ವೇಷಭೂಷಣ ಸ್ಪರ್ಧೆ
ಮುಂಡಗೋಡ,ಆ25: ನವಚೇತನ ಯುವಕ ಮಂಡಳ ಟ್ರಸ್ಟ್(ರಿ) ಗಾಂಧಿನಗರ ಮುಂಡಗೋಡ ಇವರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಬಾಲಕೃಷ್ಣನ ವೇಷ ಭೂಷಣ ಸ್ಪರ್ಧೆ ಹಾಗೂ ಯಶೋಧಾ ಮಯ್ಯಾ ರೂಪಕ ಸ್ಪರ್ಧೆಯು ಜರುಗಿತು.

ಬಾಲಕೃಷ್ಣ ವೇಶ ಭೂಷಣ ಸ್ಪರ್ಧೆಯ ಕಿರಿಯ ವಿಭಾಗದಲ್ಲಿ 32, ಹಿರಿಯರ ವಿಭಾಗದಲ್ಲಿ 32 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಯಶೋಧಾ ಮಾಯ್ಯಾ ರೂಪಕ ಸ್ಪರ್ಧೆಗೆ 3 ಸ್ಪರ್ಧಾಳುಗಳು ಭಾಗವಹಿಸಿದ್ದರು.

ಬಾಲಕೃಷ್ಣ ವೇಶಭೂಷಣ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಆದ್ಯಾ ರಾಘವೇಂದ್ರ ರಾಯ್ಕg, ದ್ವೀತಿಯ ಬಹುಮಾನವನ್ನು ತ್ರಿಷಾ ರಾಜು ಇಂಗಳೆ, ತೃತೀಯ ಬಹುಮಾನವನ್ನು ಸಾತ್ವಿಕಾ ರಾಜೇಶ ನಿಡಗುಂದಿ ಪಡೆದುಕೊಂಡರು.

ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಧನ್ವಿ.ವಾಯ್.ಭುಜಂಗಿ, ದ್ವೀತಿಯ ಬಹುಮಾನವನ್ನು ಅಮೂಲ್ಯ ನಾರಾಯಣ ದೌವಜ್ಞ, ತೃತೀಯ ಬಹುಮಾನವನ್ನು ಅಜಯಸೂರ್ಯ.ಎ.ಕೆ, ಪಡೆದುಕೊಂಡರು.

ಯಶೋಧಾ ಮಯ್ಯಾ ರೂಪಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪೂಜಾ, ತಾಯಿ-ರಿಶಿತ ರಾಂಪುರೆ, ದ್ವೀತಿಯ ಬಹುಮಾನವನ್ನು ವೃಷ್ಥಿ, ತಾಯಿ- ಅರುಣಾ ಪಿ.ಕೆ, ತೃತೀಯ ಬಹುಮಾನವನ್ನು ಭುವ£, ತಾಯಿ-ಶ್ವೇತಾ.ಎನ್.ಮಡಿವಾಳರ, ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ವಿನಾಯಕ ಶೇಟ್, ದಯಾನಂದ ನಾಯ್ಕ, ವಿದ್ಯಾ ಸಣ್ಣಕ್ಕಿ, ಶಶಿಕಾಂತ ರಾಠೋಡ, ಪಾಂಡುರಂಗ ಟಿಕ್ಕೋಜಿ, ಕವಿತಾ ಚೌಹಾಣ ಸ್ಪರ್ಧೆಯ ನಿರ್ಣಾಯಕರಾಗಿದ್ದರು.

ಮಹೇಶ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಟ್ರಸ್ಟ್‍ನ ಅಧ್ಯಕ್ಷ ಮಾರುತಿ ಓಂಕಾರ ಅಧ್ಯಕ್ಷತೆ ವಹಿಸಿದ್ದರು, ಎಮ್.ಕೆ.ಗಡಲಾಲೆ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದ ವ್ಯವಸ್ಥಾಪಕರಾದ ಡಾ.ಕಿರಣ ಹೂಲಗೂರ, ಅಗರವಾಲ್.ಐ.ಕೇರ್ ವ್ಯಪಸ್ಥಾಪಕರಾದ ಪ್ರತಾಪ. ಶ್ರೀಧರ ಛಬ್ಬಿ, ಸತೀಶ ಹರಿಹರ, ಮಂಜುನಾಥ ಕುಲಮಕರ. ಜಗದೀಶ ವಾಲಿಶೆಟ್ಟರ, ಉಪಸ್ಥೀತರಿದ್ದರು. ಪ್ರಾರಂಭದಲ್ಲಿ ಪ್ರಾಥನೆ ಗೀತೆಯನ್ನು ಅದಿತಿ ಕಾನಡೆ ಹಾಡಿದರು. ಟ್ರಸ್ಟ್‍ನ ಸದಸ್ಯ ಜಗದೀಶ ಕಾನಡೆ ಸ್ವಾಗತಿಸಿದರು. ದಿನೇಶ ವೆರ್ಣೇಕರ ನಿರೂಪಿಸಿದರು. ಮಂಜುನಾಥ.ಎಚ್.ಕಲಾಲ ವಂದಿಸಿದರು.