಾಧಿಕಾರಿಗೆ ಮಾನಸಿಕ ಕಿರುಕುಳ ಎಗ್ಗಿಲ್ಲದೆ ನಿತ್ಯ ನಿರಂತರ ನಡೆಯುತ್ತಿದೆ ಎಂಬ ಗಂಭೀರ ಆರೋಪವಿದೆ.
ಹೌದು ಇದು ಎಲ್ಲಿ ಅಂತೀರಾ.ಅದುವೇ ಮಾಜಿ ಮುಖ್ಯಮಂತ್ರಿ ದಿ.ಎನ್ ಧರ್ಮಸಿಂಗ್ ಹಾಗೂ ಪ್ರಸ್ತುತ ಕೆಕೆ ಆರ್ ಡಿಬಿ ಅಧ್ಯಕ್ಷ ಮತ್ತು ಶಾಸಕರಾದ ಡಾ.ಅಜಯ್ ಧರ್ಮಸಿಂಗ್ ರವರ ತವರು ಕ್ಷೇತ್ರದಲ್ಲಿ.
ಬರೋಬ್ಬರಿ 22 ವರ್ಷಗಳಿಂದ ಠಿಕಾಣಿ..!
ಯಾರು ಸಹ ಹೌಹಾರಬೇಡಿ.ಇಲ್ಲೋಬ್ಬ ಕಂಪ್ಯೂಟರ್ ಆಪರೇಟರ್ ಬರೋಬ್ಬರಿ 22ವರ್ಷಗಳಿಂದ ಅಕ್ಷರ ದಾಸೋಹದಲ್ಲಿ ಜಬರ್ದಸ್ತ್ ಆಗಿ ಗೂಟ ಜಡಿದು ಕುಂತಿದ್ದಾನೆ.ಅವರೇ,ಮಂಜುನಾಥ ರೆಡ್ಡಿ.ಒಂದೇ ಇಲಾಖೆ ಹಾಗೂ ಜೇವರ್ಗಿ ಕಛೇರಿಯಲ್ಲೆ ಕಾರ್ಯನಿರ್ವಹಿಸುತ್ತಿದ್ದಾನೆ ಅಂದರೆ, ಇವರ ಹಿಂದೆ ಕಣದ ಕೈ ಇರಬಹುದು ಅಲ್ವಾ..? ಇತನಿಗೆ ತನ್ನ ಮೇಲೆ ಮೇಲಾಧಿಕಾರಿಗಳು ಇದ್ದಾರೆ ಎಂಬುವುದು ಸಾಮಾನ್ಯ ಪರಿಜ್ಞಾನ ಇಲ್ಲ ಎಂಬಂತೆ ವರ್ತಿಸುತ್ತಾನಂತೆ.ಅಂದಾಗ ಇವರ ಕಾರ್ಯ ವೈಖರಿಗಳು ಹೇಗೆ ಇರಬಹುದು ಊಹಿಸಿ.
ಯಾರದ್ದೋ ದುಡ್ಡು,ಇನ್ಯಾರಿಗೋ ಜಮಾ..?
ಬಪ್ಪರೇ,ಮಂಜುನಾಥ. ನಿನ್ನ ಮಹಿಮೆ ಏಳೆ ಏಳೆಯಾಗಿ ಬಿಚ್ಚಿಡುವ ಸಂದರ್ಭ ಬಂದಾಯಿತು ಅನಿಸುತ್ತೆ.ಅದು ಮಂಜುನಾಥನ ಮಹಿಮೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಬರೆಯೋಣ. ಅಕ್ಷರ ದಾಸೋಹದ ಹಣ ಅಂದಾಜು ನಾಲ್ಕೈದು ಲಕ್ಷ ರೂಪಾಯಿಗಳು ಯಾವ ಶಾಲೆ ಅಥವಾ ಬಿಸಿಯೂಟದ ಸಿಬ್ಬಂದಿಗಳಿಗೆ ಸಿಗಬೇಕಾಗಿತ್ತೋ ಅವರ ಖಾತೆ ಜಮೆ ಮಾಡಲ್ಲ.ಇನ್ಯಾರೋ ಆಧಾರ ಕಾರ್ಡ್ ಪಡೆದು ಇನ್ಯಾರದೋ ಖಾತೆಗೆ ಹಣ ಜಮೆ ಮಾಡುತ್ತಿದ್ದಾನೆ ಅಂತೆ.ಇದಕ್ಕೆ ತಾಜಾ ಉದಹರಣೆಯೆ ವಸ್ತಾರಿ ಶಾಲೆ,ಜನಿವಾರ,ಕೊಣ್ಣೂರ ಹೀಗೆ ಇತ್ಯಾದಿ ಶಾಲೆಗಳು.
ಸಾಲಿಮಠಗೆ, ಇಲ್ಲ ಮಹಿಳಾ ಮೇಲಾಧಿಕಾರಿ ಎಂಬ ಗೌರವ..!
