ಅಚ್ಚಳಿಯದೇ ಉಳಿಯುವ ಹೆಸರು ಮಹಾತ್ಮಾ ಗಾಂಧೀಜಿ
ಧಾರವಾಡ, ಅ2: ಸತ್ತೂರಿನಲ್ಲಿ ಶ್ರೀ ಬಸವೇಶ್ವರ ರೂರಲ್ ಎಜುಕೇಶನ್ ಆಂಡ್ ಡೆವಲಪ್ಮೆಂಟ್ ಟ್ರಸ್ಟ್ ನಲ್ಲಿ 155 ನೇ ಮಹಾತ್ಮ ಗಾಂಧೀಜಿಯವರ ಮತ್ತು 120 ನೇ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತೋತ್ಸವ ಕಾರ್ಯಕ್ರಮ ನಡೆಯಿತು.
ಟ್ರಸ್ಟ ಅಧ್ಯಕ್ಷ ಡಾ. ಶರಣಪ್ಪ ಎಂ. ಕೊಟಗಿಯವರು ಮಾತನಾಡಿ, ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೇ ಸದಾ ಶಾಶ್ವತವಾಗಿರುವ ಹೆಸರು ಅಂದರೆ ಅದು ಎಂದೆಂದಿಗೂ ಮಹತ್ಮಾರಾಗಿರುವ ಗಾಂಧೀಜಿ. ಗಾಂಧಿಯವರ ಬದುಕೊಂದು ಶಾಂತಿ- ಹೋರಾಟಗಳ ಮಹಾಗಾಥೆ. ಸತ್ಯಕ್ಕಾಗಿ ನಿರಂತರ ಅನ್ವೇಷಣೆ, ಪ್ರತಿಯೊಬ್ಬರು ಸಮಾನರು ಎಂಬ ನೆಲೆಯಲ್ಲಿ ವಸಾಹತುಶಾಹಿಯ ಎದುರು ಸ್ವಾತಂತ್ರ್ಯಕ್ಕಾಗಿ ದಿಟ್ಟ ಹೋರಾಟ ಇವುಗಳೆಲ್ಲ ರಾಷ್ಟ್ರಪಿತನನ್ನು ಜಾಗತಿಕ ನಾಯಕರಲ್ಲಿ ಮೊದಲಿನ ಸ್ಥಾನಕ್ಕೇರಿಸಿದೆ. ದಂಡಿಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿಯಂತಹ ಅನೇಕ ಹೋರಾಟಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರ ಹುಟ್ಟುಹಬ್ಬವನ್ನು ನಾಡಿನಾದ್ಯಂತ ಪ್ರತಿವರ್ಷ ಅಕ್ಟೋಬರ್ 2ರಂದು ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಬಿ. ಇಡಿ ಕಾಲೇಜಿನ ಪ್ರಾಚಾರ್ಯರಾದ ಡಾ ಮಹಾಂತೇಶ್ ಹಿರೇಮಠ ಮಾತನಾಡಿದರು.
