ವೀರಶೈವ ಮಹಾಸಭಾ ರಾಜ್ಯ ಕಾರ್ಯಕಾರಿ ಚುನಾವಣೆಮಂದಗತಿಯ ಮತದಾನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ 25 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 27 ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ಇಂದು ಬೆಳಿಗ್ಗೆ 8 ರಿಂದ ಮತದಾನ ಕಾರ್ಯ ಆರಂಭಗೊಂಡಿದ್ದು ಮತದಾನ ಮದಗತಿಯಲ್ಲಿ ಸಾಗಿದೆ. ಬೆಳಿಗ್ಗೆ 11.30ಕ್ಕೆ ಶೇ.30ರಷ್ಟು ಮತದಾನವಾಗಿತ್ತು. ಸಂಜೆ 5 ರ ವರೆಗೆ ಮತದಾನ ನಡೆಯಲಿದೆ.
ಜಿಲ್ಲೆಯಲ್ಲಿ ಬಳ್ಳಾರಿ ಮತ್ತು ಸಿರುಗುಪ್ಪ ನಗರದಲ್ಲಿ ಮಾತ್ರ ಮತಗಟ್ಟೆ ಸ್ಥಾಪಿಸಿದೆ. ಬಳ್ಳಾರಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ಹೈಸ್ಕೂಲ್ ನಲ್ಲಿ
 5 ಬೂತ್ ಗಳನ್ನು ವ್ಯವಸ್ಥೆ ಮಾಡಿದೆ. ಬಳ್ಳಾರಿ ನಗರದ1503  ಮತದಾರರಿಗೆ  ನಾಲ್ಕು. ಉಳಿದಂತೆ ಕುರುಗೋಡಿನ 151, ಕಂಪ್ಲಿಯ 136 ಮತ್ತು ಸಂಡೂರಿನ 225 ಮತದಾರರಿಗೆ ಒಂದು .  ಮತ್ತೊಂದಡೆ  ಸಿರುಗುಪ್ಪ ನಗರದ ವಿವೇಕಾನಂದ ಶಾಲೆಯಲ್ಲಿ ಆ ತಾಲೂಕಿನ  474  ಮತದಾರರು ಮತದಾನ‌ ಮಾಡಲು ವ್ಯವಸ್ಥೆ ಮಾಡಿದೆ.
ಚುನಾವಣೆಯ ಸಹಾಯಕ ಅಧಿಕಾರಿ ಡಾ.ವಿ.ಎಸ್.ಪ್ರಭಯ್ಯ ಮತದಾನ ಪ್ರಕ್ರಿಯೆಗೆ 25 ಜನ ಸಿಬ್ಬಂದಿಯನ್ನು ನೇಮಕ‌ಮಾಡಿಕೊಂಡಿದೆ. ಮತದಾನ ಮುಗಿದ ನಂತರ ಮತಗಳ ಎಣಿಕೆ ಮಾಡಿ ಫಲಿತಾಂಶದ ವರದಿಯನ್ನು ಬೆಂಗಳೂರಿಗೆ ಕಳುಹಿಸಲಿದೆ ಎಂದು ತಿಳಿಸಿದರು.
ಒಬ್ಬ ಮತದಾರ 27 ಸ್ಪರ್ಧಾಳುಗಳಿಗೆ ಮತ ಚಲಾಯಿಸಬೇಕಿದೆ.
ಬಳ್ಳಾರಿ ಜಿಲ್ಲೆಯಿಂದ  ಅಂಗಡಿ ಶಂಕ್ರಪ್ಪ, ಕರೀಗೌಡ, ನಂದೀಶ್ ಮಠಂ ಹಾಗು ಗೋನಾಳ್ ರಾಜಶೇಖರಗೌಡ ಸ್ಪರ್ಧೆ ಮಾಡಿದ್ದಾರೆ.
ಸ್ಪರ್ಧಿಸಿರುವ ಇವರು ಮತ್ತು ಇವರ ಬೆಂಬಲಿಗರು ಮತಗಟ್ಟೆ ಮುಂಭಾಗದಲ್ಲಿ ನಿಂತು ತಮಗೆ ಮತ ನೀಡುವಂತೆ ಕೋರುತ್ತಿದ್ದಾರೆ.