ಎಡಿಜಿಪಿ ಎಂ ಚಂದ್ರಶೇಖರ ಅಮಾನತಿಗೆ ಜೆಡಿಎಸ್ ಆಗ್ರಹ
ಇಂಡಿ:ಅ.2: ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರ ಬಗ್ಗೆ ಅಸಂವಿಧಾನಿಕ ಪದ ಬಳಸಿರುವ ಪೆÇೀಲೀಸ್ ಅಧಿಕಾರಿ ಅಮಾನತಿಗೆ ಆಗ್ರಹಿಸಿ ಇಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರ ನೇತೃತ್ವದಲ್ಲಿ ಮಿನಿ ವಿಧಾನಸೌಧ ಎದುರು ಉಪತಶಿಲ್ದಾರ ಧನಪಾಲಶಟ್ಟಿ ಯವರಿಗೆ ಮನವಿ ಸಲ್ಲಿಸಿದರು.ನಂತರ ಮಾತನಾಡುತ್ತಾ ಎಮ್ ಚಂದ್ರಶೇಖರ್ ರವರ ಮೇಲೆ ಹಲವಾರು ಬ್ರಷ್ಟಾಚಾರ ಆರೋಪಗಳಿದ್ದು ,ಆದರು ಇವರ ಮೇಲೆ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.ರಾಜ್ಯ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಶಾಸಕರು ವಮ್ಮತಿನ ಆಗ್ರಹವನ್ನು ಕೇಂದ್ರ ಗೃಹ ಇಲಾಖೆಗೆ ಒತ್ತಾಯಿಸಿದೆ .ಕೂಡಲೆ ತಪ್ಪಿತಸ್ಥ ಅಧಿಕಾರಿಯನ್ನು ಸುಕ್ತ ಕ್ರಮಕೈಗೊಳ್ಳಲು ಆಗ್ರಹಿಸಿದರು.ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಶ್ರೀಶೈಲಗೌಡ ಪಾಟೀಲ ಸಿದ್ದು ಡಂಗಾ,ಕಲ್ಲನಗೌಡ ಬಿರಾದಾರ,ಮಹಿಬೂಬ ಬೇವನೂರ ಸುನಂದಾ ವಾಲಿಕಾರ, ಬಸವರಾಜ ಕವಡಿ, ದುಂಡು ಬಿರಾದಾರ, ಇರ್ಫಾನ್ ಅಗರಖೇಡ, ನಿಯಾಝ್ ಅಗರಖೇಡ, ಫಜಲು ಮುಲ್ಲಾ.ಚಿದಾನಂದ ವಾಲಿಕಾರ,ಸಂಜೀವ ವಾಲಿಕಾರ, ಸಂತೋಷ ಲಚ್ಯಾಣ. ಕುಮಾರ,ಸುರ್ಗಿಹಳ್ಳಿ,ಬೂತಾಳಿ ಕೇಳಗಿನಮನಿ,ಕೋಬಣ್ಣಾ , ಪೂಜಾರಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು