ಜಗಮಗಿಸಿದ ಸ್ಟಾರ್ ದುತಿಸಾಂಪ್ರದಾಯಿಕ ಶೈಲಿಯ ಪ್ಯಾಷನ್ ಶೋ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,25 : ಶ್ರೀ ಮಾತೃ ಮಹಿಳಾ ಮಂಡಳಿ ನಿನ್ನೆ ಸಂಜೆ ನಗರದ  ಜೋಳದ ರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ  ಪ್ರಥಮವಾಗಿ ಬಳ್ಳಾರಿ ಸ್ಟಾರ್ ದುತಿ, ದಕ್ಷಿಣ ಭಾರತದ ಸಾಂಪ್ರದಾಯಿಕ ಫ್ಯಾಷನ್  ಶೋ ಹಮ್ಮಿಕೊಂಡಿತ್ತು.
ಜವಳಿ ಮತ್ತು ಕೈಮಗ್ಗ್ಯ ಇಲಾಖೆ ಉಪನಿರ್ದೇಶಕ ಅಜಿತ್ ನಾಯಕ್  ಕಾರ್ಯಕ್ರಮ  ಉದ್ಘಾಟಿಸಿ.  ಕಾಲೇಜಿನ ವಿದ್ಯಾರ್ಥಿನಿಯರು ಇದರಲ್ಲಿ ಪಾಲ್ಗೊಂಡಿದ್ದಾರೆ. ಇಂದಿನ ಅಧುನಿಕ ಜಗತ್ತಿನಲ್ಲಿ ಪ್ಯಾಷನ್ ಬೆಳವಣಿಗೆಯೂ ಮುಖ್ಯವಾಗಿದೆಂದರು.
ಉದ್ಯಮಿ ಜೋಳದ ರಾಶಿ ತಿಮ್ಮಪ್ಪ  ಮುಖ್ಯ ಅತಿಥಿಗಳಾಗಿ ಆಗಮಿಸಿ. ಇಂತಹ ಕಾರ್ಯಕ್ರಮ ರೂಪಿಸಿರುವುದು  ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.
ಶಾಂತಿ ಶಂಕರ್ ಅವರು, ಹೆಣ್ಣು ಮಕ್ಕಳು ಮನೆ ಒಳಗೆ ಅಡುಗೆ ಮಾಡುವುದು ಒಂದೇ   ಅಲ್ಲ  ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ನದೇ ಆದ ಪ್ರತಿಭೆ ಪ್ರದರ್ಶನ ಮಾಡಬೇಕೆಂದರು.
ಕಲಾವಿದ ಶಂಕರ ಬಂಡೆ ಎಲ್ಲನಗೌಡ ಮಾತನಾಡಿ,  ಮಹಿಳೆಯರಿಗಾಗಿ ಹಾಡಿ ರಂಜಿಸಿದರು. ದಿನೇಶ್ ಚರಿಪಲ್ಲಿ ಮಕ್ಸ್ ಗ್ಲೋಬಲ್ ಫೌಂಡೇಶನ್ ಹೈದರಾಬಾದ್ ಸಂಸ್ಥೆಯಲ್ಲಿ ಮಾಡುತ್ತಿರುವ  ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೊಟ್ಟರು.
 ಪ್ಯಾಷನ್ ಶೋನ  ತೀರ್ಪುಗಾರರಾಗಿ ಫರಿದವಾಸಿ, ನವೀನ ಪೂಜಾರಿ, ಲಕ್ಷ್ಮಿ ಪವನ್ ಕುಮಾರ್ ಆಗಮಿಸಿದ್ದರು.
ಪ್ರಥಮ ಬಹುಮಾನ ಜ್ಯೋತಿ.ಕೆ, ದ್ವಿತೀಯ ಬಹುಮಾನ ಉನ್ನವ ರಮ್ಯ, ಮೂರನೇ ಬಹುಮಾನ ಚಾಂದನಿ ಅವರು ಗಳಿಸಿದರು.
 ವಿಜೇತರಿಗೆ ಪಾಲಿಕೆ ಸದಸ್ಯ ಹನುಮಂತಪ್ಪ, ಅಶೋಕ್ ಗಣಿ ಪ್ರೈವೇಟ್ ಲಿಮಿಟೆಡ್, ಎಸ್ ಆರ್ ಎಂ ಪ್ರಿಪರೇಟರ,ಬಹುಮಾನ ವಿತರಿಸಿದರು, ಕೆ ಪುಷ್ಪ ಚಂದ್ರಶೇಖರ್ ವಂದಿಸಿದರು.
ಸದಸ್ಯರಾದ ಜ್ಯೋತಿ ಮಮತಾ ಸುನೀತಾ ರೂಪ ಶೃತಿ ರೇಣು, ಹಾಗೂ ಮುರಾರ್ಜಿ ಶಾಲೆ ಪ್ರಾಂಶುಪಾಲರ ಅನಸಯ್ಯ ಅವರು ಉಪಸ್ಥಿತರಿದ್ದರು. ತಾಂಡವ ನೃತ್ಯ ಕಲಾ ಟ್ರಸ್ಟ್, ಸುಜಾತಮ್ಮ ಕಳ ಟ್ರಸ್ಟ್, ಹಾಗೂ ಶಿವಮುಕಿ ಆರ್ಟ್ಸ್ ಅಕಾಡೆಮಿ ಇವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು, ಹಾಗೆ ವಿನೋದ್ ಕುಮಾರ್ ಹಾಗೂ ದೀಯಾ ಅವರು  ನಿರೂಪಣೆ ಮಾಡಿದರು.