ಶತಚಂಡಿಕಾ ಪೂಜೆ
ಚನ್ನಮ್ಮನ ಕಿತ್ತೂರು,ಆ25: ಸಾರ್ವಜನಿಕರೆಲ್ಲರೂ ಸೇರಿ ಒಗ್ಗಟಿನಿಂದ ಸೇವಾ ಮನೋಭಾವನೆಯಿಂದ ಸೇವೆ ಮಾಡಿದರೆ ಯಾವೆಲ್ಲಾ ಕೆಲಸದಲ್ಲಿಯೂ ಯಶಸ್ಸು ಕಾಣಲು ದೇವರು ಆರ್ಶೀವಾದ ಮಾಡುತ್ತಾನೆಂದು ಡೊಂಬರಕೊಪ್ಪದ (ದೇವಿಪುರ) ದುರ್ಗಾದೇವಿ ದೇವಸ್ಥಾನದ ಸ್ವಾಮಿಜಿÀ ಶ್ರೀ ಶಿವಲಿಂಗೇಶ್ವರ ಸ್ವಾಮಿಜೀ (ಅಪ್ಪಾಜಿ)ಹೇಳಿದರು.
ತಾಲೂಕಿನ ನಿಚ್ಚಣಕಿ ಗ್ರಾಪಂ ವ್ಯಾಪ್ತಿಯ ಡೊಂಬರಕೊಪ್ಪ (ದೇವಿಪುರ) ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ದೇವಿ ಚೈತನ್ಯ ಅಭಿವೃದ್ಧಿ, ವಿಶ್ವಶಾಂತಿ ಲೋಕಕಲ್ಯಾಣಕ್ಕಾಗಿ ಶ್ರೀ ಮಹಾದುರ್ಗಾದೇವಿಗೆ ಸಹಸ್ರ ಕಳಸಾಭಿಷೇಕ ಮತ್ತು ಶತಚಂಡಿಕಾ ಹೋಮ, ಶ್ರೀಚಕ್ರ ಪೂಜೆಯಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಈ ಹೋಮದಿಂದ ಚೈತನ್ಯ ವೃದ್ಧಿಸುತ್ತದೆ. ಹೋಮದ ಬೆಂಕಿ ಮತ್ತು ಹೊಗೆಯು ನಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಜೀವನದಲ್ಲಿ ಸಂತೋ?Àವನ್ನುಂಟು ಮಾಡಿ ಕಷ್ಟಗಳನ್ನು ಮಾಯ ಮಾಡುತ್ತದೆ ಎಂಬ ನಂಬಿಕಯಿದೆ ಎಂದರು.
ಕೇರಳ ರಾಜ್ಯದ ಕಾಸರಗೋಡಿನ ಬೇಕಲ ಗೋಕುಲಂ ಗೋಶಾಲೆ ಸಂಸ್ಥಾಪಕ ಖ್ಯಾತ ಜೋತಿಷಿ ಶ್ರೀ ವಿಷ್ಣುಪ್ರಸಾದ ಹೆಬ್ಬಾರ್ ಇವರು ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೆಬ್ಬಾರ್ ನೇತೃತ್ವದಲ್ಲಿ 35 ವೈದಿಕರ ತಂಡದಿಂದ 9 ದಿನ ಧಾರ್ಮಿಕ ವಿಧಿವಿಧಾನಗಳ ಮತ್ತು ವಾದ್ಯಮೇಳದೊಂದಿಗೆ ಪೂಜೆ, ಭಜನೆ, ಕೀರ್ತನೆ, ನೃತ್ಯ ನೇರವೇರಿದವು. ಪ್ರತಿನಿತ್ಯ ಹೋಮಕ್ಕೆ ದೇಸಿ ಗೋವಿನ ತುಪ್ಪ ಪ್ರಕೃತಿಯಲ್ಲಿ ದೊರೆಯುವ ನೈಸರ್ಗಿಕ ವಸ್ತುಗಳನ್ನು ಹೋಮದಲ್ಲಿ ಬಳಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅರ್ಚಕ ರಾಚಪ್ಪಾ ಹೊಸಮನಿ, ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕರುಗಳಾದ ವಿ.ಆಯ್.ಪಾಟೀಲ, ಮಾಹಾಂತೇಶ ದೊಡ್ಡಗೌಡರ, ಬಿಜೆಪಿ ಮುಖಂಡೆ ಲಕ್ಷ್ಮೀ ಇನಾಮದಾರ, ಉದ್ಯಮಿ ವಿಕ್ರಮ್ ಇನಾಮದಾರ, ಕೆಪಿಸಿಸಿ ಸದಸ್ಯೆ ರೋಹಿನಿ ಪಾಟೀಲ, ಬಿಜೆಪಿ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂಗನಗೌಡ ಪಾಟೀಲ, ನಿಂಗನಗೌಡ ಪಾಟೀಲ, ಮಹಾಂತೇಶ ಪಾಶ್ಚಾಪೂರ, ಮಂಜುಳಾ ಮಹಾಂತೇಶ ದೊಡ್ಡಗೌಡರ, ನಾನಾಸಾಹೇಬ ಪಾಟೀಲ, ಮುದಕಪ್ಪ ಮರಡಿ, ಅಸ್ಪಾಕ ಹವಾಲ್ದಾರ, ಈಶ್ವರ ಹುಂಟಿ, ಗ್ರಾಪಂ ಪಿಡಿಓ, ಅಧ್ಯಕ್ಷ,ಉಪಾಧ್ಯಕ್ಷ, ಸರ್ವಸದಸ್ಯರು, ಕಾರ್ಯದರ್ಶಿ, ಸಿಬ್ಬಂದಿ, ಕಿತ್ತೂರು ಪಪಂ ಸದಸ್ಯರುಪಾಲ್ಗೊಂಡಿದ್ದರು.