ಶಾಂತಿ ಸಭೆ
ಲಕ್ಷ್ಮೇಶ್ವರ,ಆ25: ಪಟ್ಟಣದ ತಾಲೂಕ ಪಂಚಾಯಿತಿ ಸಭಾಭವನದಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಅಂಗವಾಗಿ ಶಾಂತಿ ಸಭೆಯನ್ನು ಕರೆಯಲಾಗಿತ್ತು.
ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರು ಲಕ್ಷ್ಮೇಶ್ವರವನ್ನು ಒಂದು ಮಾದರಿಯ ನಗರವನ್ನಾಗಿ ಮಾಡಲು ತಾವು ಸಹ ಕನಸು ಕಂಡಿದ್ದು ಅದು ನನಸಾಗಲು ಎಲ್ಲ ಇಲಾಖೆಗಳ ಅಧಿಕಾರಿಗಳು ಕೈಜೋಡಿಸಬೇಕು ಎಂದರು.
ಅವರು ಗಣೇಶ್ ಚತುರ್ಥಿ ಮತ್ತು ಈದ್ ಮಿಲಾದ್ ಕುರಿತು ಪಟ್ಟಣದಲ್ಲಿ 30 ರಿಂದ 40 ಕಡೆ ಗಣಪತಿ ಪ್ರತಿಷ್ಠಾಪನೆ ಆಗುತ್ತಿದ್ದು ಎಲ್ಲರೂ ಸೇರಿ ಮಹಾಮಂಡಳದ ರಚನೆ ಮಾಡಿಕೊಂಡು ಒಂದೇ ಗಣಪನನ್ನು ಪ್ರತಿಷ್ಠಾಪಿಸುವ ಬಗ್ಗೆ ಚಿಂತನೆ ಮಾಡಬೇಕು ಎಂದರು.
ಗಣೇಶೋತ್ಸವ ಸಂದರ್ಭದಲ್ಲಿ ಮೆರವಣಿಗೆಗೆ ಕರ್ಕಶವಾದ ಡಿಜೆ ಬಳಸುವುದಕ್ಕಿಂತ ಬದಲು ಸಾಂಪ್ರದಾಯಿಕ ಡೊಳ್ಳು ಕುಣಿತ ವೀರಗಾಸೆ ನೃತ್ಯ ಕೋಲಾಟ ಮತ್ತಿತರ ಜಾನಪದ ಕಲಾವಿದರನ್ನು ಕರೆಸಿ, ನಮ್ಮ ಸಾಂಸ್ಕೃತಿ ಪರಂಪರೆಯನ್ನು ಉಳಿಸಲು ಯುವಕರು ನಿರ್ಧಾರ ಮಾಡಬೇಕು ಎಂದರು ಮೆರವಣಿಗೆಯ ಸಂದರ್ಭದಲ್ಲಿ ಪೊಲೀಸರು ನೀಡಿದ ಮಾರ್ಗಸೂಚಿಗಳನ್ನು ಬದಲಾಯಿಸಲು ಪ್ರಯತ್ನ ಪಟ್ಟರೆ ಮತ್ತು ಶಾಂತಿ ಸುವ್ಯವಸ್ಥೆಗೆ ಭಂಗವಾದರೆ ಇಲಾಖೆ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ.
ಗಣೇಶ್ ಪ್ರತಿಷ್ಠಾಪನೆಯ ಮಂಟಪದಲ್ಲಿ ಕಾನೂನುಬಾಹಿರವಾಗಿ ಇಸ್ಪೀಟು ಮತ್ತಿತರ ಚಟುವಟಿಕೆಗಳನ್ನು ಕೈಗೊಂಡರೆ ಕಾನೂನು ಕ್ರಮ ಅನಿವಾರ್ಯ ಎಂದರು ಹಬ್ಬಗಳು ಪರಸ್ಪರ ಶಾಂತಿ ಸೌಹಾರ್ದತೆ ಸಂಕೇತವಾಗಿವೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಂಬಿ ಸಂಕದ ಸೇರಿದಂತೆ ತಹಸಿಲ್ದಾರ್ ವಾಸುದೇವ್ ವಿ ಸ್ವಾಮಿ ಧರ್ಮ ರ ಕೃಷ್ಣಪ್ಪ ಮುಖ್ಯ ಅಧಿಕಾರಿ ಮಹೇಶ ಹಡಪದ ಮಾತನಾಡಿದರು.
ಶಾಂತಿ ಸಭೆಯಲ್ಲಿ ಮುಖಂಡರಾದ ಪೂರ್ಣಜಿ ಕರಾಟೆ, ಚಂಬಣ್ಣ ಬಾಳಿಕಾಯ ಗಂಗಾಧರ ಮೆಣಸಿನಕಾಯಿ ಪುರಸಭೆ ಉಪಾಧ್ಯಕ್ಷ ಫಿರ್ದೋಷ ಆಡೂರ ಅಂಜುಮನ್ ಕಮಿಟಿ ಅಧ್ಯಕ್ಷ ಎಂಎಂ ಗದಗ ಸಾಹೀಬ್ ಜಾನ್ ಹವಾಲ್ದಾರ ಮುಸ್ತಾಕ್ ಅಹಮದ್ ಶಿರಹಟ್ಟಿ ಶರಣು ಗೋಡಿ ದಾದಾಪೀರ್ ಮುಚ್ಚಾಲೆ ಸೋಮಣ್ಣ ಉಪನಾಳ ಮತ್ತಿತರರು ಮಾತನಾಡಿ ಕೋಮು ಸೌಹಾರ್ದತೆ ಭಾತತ್ವ ಮತ್ತು ಶಾಂತಿಯನ್ನು ಕಾಪಾಡಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಹಬ್ಬವನ್ನು ಆಚರಿಸಬೇಕು ಮತ್ತು ಶಾಂತಿ ಸುವ್ಯವಸ್ಥೆಗೆ ಪೊಲೀಸರೊಂದಿಗೆ ಎಲ್ಲರೂ ಸಹಕಾರ ನೀಡೋಣ ಎಂದರು.
ವೇದಿಕೆಯಲ್ಲಿ ಡಿಎಸ್ಪಿ ಜೆ. ಎಚ್. ಇನಾಮದಾರ ಇದ್ದರು . ಪ್ರಾಸ್ತಾವಿಕವಾಗಿ ಸಿಪಿಐ ನಾಗರಾಜ್ ಮಾಡಳ್ಳಿ ಮಾತನಾಡಿದರೆ ಶಿಕ್ಷಕ ಈಶ್ವರ್ ಮೆಡ್ಲೇರಿ ಮತ್ತು ಪಿಎಸ್‍ಐ ಈರಣ್ಣ ರಿತ್ತಿ ಪಿಡಿ ಮ್ಯಾಗೇರಿ ಕ್ರೈಂ ಪಿಎಸ್‍ಐ ಎಂಎಸ್ ಜೋಗದಕರ್ ಇದ್ದರು.