ಬೋರಳ ಗ್ರಾಮಸ್ಥರಿಂದ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ
ಔರಾದ :ಆ.25: ತಾಲ್ಲೂಕಿನ ಬೋರಳ ಗ್ರಾಮದ ಶಾಲೆಯಲ್ಲಿ ನಾಲ್ಕು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಇತ್ತೀಚಿಗೆ ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಧನರಾಜ ಮುಧಾಳೆ ಅವರಿಗೆ ಶನಿವಾರ ಶಾಲೆಯ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಸಂಪನ್ಮೂಲ ಶಿಕ್ಷಕ ಸತೀಶ ಮಜಗೆ ಮಾತನಾಡಿ ಶಾಲೆಯ ಭೌತಿಕ ಸೌಲಭ್ಯಗಳ ಸುಧಾರಣೆ ಮತ್ತು ಕಲಿಕಾ ಪ್ರಗತಿಯಲ್ಲಿ ಮುಖ್ಯ ಶಿಕ್ಷಕರ ಪಾತ್ರ ಅಪಾರ. ಅವರು ಕ್ರಿಯಾಶೀಲತೆಯ ಜೊತೆಗೆ ದಕ್ಷತೆ ಮತ್ತು ಸಾಮರಸ್ಯ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದಾಗ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ’ ಎಂದರು.
ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತೆರೆದ ಮನಸ್ಸಿನಿಂದ, ಪರಸ್ಪರ ನಂಬಿಕೆ ಮತ್ತು ಗೌರವ ಭಾವದಿಂದ ಕಾರ್ಯನಿರ್ವಹಿಸಿದರೆ ಕಲಿಕೆಯ ಗುಣಮಟ್ಟ ಹೆಚ್ಚಿಸಬಹುದು’ ಎಂದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ರಾಜು ಸೋನೆ, ಪತ್ರಕರ್ತ ಸುಧೀರ್ ಪಾಂಡ್ರೆ, ದಿಲೀಪ ಪಾಂಡ್ರೆ, ದೇವಿದಾಸ ಪಾಂಡ್ರೆ, ಬಳಿರಾಮ ಮಚ್ಕುರಿ, ಸಮರ್ಥ ಪಾಟೀಲ, ರಮೇಶ ಮಚ್ಕುರಿ, ಶಾಲೆ ಸಿಬ್ಬಂದಿಗಳಾದ ರಾಜೇಂದ್ರ ಮುದ್ದಾಳೆ, ಸೌಭಾಗ್ಯವತಿ ಪಾಟೀಲ್, ಸಂಪನ್ಮೂಲ ಶಿಕ್ಷಕ ಸತೀಶ ಮಜಗೆ, ಶಿವಮಂಗಲಾ ದೇವರ್ಸೆ, ನಿರ್ಮಲಾ ಸ್ವಾಮಿ, ಸಾಮೂಹ ಸಮನ್ಮೂಲ ವ್ಯಕ್ತಿ ಮಹಾದೇವ ಘೂಳೆ ಸೇರಿದಂತೆ ಇನ್ನಿತರರಿದ್ದರು.