ಸಂಗೋಳ್ಳಿ ರಾಯಣ್ಣ ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ ಕ್ರಿಡಾಕೂಟ
ಬೀದರ: ಆ.25:2024-25 ನೇ ಸಾಲಿನ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಕ್ರೀಡಾಕೂಟಗಳು ಸಂಗೊಳ್ಳಿ ರಾಯಣ್ಣ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಮಾಜಿ ಮುಖ್ಯ ಗುರುಗಳು ರವರಾದ ರಘುನಾಥ ಭೂರೆ, ಇವರು ಮಕ್ಕಳಿಗೆ ಕ್ರಿಡೆಯಿಂದ ಉತ್ಸಾಹರಾಗಲು ಹಾಗೂ ಮಕ್ಕಳ ಆರೋಗ್ಯ ಬಲಿಷ್ಠವಾಗುತ್ತದೆ ಎಂದು ನುಡಿದರು. ಮತ್ತು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸತಕ್ಕಂತಹ ತಾಲೂಕ ದೈಹಿಕ ಶಿಕ್ಷಣ ಅಧಿಕಾರಿಯಾದ ಎ.ಕೆ. ಜೋಶಿ ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಮೊಬೈಲ ಕೊಡುವುದನ್ನು ಬಿಟ್ಟು ತನ್ನ ಶೈಕ್ಷಣಿಕ ಮತ್ತು ಆರೋಗ್ಯದ ಕಡೆ ನಿಗವಹಿಸಲು ತಿಳಿಸದ್ದರು.
ಶಾಲೆಯ ಮುಖ್ಯ ಗುರುಗಳಾದ ಜಾಧವ ರಾಮಶೇಟ್ಟಿ, ಅಧ್ಯಕ್ಷಿಯ ಮಾತನಾಡಿ ಇಂದಿನ ಮಕ್ಕಳಿಗೆ ಮೊಬೈಲ ಬಂದಿದ್ದರಿಂದ ಮಕ್ಕಳು ಬಹಳ ಗಂಭೀರ ಸ್ಥೀತಿಯಿಂದ ತನ್ನ ಬುರುಡೆಯನ್ನು ಬಿಜಿ ಮಾಡಿ ಕೊಂಡಿದಾರೆ, ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಹಾಗೂ ಮಗು ನಗುವಿನಿಂದ ವಂಚಿತರಾಗುತ್ತಾರೆ ಮಕ್ಕಳಿಗೆ ನಗುವುದು ಅತಿ ಅವಶ್ಯಕವಾಗಿದೆ ಎಂದು ನುಡಿದರು.
ಕಾರ್ಯಕ್ರಮವನ್ನು ಶ್ರೀಪತಿ ಮೇತ್ರೆ ದೈಹಿಕ ಶಿಕ್ಷಕರು ಇವರು ಸಂಚಾಲನೆ ಮಾಡಿದ್ದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂಜು ಸೂರ್ಯವಂಶಿ, ತಾಲೂಕ ಅಧ್ಯಕ್ಷರಾದ ವೆಂಕಟರಾವ ಡುಬಾಳೆ, ಹಾಗೂ ವಿವಿಧ ಶಾಲೆಗಳಿಂದ 20 ಶಿಕ್ಷಕರು ನಿರ್ಣಾಯಕ ಕಾರ್ಯವನ್ನು ನಿರ್ವಹಿಸಿದ್ದರು. ವಿವಿಧ ಶಾಲೆಗಳಿಂದ 150 ಮಕ್ಕಳು ಭಾವಹಿಸಿದ್ದರು.