ಹೌದು. ಗುರುಪಾದಯ್ಯ ಸಾಲಿಮಠ ಎಂಬ ಪ್ರಥಮ ದರ್ಜೆ ಸಹಾಯಕ.ಇತನಿಗೆ ಕಂಪ್ಯೂಟರ್ ಜ್ಞಾನ ಅಂತು ಇಲ್ವೇ ಇಲ್ಲ.ಇರಲಿ ತನ್ನ ಮೇಲೆ ಮಹಿಳಾ ಮೇಲಾಧಿಕಾರಿಗಳು ಇದ್ದಾರೆ ಎಂಬ ಗೌರವ ಸಹ ಇಲ್ಲ.ಮಾತು ಮಾತಿಗೂ ಏಕ ವಚನ ಪದ ಪುಂಜಗಳೇ ಅವರ ಮಾತಿನಲ್ಲಿ. ಅಲ್ಲ ಸ್ವಾಮಿ. ತಮಗೆ ಸಂಸ್ಕಾರ, ಸಂಸ್ಕøತಿ ಗೊತ್ತಿಲ್ಲವಾ..? ತಮಗೆ ಮೇಲಾಧಿಕಾರಿಗಳಿಂದ ಕಿರುಕುಳ ಇದ್ದರೇ,ಸಂಭಂದಿಸಿದ ಅಧಿಕಾರಿಗಳಿಗೆ ದೂರು ನೀಡಿ.ಅದನ್ನು ಬಿಟ್ಟು ಮೂರು ಬಿಟ್ಟವರಂತೆ ವರ್ತಿಸುವುದು ಸರಿ ಉಂಟೆ. ಯಾರು ಹೇಗೆ ಇದ್ದಾರೆ ಎಂಬುವುದು ಜೇವರ್ಗಿ ಜನತೆಗೆ ಎಲ್ಲಾ ಗೊತ್ತು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ ಜಾಣ ಮೌನ ತರವಲ್ಲ..?
ಹೌದು. ಜಿಲ್ಲಾ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕಲಬುರಗಿ ರವರಿಗೆ,ಅಕ್ಷರ ದಾಸೋಹದ ಜೇವರ್ಗಿ ಸಹಾಯಕ ನಿರ್ದೇಶಕಿ ಮಹಾದೇವಿ ಶಿವಸಿಂಪಿರವರು ಕಳೆದ ವರ್ಷ 11ಡಿಸೆಂಬರ್ 2023ರಂದು ದೂರು ನೀಡಿದರು. ಇಲ್ಲಿಯವರೆಗೆ ನಾಮಕಾವಸ್ತೆ ಸಹ ವಿಚಾರಣೆ ಮಾಡದೆ ಇರೋದು ಸರಿಯೇ.? ಮಹಿಳಾ ಅಧಿಕಾರಿಗಳು ಯಾವುದೇ ಇಲಾಖೆಗಳಲ್ಲಿ ಮೇಲಾಧಿಕಾರಿಯಾಗಿ ಇರಬಾರದೆ.ಯಾಕೆ ಈ ಜಾಣ ಮೌನ.ಈ ಕೂಡಲೇ ತನಿಖೆಗೆ ಒಳಪಡಿಸಿ, ಸತ್ಯಾ ಸತ್ಯತೆ ತಿಳಿಯಲಿ.
ತನಿಖೆಯಾಗಲಿ.ಶಿಕ್ಷೆಯಾಗಲಿ ತಪ್ಪಿಸ್ಥರಿಗೆ..!
ನನಗೆ ಮಾನಸಿಕ ಕಿರುಕುಳ ನಿತ್ಯ ನಿರಂತರ
ನನಗೆ ಸರಿಯಾಗಿ ಕೆಲಸ ನಿರ್ವಹಿಸಲು ಬಿಡುವುದಿಲ್ಲ. ನಿತ್ಯ ನಿರಂತರ ಎಂಬಂತೆ ಮಾನಸಿಕ ಯಾತನೆ ಅನುಭವಿಸುತ್ತಿರುವೆ.ತಪ್ಪು ನನ್ನದು ಇದ್ದರೆ,ನಾನು ಶಿಕ್ಷೆಯನ್ನು ಸ್ವೀಕರಿಸುವೆ. ಹಾಗಾಗಿ ಸಂಭಂದಿಸಿದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಹಲವು ವಿಷಯಗಳ ಕುರಿತು ದೂರು ನೀಡಿರುವೆ.ನನಗೆ ನ್ಯಾಯ ಸಿಗಲಿ.
ನನಗೆ ದೂರು ಬಂದರೇ,ಸೂಕ್ತ ತನಿಖೆ
ಸಮಸ್ಯೆ ಸುಳಿಯಲ್ಲಿ ಮಹಿಳಾ ಅಧಿಕಾರಿ ಇರಲಿ ಅಥವಾ ಸಾಮಾನ್ಯ ಮಹಿಳೆ ಇರಲಿ.ಮಹಿಳಾ ಆಯೋಗದ ಗಮನಕ್ಕೆ ದೂರು ಬಂದರೆ,ಖಂಡಿತ ಕ್ರಮ ಕೈಗೊಳ್ಳುವೆ.ಹಾಗೂ ತನಿಖೆಗೆ ಸಂಭಂದಿಸಿದ ಅಧಿಕಾರಿಗಳಿಗೆ ಸೂಚಿಸುವೆ.
===ಡಾ ನಾಗಲಕ್ಷ್ಮೀ ಚೌಧರಿ
ಅಧ್ಯಕ್ಷರು,ರಾಜ್ಯ ಮಹಿಳಾ ಆಯೋಗ