ಮಕ್ಕಳಿಗೆ ಶಿಕ್ಷಣದ ಜೊತೆ ಒಳ್ಳೆಯ ಸಂಸ್ಕಾರ ಮತ್ತು ಸಂಸ್ಕøತಿಯನ್ನು ಕಲಿಸಿ : ಶಿವಶಂಕರ ಹಂಜಿ
ಅಥಣಿ :ಆ.25: ಇಲ್ಲಿಯ ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶ್ರಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ರಾಧಾ ಕೃಷ್ಣ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನೂತನ ಅಧ್ಯಕ್ಷ ಶಿವಶಂಕರ ಹಂಜಿ ಮಾತನಾಡಿ ಮಕ್ಕಳ ಮನಸ್ಸು ಹೂವಿನ ಹಾಗ ಇರುತ್ತದೆ, ಹಾಗೂ ಚಿಕ್ಕ ಮಕ್ಕಳಿಗೆ ಯಾವುದೇ ವೇಷಭೂಷಣ ತೊಡಸಿದರೂ ಅಂದ ಚೆಂದವಾಗಿ ಕಾಣುತ್ತಾರೆ. ಹಿಂದಿನ ಇತಿಹಾಸ ತಿಳಿಸುವ ಪಾತ್ರಗಳು ಮಕ್ಕಳಿಗೆ ಅರಿವು ಮೂಡಿಸಲು ಇಂತಹ ಸ್ಪರ್ಧೆಗಳು ಸಹಕಾರಿ, ಚಿಕ್ಕ ಮಗು ಇರುವಾಗಲೇ ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸಬೇಕು. ಶ್ರೀಕೃಷ್ಣನ ಆದರ್ಶವನ್ನು ಮಕ್ಕಳಿಗೆ ತಿಳಿಸುವದು ಇಂದಿನ ಅಗತ್ಯವಾಗಿದೆ. ಇಂದಿನ ಮಕ್ಕಳಲ್ಲಿ ನೆ?ತಿಕತೆ ಕಾಣೆಯಾಗುತ್ತಿದೆ. ಹೀಗಾಗಿ ಪಾಲಕರು ಮಕ್ಕಳಿಗೆ ಉತ್ತಮ ದಾರಿ ತೋರುವಂತಾಗಬೇಕು, ಪರಸ್ಪರ ವಿಶ್ವಾಸ ಪ್ರಿ?ತಿಯಿಂದ ಇರುವಂತೆ ನೋಡಿಕೊಳ್ಳಬೇಕು. ಚಿಕ್ಕ ಮಕ್ಕಳ ಕೈಯಲ್ಲಿ ಪಾಲಕರು ಎಂದಿಗೂ ಮೊಬೆ?ಲ್ ಕೊಡಬಾರದು, ಈ ಮೊಬೈಲ್ ಚಟಕ್ಕೆ ಅಂಟಿಕೊಂಡ ಮಕ್ಕಳಿಗೆ ಓದು ಬರಹದ ಕಡೆಗೆ ಒಲವು ಕಡಿಮೆಯಾಗುತ್ತದೆ. ಆದ್ದರಿಂದ ಪಾಲಕರು ಎಚ್ಚರಿಕೆ ವಹಿಸಬೇಕೆಂದು ಕರೆ ನೀಡಿದರು.
ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಮಹಾಜನ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ವಿಜಯಕುಮಾರ ಬುರ್ಲಿ, ಅಶೋಕ ಜಿ. ಬುರ್ಲಿ , ಶ್ರೀಶೈಲ ಜಿ. ಸಂಕ, ಸುನೀಲ ಐ. ಶಿವಣಗಿ, ಓಂಕಾರೆಪ್ಪಾ ಸಾವಡಕರ ಹಾಗೂ ಸಂಸ್ಥೆಯ ಎಲ್ಲ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಡಳಿತ ಅಧಿಕಾರಿ ಎಚ್ ಆರ್ ಗುಡೋಡಗಿ ಸ್ವಾಗತಿಸಿದರು. ಎಸ್ ಪಿ ಪೀರಗೊಂಡ ನಿರೂಪಿಸಿದರು. ಪಿ ಡಿ ಚನಗೌಡರ ವಂದಿಸಿದರು.