ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹ
ಲಕ್ಷ್ಮೇಶ್ವರ,ಅ.2: ಪಟ್ಟಣದ 15ನೇ ವಾರ್ಡಿನ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಗೋಸಾವಿ ಸಮುದಾಯ ವಾಸವಿರುವ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡದೆ ನಿರ್ಲಕ್ಷಿಸುತ್ತದೆ ಎಂದು ಆರೋಪಿಸಿ ಅನೇಕ ಮಹಿಳೆಯರು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಮಹೇಶ್ ಕಲಘಟಗಿ ಅವರ ನೇತೃತ್ವದಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಮಹೇಶ ಕಲಘಟಗಿ ಅವರು ಗೋಸಾವಿ ಸಮಾಜದ 300ಕ್ಕೂ ಹೆಚ್ಚು ಜನರು ವಾಸಸುತ್ತಿರುವ ಪ್ರದೇಶದಲ್ಲಿ ಕೇವಲ ಒಂದೇ ಒಂದು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಮೂಲಭೂತ ಸೌಲಭ್ಯಗಳು ಈ ಜನರಿಗೆ ಇದುವರೆಗೂ ಕಲ್ಪಿಸಿಲ್ಲ ಈಗಾಗಲೇ ನಿರ್ಮಿಸಿರುವ ಚರಂಡಿಯೂ ಸಹ ಅಸಮರ್ಪಕವಾಗಿದ್ದು ಜನ ವಾಸಿಸುವ ಪ್ರದೇಶದಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ ಇದರಿಂದಾಗಿ ರೋಗ ರುಜಿನಗಳು ಭಾದಿಸುತ್ತಿವೆ ಆದ್ದರಿಂದ ಈ ಜನರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲೇಬೇಕು ಕೇವಲ ಭರವಸೆ ನೀಡಿದರೆ ಸಂಘಟನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಈ ಜನರೊಂದಿಗೆ ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಫಿರ್ದೋಷ ಆಡೂರ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿ ಮನವಿಯನ್ನು ಆಲಿಸಿ ಮುಖ್ಯ ಅಧಿಕಾರಿ ಹಾಗೂ ಸದಸ್ಯರೊಂದಿಗೆ ಕೂಡಲೇ ಚರ್ಚಿಸಿ ಸ್ಥಳ ಪರಿಶೀಲನೆ ಮಾಡಿ ಸೌಲಭ್ಯಗಳನ್ನು ಕಲ್ಪಿಸಲು ಕೂಡಲೇ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು ನಂತರ ಪ್ರತಿಭಟನಾಕಾರರು ಮನವಿಯನ್ನು ಸಲ್ಲಿಸಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಈ ಸಂದರ್ಭದಲ್ಲಿ ಬಾಳಪ್ಪ ಗೋಸಾವಿ ಎಸ್‍ಎ ಗೋಸಾವಿ ರಾಜವ್ವ ಗೋಸಾವಿ ಗೋಪಿ ಗೋಸಾವಿ ರಮೇಶ್ ಗೋಸಾವಿ ಪ್ರಕಾಶ್ ಗೋಸಾವಿ ರಾಜು ಗೋಸಾವಿ ಅಮರೇಶ ಗಾಂಜಿ ಶಶಾಂಕ್ ಹಿರೇಮಠ ನವೀನ್ ಗುರಿಕಾರ ಭರಮಣ್ಣ ಗೌಳಿ ಪ್ರವೀಣ್ ದಶಮನಿ ಪಾಣಿಗಟ್ಟಿ ಸೇರಿದಂತೆ ಕರವೇ ಕಾರ್ಯಕರ್ತರು ಹಾಗೂ ಗೋಸಾವಿ ಸಮುದಾಯ ಮಹಿಳೆಯರು ಮುಖಂಡರು ಯುವಕರು ಪುರಸಭೆಯ ಸದಸ್ಯರಾದ ರಾಮಣ್ಣ ಗಡದವರ ರಾಜು ಕುಂಬಿ ಕಂದಾಯ ಅಧಿಕಾರಿ ಶಿವಾನಂದ್ ಅಜ್ಜಣ್ಣನವರ ಹನುಮಂತ ನಂದಣ್ಣನವರ ಇದ್ದರು.
