ಮಹಿಳಾ ವಿವಿಯಲ್ಲಿ ಮೊಬೈಲ್ ಫೋಟೊ ಸ್ಪರ್ಧೆ
ವಿಜಯಪುರ,ಆ.25:ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಛಾಯಾಚಿತ್ರ ದಿನದ ಅಂಗವಾಗಿ ವಿವಿಯ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗಾಗಿ ಮೊಬೈಲ್ ಫೋಟೋ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಸರ್ಧೆಯಲ್ಲಿ ಭಾಗವಹಿಸುವ ಮೂಲಕ ಪ್ರಥಮ ಬಹುಮಾನವನ್ನು ಎಮ್.ಸಿ.ಎ ವಿಭಾಗದ ರೋಶನಿ ಶಹಾಬಾದಿ ಪಡೆದುಕೊಂಡಿದ್ದು, ಎರಡನೆಯ ಬಹುಮಾನ ಬಿ.ಸಿ.ಎ ವಿಭಾಗದ ವೈಶಾಲಿ ವಾಗ್ಮಾರೆ, ತೃತೀಯ ಬಹುಮಾನ ವಾಣಿಜ್ಯಶಾಸ್ತ್ರ ವಿಭಾಗದ ರೂಪಾ ಘಾಟಗೆ ಹಾಗೂ ಸಮಾಧಾನಕರ ಬಹುಮಾನ ತಬಸುಮ್ ಇಬ್ರಾಹಿಂ ಸುರೆಗೋಳ್ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ರೇಣುಕಾ ಕೇಶಗೊಂಡ ಪಡೆದುಕೊಂಡಿದ್ದಾರೆ.
ತೀರ್ಪುಗಾರರಾಗಿ ಬೆಂಗಳೂರಿನ ಪತ್ರಕರ್ತ ಧೀರಜ್ ಪೊಯ್ಯೆಕಂಡ, ಬಾಗಲಕೋಟೆಯ ಛಾಯಾಗ್ರಾಹಕ ಇಂದ್ರಕುಮಾರ್ ದಸ್ತೇನವರ್ ಹಾಗೂ ವಿಜಯಪುರದ ಸಿನಿಮಾಟೋಗ್ರಾಫರ್ ಸುನೀಲಕುಮಾರ ಸುಧಾಕರ ಭಾಗವಹಿಸಿದ್ದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ, ಸಹಾಯಕ ಪ್ರಾಧ್ಯಾಪಕರಾದ ಡಾ.ತಹಮೀನಾ ನಿಗಾರ ಸುಲ್ತಾನ ಮತ್ತು ಸಂದೀಪ ನಾಯಕ್ ಅವರು ವಿಜೇತರನ್ನು ಅಭಿನಂದಿಸಿದ್ದಾರೆ.