ಸಿದ್ದರಾಮಯ್ಯ ಬಗ್ಗಲ್ಲ ಜಗ್ಗಲ್ಲ ಕುಗ್ಗಲ್ಲ : ತುಕರಾಂ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.01:  ಮುಡ ಹಗರಣಕ್ಕೆ ಸಂಬಂಧಿಸಿ ಜೆಡಿಎಸ್ ಮತ್ತು ಬಿಜೆಪಿ ಏನೇ ಕುತಂತ್ರ ಮಾಡಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು  ಬಗ್ಗಲ್ಲ ಜಗ್ಗಲ್ಲ ಕುಗ್ಗಲ್ಲ ಎಂದು ಸಂಸದ ಈ.  ತುಕರಾಂ ಹೇಳಿದ್ದಾರೆ.
ನಗರದಲ್ಲಿ ಪಕ್ಷದಿಂದ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಬಿಜೆಪಿ ಕೇಂದ್ರ  ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮೂಡ ಹಗರಣದಲ್ಲಿ ಸಿದ್ದರಾಮಯ್ಯಗೆ ಮುಜುಗರ ಆಗಬಾರದೆಂದು ಅವರ ಪತ್ನಿ  ಸೈಟ್ ವಾಪಸ್ ನೀಡಿದ್ದಾರೆ.
 ಅರಿಶಿಣ ಕುಂಕುಮದ ರೂಪದಲ್ಲಿ ನೀಡಿದ ಸ್ಥಳ ಅದು.  ಅದರೂ ಪತಿಗೆ  ಮುಜುಗರವಾಗಬಾದೆಂದು ಹಿಂದಿರುಗಿಸಿದ್ದಾರೆ.
ಸಿದ್ದರಾಮಯ್ಯ ಅವರ ರಾಜಕೀಯ  ಜೀವನಕ್ಕೆ ದಕ್ಕೆ ಯಾಗಬಾರದು.  ನಲವತ್ತ ವರ್ಷ ಯಾವ ಕಪ್ಪು ಚುಕ್ಕೆ ಇಲ್ಲದೆ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಈಗ ಇಂತಹ ಆರೋಪ ಬೇಡ ಎಂದು
ಮುಡಾಗೆ ಸೈಟ್ ವಾಪಸ್ ನೀಡುವ ಮೂಲಕ ಮತ್ತೊಬ್ಬರಿಗೆ ಆದರ್ಶವಾಗಿದ್ದಾರೆಂದರು.
ತನಿಖಾ ಸಂಸ್ಥೆಯನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಅಟವಾಡ್ತಿದ್ದಾರೆ  ಅದೇ ಅವರಿಗೆ ಮುಂದೆ ವಿಷವಾಗ್ತದೆ. ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ..  ವಿರೋಧ ಪಕ್ಷವರು  ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲ್ಲ. ಹಗರಣದ ಬಗ್ಗೆ ಮಾತ್ರ ಮಾತನಾಡ್ತಾರೆ. ಹೊಟ್ಟೆ ತುಂಬಿದ ಮೇಲೆ ಮುದ್ದೆ ಮುಳ್ಳು ಮುಳ್ಳು ಎನ್ನುವ ಹಾಗೆ ಹಾಗಿದೆ ಬಿಜೆಪಿ ಪರಿಸ್ಥಿತಿ ಎಂದರು.
ಕಚೇರಿ ಮುಖ್ಯ ಅಲ್ಲ:
ನಾನು ಸಂಸದನಾಗಿ ಬಳ್ಳಾರಿಯಲ್ಲಿ ಕಚೇರಿ ಮಾಡೋದು ಮುಖ್ಯವಲ್ಲ. ಮಾಡುವ ಕೆಲಸ ಮುಖ್ಯ ಹತ್ತಾರು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಿದ್ದೇನೆ. ಒಂದು ಕೋಟಿ ವೆಚ್ಚದಲ್ಲಿ ಹೊಸ ಕಚೇರಿ ನಿರ್ಮಾಣ ಮಾಡ್ತೇನೆಂದರು.
ರೆಡ್ಡಿ ಪರಿಣಾಮ ಬೀರಲ್ಲ:
ಬರಲಿರುವ
ಸಂಡೂರು ಉಪಚುನಾವಣೆ ಮೇಲೆ  ಮಾಜಿ ಸಚಿವ ಜನಾರ್ದನ ರೆಡ್ಡಿ  ಯಾವುದೇ ಪರಿಣಾಮ ಬೀರಲ್ಲ. ಅವರ ಆಡಳಿತ ಹೇಗೆ ಎಂಬುದನ್ನು ಸಂಡೂರಿನ‌ ಜನತೆ ನೋಡಿದ್ದಾರೆ. ಯಾರೇ ಬಂದರೂ  ಸಂಡೂರಿನ ‌ಜನರು ಕಾಂಗ್ರೆಸ್ ಕೈಬಿಟ್ಟಿಲ್ಲ,  ಬಿಡೋದಿಲ್ಲ ಎಂದರು.