ಟ್ರ್ಯಾಕ್ಟರ್ ಮೂಲಕ ರೈತರಿಂದ ಔಷಧಿ ಸಿಂಪರಣೆ ಆರಂಭ
ಆಳಂದ:ಆ.25: ದುಬಾರಿಯಾಗಿ ಮಾರ್ಪಟ್ಟ ಕೃಷಿ ಉಳಿಸಿಕೊಳ್ಳಲು ನಿರಂತರ ಕಸರತ್ತು ಆರಂಭಿಸಿದ ರೈತ ಸಮುದಾಯ ವಿಜ್ಞಾನಿಗಳ ತಂತ್ರಜ್ಞಾನದ ಅವಿಸ್ಕಾರದ ಮೊರೆಹೋಗಿ ಆರ್ಥಿಕ ನಷ್ಟವನ್ನು ತಪ್ಪಿಸಿಕೊಳ್ಳಲು ಬಹುತೇಕ ರೈತರು ಮುಂದಾಗಿದ್ದಾರೆ.
ತಾಲೂಕಿನ ಅನೇಕ ರೈತರು ಬಿತ್ತನೆ, ಗಳೆ, ಎಡೆ, ನೆಗಿಲನ್ನು ಟ್ರ್ಯಾಕ್ಟರ್‍ಗಳ ಮೂಲಕ ಆರಂಭಿಸಿದ್ದು ಕೆಲವು ವರ್ಷಗಳಾದರೆ, ಈ ಬಾರಿ ಪಟ್ಟಣದ ಯುವ ರೈತÀ ಮಲ್ಲು ಚಂದ್ರಾಮಪ್ಪ ಕುಂಬಾರ ಅವರು ಟ್ರ್ಯಾಕ್ಟರ್ ಮೂಲಕ ಬೆಳೆಗಳಲ್ಲಿ ಕೀಟನಾಷಕ ಔಷಧಿ ಸಿಂಪರಣೆ ಕೈಗೊಳ್ಳುವ ಮೂಲಕ ದಿನದ ಶ್ರಮ ಮತ್ತು ಕೂಲಿಯಾಳಿನ ಖರ್ಚು ಉಳಿಸುವ ಮೊದಲಿಗರಾಗಿ ಗಮನ ಸೆಳೆದಿದ್ದಾರೆ.
ತೊಗರಿ ಬೆಳೆಯಲ್ಲಿ ಟ್ರ್ಯಾಕ್ಟರ್ ಓಡಾಟ ಸಾಧ್ಯವಾಗದು ಎಂದಿದ್ದ ರೈತರಿಗೆ ಇದು ಸಾಧ್ಯವೆಂದು ತೋರಿಸಿದ್ದಾರೆ. ಟ್ರ್ಯಾಕ್ಟರ್ ಬಳಕೆ ಮೂಲಕ ದಿನಕ್ಕೆ 12 ಎಕರೆ ಪ್ರದೇಶಗಳಲ್ಲಿ ಬೆಳೆಗೆ ಔಷಧಿ ಸಿಂಪಡಿಸುವುದು ಸಾಧ್ಯವಾಗಿದ್ದು, ಇದು ಕೃಷಿ ಕಾರ್ಯಾಚರಣೆಗಳಲ್ಲಿ ಮಹತ್ವದ ಬದಲಾವಣೆ ಎಂದು ರೈತ ಹೇಳಿಕೊಂಡಿದ್ದಾರೆ.
ಬೆಳೆಯಲಿ ಎಡೆ, ಗಳೇ, ಮತ್ತು ಬಿತ್ತನೆಯಲ್ಲಿ ಟ್ಯಾಕ್ಟರ್ ಬಳಕೆ ವ್ಯಾಪಕವಾಗುತ್ತಿದ್ದು, ಕೂಲಿ ಆಳಗಳ ಕೊರತೆ ಮತ್ತು ಕೂಲಿ ದರಗಳ ಹೆಚ್ಚಳದಿಂದ ತತ್ತರಿಸಿಬಿಟ್ಟಿದ್ದ ರೈತರಿಗೆ ಹೊಸ ದಾರಿಯಾಗಿದೆ.
