ಮಮದಾಪೂರದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ
ವಿಜಯಪುರ,ಆ.25: ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಮಮದಾಪೂರ ಗ್ರಾಮದ ಕರ್ನಟಕ ಪಬ್ಲಿಕ್ ಶಾಲೆಯ ಎಸ್.ಸಿ.ವ್ಹಿ ರಾಮನ್ ವಿಜ್ಞಾನ ಸಂಘದಡಿಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಯಿತು.
ಚಂದ್ರಯಾನ 3 ಮಿಷನ್‍ನ ಸಾಧನೆಯ ಹಿನ್ನಲೆಯಲ್ಲಿ ಪ್ರಥಮವಾಗಿ ದೇಶಾದ್ಯಂತ ಈ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಶಾಲೆಯಲ್ಲಿ ಬೆಳಗಿನ ಅವಧಿಯಲ್ಲಿ ಮಕ್ಕಳು ರಾಕೆಟ್ ಮಾದರಿಯಲ್ಲಿ ನಿಲ್ಲುವ ಮೂಲಕ ಗಮನಸೆಳೆದರು. ಇದು ಮಕ್ಕಳಿಗೆ ರಾಕೆಟ್‍ನÀ ಬಿಡಿಭಾಗಗÀಳ ಪರಿಚಯಾತ್ಮಕ ಕಾರ್ಯಕ್ರಮವಾಯಿತು. ಮಕ್ಕಳಿಗೆ ಚಂದ್ರಯಾನ ಉಡಾವಣೆಯ ವಿಡಿಯೋ ಚಿತ್ರೀಕರಣವನ್ನು ಪ್ರದರ್ಶಿಸಲಾಯಿತು. ಮಕ್ಕಳಿಗೆ ಚಿತ್ರಕಲಾ ಮತ್ತು ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಮುಖ್ಯ ಶಿಕ್ಷಕರು ರಾಜ್ಯ ಪ್ರಶಸ್ತಿ ಪುರಸ್ಕøತ ವಿಜ್ಞಾನ ಶಿಕ್ಷಕ ಎಸ್.ವ್ಹಿ. ಬುರ್ಲಿ ಅವರು ಮಕ್ಕಳಿಗೆ ಬಾಹ್ಯಾಕಾಶದ ತಂತ್ರಜ್ಞಾನದ ಬಗ್ಗೆ ಅದರ ಅನ್ವಯಗಳ ಬಗ್ಗೆ ಮತ್ತು ಭವಿಷ್ಯದಲ್ಲಿ ಬಾಹ್ಯಾಕಾಶ ರಂಗದಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಬಹಳ ಮಾರ್ಮಿಕವಾಗಿ ತಿಳಿಸಿಕೊಟ್ಟರು.
ಸಂಘದ ಸಂಚಾಲಕಿ ಎಸ್.ವ್ಹಿ. ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲೆಯ ಉಪಪ್ರಾಚಾರ್ಯ ಆರ್.ಎಚ್. ಪುರೋಹಿತ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದುಮತಿ ಪೊಲೀಸ್‍ಪಾಟೀಲ ಸ್ವಾಗತಿಸಿದರು. ಮಹಾಂತೇಶ ಕುರಿ ನಿರೂಪಿಸಿದರು. ಚಿತ್ರಕಲಾ ವಿಭಾಗದ ಮುಖ್ಯಸ್ಥ ರಸೀದ ಖಾನ ವೇದಿಕೆ ಮೇಲಿದ್ದರು.
ಎಲ್ಲ ಶಿಕ್ಷಕರು ಮತ್ತು ಮಕ್ಕಳು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.