ಸಚಿವರ ಮತ್ತು ಶಾಸಕರ ಕಾರ್ಯ ಶ್ಲಾಘನೀಯನಮ್ಮ ನಾಯಕರು ನಮ್ಮ ಹೆಮ್ಮೆ ಕಾಂಗ್ರೆಸ್ ಮುಖಂಡ ಕೆ.ರವಿಕುಮಾರ್ ಮೆಚ್ಚುಗೆ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ ೨೫, ಮಾನವಿ ತಾಲೂಕಿನ ಚಿಕ್ಕಲಪರ್ವಿ ಗ್ರಾಮದ ಹತ್ತಿರದ, ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಬ್ರಿಡ್ಜ್ ಕಮ್ ಬ್ಯಾರೇಜ್ ಯೋಜನೆಗೆ ಸರ್ಕಾರದಿಂದ ೩೯೭. ೫೦ ಕೋಟಿ ರೂಪಾಯಿ ವೆಚ್ಚದಲ್ಲಿ ಅನುಮೋದನೆ ನೀಡಲಾಗಿದ್ದು ಕೋನಪುರ್ ಪೇಟೆಯ ಕಾಂಗ್ರೆಸ್ ಮುಖಂಡ ಕೆ. ರವಿಕುಮಾರ್ ನಮ್ಮ ನಾಯಕರು ನಮ್ಮ ಹೆಮ್ಮೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.
ನಮ್ಮ ಭಾಗದ ಬಹುದಿನಗಳ ಬೇಡಿಕೆಯಾದ ಈ ಯೋಜನೆಯು ಸ್ಥಳೀಯರ ಕನಸು ನನಸಾಗಿಸಲು
ಮೊದಲನೇಯ ಹೆಜ್ಜೆ ಇಟ್ಟಿದೆ. ಜೊತೆಗೆ ನೀರು ಸಂಗ್ರಹಣೆಯಿಂದ ರೈತರ ಕೃಷಿಗೆ ಉಪಯೋಗವಾಗುತ್ತದೆ. ರೈತರಿಗೆ ನೀರಿನ ಸಮಸ್ಯೆ ಬಹಳಷ್ಟು ಕಡಿಮೆಯಾಗಲಿದೆ. ಗ್ರಾಮಗಳಲ್ಲಿ ಒಳ್ಳೆಯ ಪರಿಸರ ವಾತಾವರಣ ನಿರ್ಮಾಣವಾಗಲಿದೆ.
ಗುರುವಾರ ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟದ ಸಭೆಯಲ್ಲಿ ನಮ್ಮ ಭಾಗದ ಜನಪ್ರಿಯ ನಾಯಕರಾದ ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ
ಸಚಿವರಾದ ಎನ್. ಎಸ್.ಬೋಸರಾಜು ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ಅವರು ಚೀಕಲಪರ್ವಿ ಬಳಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ೩೯೭.೫೦ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಸರಕಾರದ ಮೇಲೆ ಒತ್ತಡದ ಹೇರಿ ಅನುಮೋದನೆ ನೀಡಿಸಿದ್ದಾರೆ.
ನಮ್ಮ ಭಾಗದ ರೈತರಿಗೆ ನೀರಿನ ಅನುಕೂಲ ಮಾಡುವದು ನಮ್ಮ ನಾಯಕರ ಕನಸಾಗಿತ್ತು.
ನಮ್ಮ ಮಾನವಿ ತಾಲೂಕಿನ ಅಭಿವೃದ್ಧಿಗೆ ಪಣತೊಟ್ಟು ಈ ಯೋಜನೆಯನ್ನು ಸರ್ಕಾರದಿಂದ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬ್ರಿಡ್ಜ್ ಕಮ್ ಬ್ಯಾರೇಜ್ ನಿಂದ
ಈ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಜೊತೆಗೆ ಪಟ್ಟಣದ ಅಂಬೇಡ್ಕರ್ ನಗರ, ಕೋನಪುರ್ ಪೇಟೆ ದೊಡ್ಡದಾಗಿ ಅಭಿವೃದ್ಧಿಯಾಗಲಿದೆ ಹಾಗೂ ಬಂಡವಾಳ ಹೂಡಿಕೆಗೆ ಈ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ. ನಮ್ಮ ಜಿಲ್ಲೆಯ ನಾಯಕರು ನಮ್ಮ ಹೆಮ್ಮೆ ಎಂದು ಸಚಿವರ ಮತ್ತು ಶಾಸಕರ ಕಾರ್ಯಕ್ಕೆ ಕೋನಪುರ್ ಪೇಟೆಯ ಕಾಂಗ್ರೆಸ್ ಮುಖಂಡ ಕೆ. ರವಿಕುಮಾರ್ ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.