ಸೆ.೪ ಮೇರುಜೀವ ರಾಜ್ಯಮಟ್ಟದ ಪ್ರಶಸ್ತಿ
ಯಚೂರು,ಆ.೨೫- ಆಕ್ಸ್ ಫರ್ಡ್ ಸಮೂಹ ಸಂಸ್ಥೆಯಿಂದ ಸೆಪ್ಟೆಂಬರ್ ೪ ರಂದು ದಿ. ಶೇಷಯ್ಯ ಶ್ರೇಷ್ಟಿ ರವುಡಕುಂದಾ ಇವರ ಸ್ಮರಣಾರ್ಥವಾಗಿ ಮೇರುಜೀವ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ, ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಘಟಿಕೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಿಂಧನೂರಿನ ಸತ್ಯ ಗಾರ್ಡನ್ ನಲ್ಲಿ ಬೆಳಿಗ್ಗೆ ೯ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎನ್. ಸತ್ಯನಾರಾಯಣ ಶ್ರೇಸ್ಟಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ. ಪ್ರಶಸ್ತಿ ಪ್ರದಾನವನ್ನು ಹೈದ್ರಾಬಾದ್ ಎಫ್.ಐ.ಇ ಹೈಡ್ರೋ ಇಂಜಿನಿಯರ್ ಎಕ್ಸಪರ್ಟ್ ಕನ್ನಯ್ಯ ನಾಯ್ಡು ನಾಗನೇನಿ ಅವರಿಗೆ ಮಾಡಲಾಗುವುದು ಎಂದ ಅವರು, ಅಧ್ಯಕ್ಷತೆಯನ್ನು ಸಿಂಧನೂರಿನ ಆಕ್ಸ್ ಫರ್ಡ್ ಸಮೂಹ ಸಂಸ್ಥೆ ಅಧ್ಯಕ್ಷ ಎನ್.ಸತ್ಯನಾರಾಯಣ ಶ್ರೇಸ್ಟಿ ಅವರು ವಹಿಸಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆಯನ್ನು ಸಿಂಧನೂರಿನ ನೇತ್ರ ತಜ್ಞರು ಡಾ. ಚನ್ನನಗೌಡ ಆರ್. ಪಾಟೀಲ್ ಹಾಗೂ ಬಸರಾಜ ಹಿರೇಗೌಡ್ರು ರವುಡಕುಂದಾ ಮಾಡಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ರಾಯಚೂರು ವಿಶ್ವವಿದ್ಯಾಲಯದ ಕುಲ ಸಚಿವ ಡಾಕ್ಟರ್ ಯರಿಸ್ವಾಮಿ, ಸಿಂಧನೂರಿನ ಪದ್ಮನ ನರ್ಸಿಂಗ್ ಹೋಮ್ ಡಾ. ರಾಧಾಕೃಷ್ಣ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಚಿದಾನಂದಪ್ಪ ಕುರಿ, ಸಿಂಧನೂರಿನ ತಾಲ್ಲೂಕು ದಂಡಾಧಿಕಾರಿ ಅರುಣ್ ಕುಮಾರ್ ದೇಸಾಯಿ, ಸಿಂಧನೂರಿನ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಸೇರಿದಂತೆ ಇತರರು ಆಗಮಿಸಲಿದ್ದಾರೆ ಎಂದರು.