ಪ್ರತಿಭೆ ಗುರುತಿಸಲು ಕಾರಂಜಿ ವೇದಿಕೆ; ಸಿಆರ್‌ಪಿ ಮಂಜುನಾಥ ಅಭಿಮತ
ದೇವದುರ್ಗ,ಆ. ೨೫-
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಒತ್ತಾಯದಿಂದ ಅಕ್ಷರ ಕಲಿಸದೆ ಪ್ರೀತಿಯಿಂದ ಬೋಧನೆ ಮಾಡಬೇಕು. ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಲಿದೆ ಎಂದು ದೇವದುರ್ಗ ಪಟ್ಟಣ ವಲಯ ಸಿಆರ್‌ಪಿ ಮಂಜುನಾಥ ಹೇಳಿದರು.
ಪಟ್ಟಣದ ಬಸವ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ ರಾಯಚೂರು ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಧಿಕಾರಿಗಳು ದೇವದುರ್ಗ, ಇವರುಗಳ ಸಂಯ್ತು ಆಶ್ರಯದಲ್ಲಿ ಆಯೋಜಿಸಿದ್ದ ಪಟ್ಟಣ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಸಾಧನೆ ಎನ್ನುವುದು ಯಾರ ಸೊತ್ತಲ್ಲ. ಪರಿಶ್ರಮ ಪಡುವವನ ಸೊತ್ತು. ಪ್ರಾಥಮಿಕ ಹಂತ ಮಕ್ಕಳ ಕಲಿಕೆಗೆ ಮಹತ್ವದ ಘಟ್ಟ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಶಿಕ್ಷಕರು ಗುರುತಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅನೇಕ ಪ್ರತಿಭೆಯಿದ್ದು ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಪಾಲಕರು ಮಕ್ಕಳನ್ನು ಶಾಲೆಗೆ ದಾಖಲಿಸಿದರೆ ಜವಾಬ್ದಾರಿ ಮುಗಿಯಲ್ಲ. ಶಾಲೆಗೆ ಆಗಾಗ ಭೇಟಿನೀಡಿ ಮಕ್ಕಳ ಪ್ರತಿಭೆ ಅರಿತು ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಈಸಂದರ್ಭದಲ್ಲಿ ತಿರುಪತಿ ಸೂಗೂರು,ಬಿಆರ್‌ಪಿ ಸುರೇಶ, ಶಾಂತಗೌಡ,ಬಸವರಾಜ ಯಾಟಗಲ್,ಶಿವಕುಮಾರ,ಮಹದೇವ, ಶ್ಯಾಂಪ್ರಸಾದ್,ಮುದುಕಪ್ಪ, ಸೇರಿದಂತೆ ಇತರರು ಇದ್ದರು.