ಬಿ.ಎಸ್.ಎಸ್.ಕೆ ರೈತ ಹಿತರಕ್ಷಣ ಸಮಿತಿಯಿಂದ ಕಾರ್ಖಾನೆ ಬಚಾವ ಆಂದೋಲನ
ಹುಮನಾಬಾದ್ : ಆ.25:ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಸಂಕಷ್ಟದಲ್ಲಿದೆ, ರೈತ ಹಿತರಕ್ಷಣ ಸಮಿತಿ ವಯಿಂದ ಬಿ.ಎಸ್.ಎಸ್.ಕೆ ಬಚಾವ್ ಆಂದೋಲನ ಅಂಗವಾಗಿ ದಿನಾಂಕ 09/09/2024 ಕಾರ್ಖಾನೆಯ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಮಾಡಲಾಗುವುದೆಂದು ಕಾರ್ಖಾನೆಯ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಸುಭಾಷ್ ಗಂಗಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೀದರ ಡಿಸಿಸಿ ಬ್ಯಾಂಕ್ ನಿಂದ ತೆಗೆದುಕೊಂಡ ಸಾಲ ಮರುಪಾವತಿ ಮಾಡದೆ ಇದ್ದುದಕ್ಕಾಗಿ ಡಿಸಿಸಿ ಬ್ಯಾಂಕ್ ಕಾರ್ಖಾನೆ ಆಸ್ತಿ ಬ್ಯಾಂಕಿನ ಸ್ವಾದಿನಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಖಾನೆ 90 ದಿನಗಳಲ್ಲಿ ಕಾರ್ಖಾನೆ ಆಸ್ತಿಯ ಹರಾಜು ಆರಂಭಿಸಬಹುದು, ಅಡಳಿತ ಮಂಡಳಿ ಅಧ್ಯಕ್ಷರಾದ ಸುಭಾಶ ಕಲ್ಲೂರ ಕಾರ್ಖಾನೆಯ ಶೇರುದಾರರ ತುರ್ತು ಸಾಮಾನ್ಯ ಸಭೆ ಶೀಘ್ರದಲ್ಲೆ ಕರೆದು ಕಾರ್ಖಾನೆ ಶೇರುದಾರರ ಅಭಿಪ್ರಾಯ ಕೇಳಿ ಕಾರ್ಖಾನೆ ಸಂರಕ್ಷಿಸುವ ಕೆಲಸ ಮಾಡಬೇಕೆಂದು ಗಂಗಾ ಆಗ್ರಹಿಸಿದ್ದಾರೆ.
07/09/2024ರ ವರೆಗೆ ತುರ್ತು ಸಾಮಾನ್ಯ ಸಭೆ ಕರೆದು ತೀರ್ಮಾನ ಕೈಗೊಳ್ಳದಿದ್ದರೆ 09/09 2024 ರಂದು ಬೃಹತ್ ಪ್ರತಿಭಟನೆ ಮಾಡಲಾಗುವುದೆಂದು ಸುಭಾಷ್ ಗಂಗಾ ತಿಳಿಸಿದ್ದಾರೆ. ಸಹಕಾರ ಕ್ಷೇತ್ರದ ಉಳಿದ ಕಾರ್ಖಾನೆಗಳಿಗು ಕೂಡ ಸಾಲ ಇದ್ದರೂ ಕೂಡ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಂಗಾ ಪ್ರಶ್ನಿಸಿದ್ದಾರೆ.
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯಿಂದಲೆ ಬೀದರ ಡಿಸಿಸಿ ಬ್ಯಾಂಕ ಉನ್ನತ್ತ ಸ್ಥಾನಕ್ಕೆ ಬಂದಿದೆ. ಈ ಕಾರ್ಖಾನೆ ಬಗ್ಗೆ ಏಕೆ ಮಲತಾಯಿ ದೊರಣೆ ಎಂದು ಗಂಗಾ ಪ್ರಶ್ನಿಸಿದ್ದಾರೆ. ಡಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಬಿ.ಎಸ್.ಎಸ್.ಕೆ ಅಧ್ಯಕ್ಷರು ಸೇರಿ ಕಾರ್ಖಾನೆ ಮಾರಾಟ ಮಾಡಲು ಸಂಚುರೂಪಿಸಿದ್ದಾರೆ ಎಂದು ಸುಭಾಷ್ ಗಂಗಾ ಆರೋಪಿಸಿದ್ದಾರೆ. ಈ ಪ್ರತಿಭಟಣೆಯಲ್ಲಿ ರೈತರು ಶೇರುದಾರರು ಭಾಗವಹಿಸಲು ಗಂಗಾ ಮನವಿ ಮಾಡಿದ್ದಾರೆ.