ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ, ಶಾಸ್ತ್ರಿಯವರ ಜಯಂತಿ ಆಚರಣೆ
ವಿಜಯಪುರ,ಅ.2:ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕಿ ದಿವ್ಯಾ ಬಿರಾದಾರ ಅವರು ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಾ. ಗಾಂಧೀಜಿಯವರು ಅಹಿಂಸಾ ತತ್ವದ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಸತ್ಯ ಅಹಿಂಸೆಯ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದರು ಎಂದರು.
ಶಾಸ್ತ್ರೀಜಿಯವರ ವಿಚಾರಧಾರೆಗಳು ಎಲ್ಲರಿಗೂ ಅನುಕರಣೀಯ. ದೇಶಕ್ಕಾಗಿ ಅವರು ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ಗಾಂಧೀಜಿಯವರ ರಾಮರಾಜ್ಯ ನಿರ್ಮಾಣವಾಗಬೇಕಾದರೆ ಭ್ರಷ್ಟಾಚಾರ, ಜಾತೀಯತೆ, ಸಾಮಾಜಿಕ ಅಸಮಾನತೆ, ಮೇಲು-ಕೀಳು, ಕೋಮುವಾದ ಮುಂತಾದವುಗಳು ಹೋಗಲಾಡಿಸಬೇಕು. ವಿದ್ಯಾರ್ಥಿಗಳು ಅವರ ತತ್ವ, ಸಿದ್ಧಾಂತವನ್ನು ತಿಳಿದುಕೊಳ್ಳಬೇಕು ಎಂದು ನುಡಿದರು.
ವಿದ್ಯಾರ್ಥಿಗಳಾದ ಉಮಂಗ ಭಾಪನಾ, ವಿಜಯ ಪಾಟೀಲ, ಮತ್ತು ಅಕ್ಷರಾ ಬೋಂದರ್ಡೆ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಕುರಿತು ಭಾಷಣವನ್ನು ಮಾಡಿದರು. ವಿದ್ಯಾರ್ಥಿಗಳು ‘ರಘುಪತಿ ರಾಘವ ರಾಜಾ ರಾಮ’ ಎಂಬ ಭಜನೆಯನ್ನು ಮಾಡಿದರು.
ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎ.ಎಚ್. ಸಗರ, ಶ್ರೀದೇವಿ ಜೋಳದ, ಅನಿಲ ಬಾಗೇವಾಡಿ, ಸೀಮಾ, ಸರೋಜಾ, ಮಧುಮತಿ, ದೀಪಾ ತಬಸುಮ, ಹೀನಾ, ಅಶ್ವಿನ, ರೇಣುಕಾ ಕಡೆಮನಿ ಇತರರು ಉಪಸ್ಥಿತರಿದ್ದರು. ಶ್ವೇತಾ ಪಾಟೀಲ, ಅಲ್ತಾಫ ಪಟೇಲ ನಿರೂಪಿಸಿದರು, ಉಮಾ ಬಡಾನೂರ ವಂದಿಸಿದರು.