ಬೆಳೆ ನಿರ್ವಹಣೆ ಕಾರ್ಯಕ್ರಮ
ನವಲಗುಂದ,ಆ25 : ತಾಲ್ಲೂಕಿನ ಬೆಳವಟಗಿ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಬೆಳವಟಗಿ ಮತ್ತು ಐಸಿಎಆರ್.ಕೆ.ಎಚ್ ಪಾಟೀಲ್, ಕೆವಿಕೆ ಹುಲಕೋಟಿ, ಕೃಷಿ ಇಲಾಖೆ ನವಲಗುಂದ, ನರಗುಂದ ಸಂಜೀವಿನಿ ತಾಲ್ಲೂಕಾ ಅಭಿಯಾನ ನಿರ್ವಹಣಾ ಘಟಕ ಹಾಗೂ ತಾಲ್ಲೂಕಾ ಪಂಚಾಯತಿ ಇವರ ಸಂಯುಕ್ತಾಶ್ರಯದಲ್ಲಿ ಬೇಳೆಕಾಳು ಬೆಳೆಗಳ ಸಮಗ್ರ ಬೆಳೆ ನಿರ್ವಹಣೆ ಹಾಗೂ ಕೊಯ್ಲೂತ್ತರ ತಾಂತ್ರಿಕತೆ ಕುರಿತು ರೈತರ ಹಾಗೂ ವಿಜ್ಞಾನಿಗಳ ಜೊತೆ ಚರ್ಚಾಕಾರ್ಯಕ್ರಮವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಬಿ.ಡಿ.ಬಿರಾದಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿ ಅವರು ದೇಶದಲ್ಲಿ ಬೆಳೆಕಾಳುಗಳಲ್ಲಿ ಕೃಷಿ ಪ್ರಗತಿ ಹೊಂದಬೇಕಾಗಿದೆ, ಬೇಳೆಕಾಳು ಬೆಳೆಗಳ ಬೆಳೆಯುವುದರಿಂದ ವಾತಾವರಣದಲ್ಲಿನ ಸಾರಜನಕ ಹೀರಿಕೊಂಡು ಭೂಮಿಗೆ ಫಲವತ್ತತ್ತೆ ಹೆಚ್ಚುಸುವುದರ ಜೊತೆಗೆ ಮಾನವನ ಆರೋಗ್ಯ ಜೊತೆಗೆ ಭೂಮಿ ಆರೋಗ್ಯ ಕಾಪಾಡುವುಲ್ಲಿ ಪ್ರಮುಖ ಪಾತ್ರವಹಿಸುತ್ತೇವೆ ಎಂದರು.

ದೇಶದಲ್ಲಿ ಬೇಳೆಕಾಳು ಬೆಳೆಗಳ ಉತ್ಪನ್ನ ಕಡಿಮೆಯಾಗಿದ್ದು, ಮುಖ್ಯ ಕಾರಣ ರೋಗಭೀತಿ ಹೆಚ್ಚಾಗಿದ್ದು ಪರಿಹಾರಕ್ಕೆ ಕೃಷಿ ವಿಜ್ಞಾನಿಗಳು ಸಂಪರ್ಕಸಿ ಮಾಹಿತಿ ಪಡೆದು ಪರಿಹಾರ ಕೊಂಡುಕೊಳ್ಳಿ.

ರೈತರು ಭೂಮಿಗೆ ಬೀಜ ಬಿತ್ತನೆ ಮಾಡುವು ಮೊದಲು ಪೂರ್ವಯೋಜನೆ ಮಾಡಿಕೊಂಡು ಬೀಜ, ಗೊಬ್ಬರ ತಯಾರಿ ಮಾಡಿಕೊಳ್ಳಿ ಬಿತ್ತನೆ ಮಾಡಿ, ಹೂವು ಆಗುವು ವೇಳೆಯಲ್ಲಿ ಔಷದಿ ಸಿಂಪರಣೆ ಮಾಡಬೇಡಿ,ಕೃಷಿ ವಿಶ್ವವಿದ್ಯಾಲಯದಿಂದ ರೇಡಿಯೋ ಕಾರ್ಯಕ್ರಮ ನಡೆಯುತ್ತಿದೆ ಕೇಳಿ, ಹಾಗೂ ಕೃಷಿ ಅಧಿಕಾರಿಗಳ ಸಲಹೆಗಳನ್ನ ಪಡೆಯರಿ ಎಂದರು.

ವಿಜಯಪುರ ಪ್ರಾ,ಕೃ,ಸಂ ಸಹ ಸಂಶೋಧನಾ ನಿರ್ದೇಶಕರಾದ ಡಾ. ಅಶೋಕ ಸಜ್ಜನ ಅಧ್ಯಕ್ಷತೆ ವಹಿಸಿ ಮಾತನಾಡಿದವರು. ದ್ವಿದಳದಾನ್ಯ ಬೆಳೆಯವುದರಿಂದ ಕಳೆ, ಕೀಟ ತೊಂದರೆ ಕಡಿಮೆ ಆಗುತ್ತೆ ಹಾಗೇ ಕೃಷಿಯಲ್ಲಿ ತಾಂತ್ರಿಕ ಜೊತೆಗೆ ಭೂಮಿ ನಿರ್ವಹಣೆ ಕೌಶಲ್ಯ ಬೆಳೆಸಿಕೊಳ್ಳಿ ಮತ್ತು ರೈತರಿಗೆ ಸರ್ಕಾರ ನೀಡುವು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಬೆಳವಟಗಿ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕ ಡಾ. ಸಿ.ಎಂ.ರಫಿ ಮಾತನಾಡಿ ಬೆಳೆಕಾಳು ಬೆಳೆಗಳ ಸಮಗ್ರ ಬೆಳೆ ನಿರ್ವಹಣೆ ಚರ್ಚಾಕಾರ್ಯಕ್ರಮದಲ್ಲಿ ರೈತರು ಹಾಗೂ ರೈತಮಹಿಳೆಯರು ಕಾರ್ಯಕ್ರಮಕ್ಕೆ ಹೆಚ್ಚು ಭಾಗಿಯಾಗಿದ್ದು ಕೃಷಿಯಲ್ಲಿ ಪ್ರಗತಿ ಕಾಣಬಹುದಾಗಿದೆ ಎಂದರು.

ಈ ವೇಳೆಯಲ್ಲಿ ಡಾ. ಎಸ್ ಎ ಗದ್ದನಕೇರಿ, ಡಾ. ಬಿ.ಎನ್. ಮೊಟಗಿ, ಡಾ. ಸಂಗಶೆಟ್ಟಿ ಭಾಲ್ಕುಂದೆ, ಶಿವಶಂಕರ ಹೋಟ್ಕರ ಹಾಗೂ ರೈತ ಮುಖಂಡರಾದ ಶಂಕ್ರಪ್ಪ ಅಂಬಲಿ, ಸುಭಾಸಗೌಡ ಪಾಟೀಲ, ಮಂಜುನಾಥ ಜಾನಮಟ್ಟಿ, ವಿಷ್ಣು ದ್ಯಾವನೂರ, ಶಿವು ದಿಡ್ಡಿ ಮತ್ತು ರೈತರು, ರೈತಮಹಿಳೆಯರು ಹಾಜರಿದ್ದರು.