ಕಂದಾಯ ನಿರೀಕ್ಷಕ ಚರಣ್ ಸಿಂಗ್ ಮೇಲೆ ಸೂಕ್ತ ಕಾನೂನು ಕೈಗೊಳ್ಳಿ.
ಮಾನವಿ ತಾಲೂಕಿನ ಜಾಗೀರಪನ್ನೂರು ಗ್ರಾಮದ ಮೋದಗುಂಟ ಹಳ್ಳದ ಸೇತುವೆ ಮತ್ತು ಜುಮಾಲಿ ಮನೆಯಿಂದ ಬಸವಗುಡಿಯವರೆಗೆ ರಸ್ತೆ ಅಭಿವೃದ್ಧಿಗೆ ತಾಲೂಕಿನ ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕ ಚರಣ್ ಸಿಂಗ್ ಇವರು ಜಾಗೀರಪನ್ನೂರು ರಸ್ತೆಯ ಕಾಮಗಾರಿಗೆ ನಿರ್ಲಕ್ಷ ತೋರುತ್ತಿದ್ದಾರೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ ೨೫, ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯಾ ಸಮಿತಿಯ ಸದಸ್ಯರಾದ ಅಬ್ರಹಾಂ ಜಾಗೀರಪನ್ನೂರು ಅವರು ತಾಲೂಕಿನ ಜಾಗೀರಪನ್ನೂರು ಗ್ರಾಮದ ಮೋದಗುಂಟ ಹಳ್ಳದ ಸೇತುವೆ ಮತ್ತು ಜುಮಾಲಿ ಮನೆಯಿಂದ ಬಸವಗುಡಿಯವರೆಗೆ ಇರುವ ರಸ್ತೆಯು ತುಂಬಾ ಹದಗೆಟ್ಟು ಗ್ರಾಮಕ್ಕೆ ಸುಮಾರು ಒಂದು ವಾರದಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ.
ನಮ್ಮ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ಈ ಕುರಿತು ಮಾನ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಉಪವಿಭಾಗ ಮಾನವಿ ಯವರಿಗೆ ರಸ್ತೆ ದುರಸ್ಥಿ ಮಾಡುವಂತೆ ವಿನಂತಿಸಿಕೊಂಡರೂ ಯಾವುದೇ ರೀತಿಯ ಕ್ರಮ ಜರುಗಿಸುತ್ತಿಲ್ಲಾ. ಅಧಿಕಾರಿಗಳ ನಿರ್ಲಕ್ಷದಿಂದ ತಾಲೂಕಿನ ಜಾಗೀರಪನ್ನೂರು, ನಲಗಂದಿನ್ನಿ ಹಾಗೂ ಯಡಿವಾಳ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ನಂತರ ಮಾತನಾಡಿದ ತಾಲೂಕು ಅಧ್ಯಕ್ಷರಾದ ಸದಾನಂದ ಜಾಗೀರಪನ್ನೂರು ಅವರು ಗ್ರಾಮದ ಸರ್ವೆ ನಂ: ೧೩೦ ಸರಕಾರಿ ಜಮೀನಿನಲ್ಲಿ ಕಾಲುದಾರಿಗೆಂದು ಬಿಟ್ಟಿದ್ದ ಜಾಗದ ಮಧ್ಯದಲ್ಲಿ ಮನೆಗಳನ್ನು ಕಟ್ಟಿದ್ದಾರೆ ಇದನ್ನು ನಾವು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ
ಜಿಲ್ಲಾಧಿಕಾರಿಗಳು ಸಹ ತಶೀಲ್ದಾರ್ ಅವರಿಗೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಿಕೋಡಿ ಎಂದು ಸೂಚಿಸಿದ್ದಾರೆ.
ಆದರೆ ಮಾನವಿ ತಾಲೂಕು ತಹಸೀಲ್ದಾರರಾದ ರಾಜು ಪಿರಂಗಿ ಹಾಗೂ ಕಂದಾಯ ನಿರೀಕ್ಷಕರಾದ ಚರಣ್ ಸಿಂಗ್ ಇವರುಗಳು ಸೇರಿಕೊಂಡು ಯಾವುದೇ ರೀತಿಯ ಸ್ಥಳ ಪರಿಶೀಲನೆ ಮಾಡದೆ ಕಾಲಹರಣ ಮಾಡುತ್ತ ಸಾರ್ವಜನಿಕರ ಜೊತೆ ಚಲ್ಲಾಟ ಆಡುತ್ತಿದ್ದಾರೆ
ಕೆಲಸದ ಮೇಲೆ ತೀರಾ ನಿಷ್ಕಾಳಜಿ ವಹಿಸುತ್ತಿದ್ದಾರೆ.
ಕೂಡಲೇ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಮಾನವಿ, ತಹಸೀಲ್ದಾರರಾದ ರಾಜು ಪಿರಂಗಿ ಹಾಗೂ ಕಂದಾಯ ನಿರೀಕ್ಷಕರಾದ ಚರಣ್ ಸಿಂಗ್ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ವಸಂತ ಕೊಟ್ಟೆಕಲ್, ಚನ್ನಕೇಶವ ರೆಡ್ಡಿ, ಗ್ರಾಮಸ್ಥರಾದ ಬಸವರಾಜ ಹೇರಡ್ಡಿ, ಹನುಮಂತ, ಬಸವಲಿಂಗ,ವಿರೇಶ್ ಉಪಸ್ಥಿತರಿದ್ದರು.