ಎತ್ತುಗಳಿಲ್ಲದವರು ಬಿತ್ತನೆಯಲ್ಲಿ ಮೊದಲು ತೊಂದರೆ ಅನುಭವಿಸುತ್ತಿದ್ದರು. ಆದರೆ, ಟ್ರ್ಯಾಕ್ಟರ್ ಬಳಸುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಬಂದಿದ್ದು, ಆರ್ಥಿಕವಾಗಿ ಉಳಿತಾಯಕ್ಕೆ ದಾರಿಮಾಡಿಕೊಡುತ್ತಿದೆ. ರೈತರು ಟ್ರ್ಯಾಕ್ಟರ್ ಬಳಕೆಯಿಂದಾಗಿ ಹೆಚ್ಚುತ್ತಿರುವ ಔಷಧಿ ಸಿಂಪಡಣೆ ಸಾಮಥ್ರ್ಯವನ್ನು ದಕ್ಷತೆಯಿಂದ ಬಳಸುವುದರಿಂದ, ಬೆಳೆಗಳಲ್ಲಿ ಉತ್ತಮ ಉತ್ಪಾದನೆಯಾಗಲಿದೆ ಹಾಗೂ ರೋಗ ನಿರೋಧಕತೆಯುಳ್ಳ ಉತ್ಪನ್ನಗಳನ್ನು ಉತ್ಪಾದಿಸುವುದು ಸಾಧ್ಯವಾಗಿದೆ. ಈ ಹೊಸ ಮಾರ್ಗದರ್ಶನದ ತಂತ್ರಜ್ಞಾನವು ರೈತರಿಗೆ ಕೃಷಿಯಲ್ಲಿ ಹೊಸ ಭರವಸೆಗಳನ್ನು ಮೂಡಿಸಿಲಿದೆ ಎಂದು ರೈತ ಕುಂಬಾರ ಹೇಳುತ್ತಾರೆ.
ಟ್ರ್ಯಾಕ್ಟರನಿಂದ ಉಳಿತಾಯ: ಬಿತ್ತನೆ, ಔಷಧಿ ಸಿಂಪರಣೆ, ಗಳ್ಯಾ ಎಡೆ ಸಾಗು ಮಾಡಲು ಎತ್ತುಗಳು ಮತ್ತು ಆಳು ಕೂಲಿಗಿಂತ ಟ್ರ್ಯಾಕ್ಟ್‍ರನಿಂದ ರೈತರಿಗೆ ಉಳಿತಾಯವಿದೆ.
245 ಎಎಚ್‍ಪಿ ಜೆಒ ಈ ಟ್ರ್ಯಾಕ್ಟರ್‍ಗೆ 200 ಲೀಟರ್ ನೀರಿನ ಸಾಮಥ್ರ್ಯದ ಟ್ಯಾಂಕ್ ಅಳವಡಿಕೆಯಿದೆ. ಇದರಿಂದ ಎರಡುವರೆಯಿಂದ ಮೂರು ಎಕರೆ ಹೀಗೆ ಸುಮಾರು 8 ಟ್ಯಾಂಕ್‍ನಿಂದ ದಿನಕ್ಕೆ 25 ಎಕರೆ ಔಷಧಿ ಸಿಂಪರಣೆಯಾಗುತ್ತದೆ. ಸರಾಸರಿ 20 ನಿಮಿಷದಲ್ಲಿ ಎರಡುವರೆ ಎಕರೆ ಔಷಧಿ ಕೇವಲ 800 ರೂಪಾಯಿ ವೆಚ್ಚದಲ್ಲಿ ಸಿಂಪರಿಸಬಹುದಾಗಿದೆ. ಮಾನವ ಶ್ರಮದಿಂದಾದರೆ ಎರಡು ಎಕರೆಗೆ ಕನಿಷ್ಠ 1200 ರೂಪಾಯಿ ಬೇಕಾಗುತ್ತದೆ. ಎರಡುವರೆ ಎಕರೆಗೆ ಸುಮಾರು 400 ರೂಪಾಯಿ ಟ್ರ್ಯಾಕ್ಟರ್‍ನಿಂದ ಉಳಿತಾಯ ಮತ್ತು ಕಡಿಮೆ ಸಮಯದಲ್ಲಿ ಕೆಲಸ ಮುಗಿಯುತ್ತದೆ.
ಬೆಳೆಯಲ್ಲಿ ದಿನಕ್ಕೆ 15 ಎಕರೆ ಟ್ರ್ಯಾಕ್ಟರ್‍ನಿಂದ ಎಡೆ ಸಾಗು ಮಾಡಬಹುದು. ಎಕರೆಗೆ ಟ್ರ್ಯಾಕ್ಟರ್‍ಗೆ 800 ರೂಪಾಯಿ ಬಾಡಿಯಾದರೆ, ಎತ್ತುಗಳಿಗೆ ಸಾವಿರ ರೂಪಾಯಿ ಎಕರೆ ಬಾಡಿಗೆ ಯಾಗುತ್ತದೆ ಅದು ಸಕಾಲಕ್ಕೆ ಎತ್ತುಗಳ ಎಡೆ ಸಿಗುವುದಿಲ್ಲ. ಟ್ರ್ಯಾಕ್ಟರ್‍ನಿಂದ ಅನುಕೂಲವಾಗಿದೆ.
ಮಲ್ಲು ಕುಂಬಾರ ರೈತ ಆಳಂದ.