ಪ್ರತಿಭಾ ಪುರಸ್ಕಾರ,ಬ್ಯಾಗ್ ವಿತರಣೆ
ಚಿಕ್ಕಬಳ್ಳಾಪುರ.ಆ೨೪:ಜಿಲ್ಲೆಯ ಯಶ್ವಂತ್ ಅಕಾಡೆಮಿ ಆಫ್ ಕಲ್ಚರಲ್ ಫಿಲಂ ಅಂಡ್ ರಿಸರ್ಚ್ ಅಂಡ್ ಇನ್ಸ್ಟಿಟ್ಯೂಟ್ ವತಿಯಿಂದ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸ್ಕೂಲ್ ಬ್ಯಾಗ್ ವಿತರಣೆ ಸಾಂಸ್ಕೃತಿಕ ಸುಗ್ಗಿಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು.
ಕಳೆದ ೧೬ ಇಪ್ಪತ್ತು ವರ್ಷಗಳಿಂದ ಸಮಾಜದ ಬಡ ಮಕ್ಕಳಿಗೆ ವಿದ್ಯಾರ್ಥಿ ಉತ್ತೇಜನ ನೀಡುತ್ತಿದ್ದೇವೆ ಸಂಸ್ಕೃತಿಕವಾಗಿ ವೇದಿಕೆಯನ್ನು ಸೃಷ್ಟಿಮಾಡಿ ಬಡ ಮಕ್ಕಳ ಕಲೆಯನ್ನು ಹೊರ ಹಾಕುವಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ ಹೌದು ಚಿಕ್ಕಬಳ್ಳಾಪುರವು ಮಿನಿ ಸಂಸ್ಕೃತಿಕ ನಗರ ಎಂಬುವುದರಲ್ಲಿ ವಂಶಯವಿಲ್ಲ, ಎಷ್ಟೋ ಜನ ಬಡ ಕಲಾವಿದರಿಗೆ ವೇದಿಕೆಗಳು ಬರವಾಗಿರುವ ಹಿನ್ನೆಲೆಯಲ್ಲಿ ಯಶ್ವಂತ್ ಅಕಾಡೆಮಿಯ ಕಲ್ಚರಲ್ ಫಿಲಂ ಸೇನ್ಸರ್ಸ್ ಸೆಂಟರ್ ರಿಸರ್ಚ್ ಇನ್ಸ್ಟಿಟ್ಯೂಟ್ ಅನೇಕ ಕಲಾವಿದರಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ
ಹಲವಾರು ಹಳ್ಳಿ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ವಿದ್ಯೆ ಮತ್ತು ಕಲೆಗೆ ನೀಡುತ್ತಿರುವ ಏಕೈಕ ಸಂಸ್ಥೆ ನಮ್ಮ ಸಂಸ್ಥೆಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ಎಮ್ ಶ್ರೀನಿವಾಸ್ ತಿಳಿಸಿದರು
ಮೊದಲಿಗೆ ಕಾರ್ಯಕ್ರಮದ ಅಪ್ರಾಸ್ತಾವಿಕ ನುಡಿಯನ್ನ ಅಭಿಲಾಶ್ ಕೆ ವಿ ವಕೀಲರು ಹಾಗೂ ಜಂಟಿ ಕಾರ್ಯದರ್ಶಿ ವಕೀಲರ ಸಂಘದ ಚಿಕ್ಕಬಳ್ಳಾಪುರ ನುಡಿದರು
ಕಲೆ ಯಾರಪ್ಪನ ಸ್ವತ್ತು ಅಲ್ಲ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಮೊದಲನೆಯ ಸ್ಥಾನದಲ್ಲಿ ಇರುವಂತಹ ಯಶವಂತ್ ಅಕಾಡೆಮಿ ಕಲ್ಚರಲ್ ಫಿಲಂ ಸೈನ್ಸ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ತುಂಬಾ ಹರ್ಷದಾಯಕ್ತವಾಗಿದೆ ಅದರಲ್ಲೂ ಈ ಸಂಸ್ಥೆಯು ಅತಿ ಹೆಚ್ಚು ಬಡ ಮಕ್ಕಳ ಶ್ರೇಯ ಅಭಿವೃದ್ಧಿಗೆ ಶ್ರಮಿಸುವಲ್ಲಿ ಮತ್ತು ಒಳ್ಳೆ ವೇದಿಕೆಗಳನ್ನ ನೀಡುವ ಮುಖಾಂತರ ಮಕ್ಕಳಿಗೆ ಆಸರೆಯಾಗಿದೆ ರಾಜಕಾರಣಿಗಳು ಸಮಾಜಸೇವೆ ಹೆಸರಿನಲ್ಲಿ ಕೆಲವೊಂದು ದ್ರೋಹ ಬಾಗಿಯುವಂತಹ ಕೆಲವು ವ್ಯಕ್ತಿಗಳ ಮಧ್ಯೆ ಇಂತಹ ಕೆಸರಿನಲ್ಲಿ ಅರಳುವ ಕಮಲದ ಹಾಗೆ ತುಂಬಾ ಆತ್ಮೀಯವಾಗಿ ವೇದಿಕೆಗಳನ್ನ ಕೊಡುತ್ತಿದ್ದಾರೆ
ಈ ಸಂಸ್ಥೆಯು ಯಾವುದೇ ಜಾತಿ ಧರ್ಮ ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ಧರ್ಮ ಜಾತಿ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಮತ್ತು ಸಮತೆಯ ರೀತಿಯಲ್ಲಿ ಅಭಿನಂದನೆ ಪ್ರೋತ್ಸಾಹ ಮತ್ತು ಸನ್ಮಾನಗಳು ಮಾಡುತ್ತಿದೆ ಸಮಾಜದ ಕಲಾವಿದರು ತುಂಬಾ ಆಭಾರಿಯಾಗಿರುತ್ತೇವೆ ಎಂದು ವೆಂಕಟರೋಣಪ್ಪ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಸಮತಾ ಸೈನಿಕ ದಳ ಚಿಕ್ಕಬಳ್ಳಾಪುರ ಹೇಳಿದರು
ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾಪುರ ಮಾಜಿ ಶಾಸಕರು ಆಗಿರುವ ಕೆಪಿ ಬಚ್ಚೇಗೌಡರು ಉದ್ಘಾಟಿಸಿ ಮಾತನಾಡುತ್ತಾ ಮಂಚನಬಲೆ ಶ್ರೀನಿವಾಸ್ ರವರು ತುಂಬಾ ಹಳೆಯ ಕಲಾವಿದರಲ್ಲಿ ಒಬ್ಬರಾಗಿದ್ದು ಕಲಾವಿದರ ನೋವು ನಲುವಿಗಳನ್ನ ನೋಡಿ ನಂತರ ಅವರಿಗೆ ವೇದಿಕೆಗಳನ್ನ ಸೃಷ್ಟಿ ಮಾಡುವುದರಲ್ಲಿ ತುಂಬಾ ಪರಿಣಿತರಾಗಿದ್ದಾರೆ ಹಾಗೂ ಸಮಾಜದ ಅಭಿವೃದ್ಧಿಪಡಿಸುವಲ್ಲಿ ಶ್ರೀನಿವಾಸ್ ಮತ್ತು ತಂಡದವರ ಪಾತ್ರ ತುಂಬಾ ಅಮೂಲ್ಯವಾದದ್ದು ಹಾಗೂ ಸಂಸ್ಥೆಯು ಒಳ್ಳೆ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು
ಅನೇಕ ಗಣ್ಯ ವ್ಯಕ್ತಿಗಳು ಹಾಜರಿದ್ದು ಮಂಚನಬಲೆ ಎಂ ಶ್ರೀನಿವಾಸ್ ಅಧ್ಯಕ್ಷರು ಯಶ್ವಂತ್ ಅಕಾಡೆಮಿ ಆಫ್ ಕಲ್ಚರಲ್ ಫಿಲಂ ಸೆನ್ಸಸ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ಚಿಕ್ಕಬಳ್ಳಾಪುರ, ಕಾರ್ಯದರ್ಶಿಗಳು ಅಕಾಡೆಮಿ ಆಫ್ ಕಲ್ಚರಲ್ ಫಿಲಂ ಸೆನ್ಸಸ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್, ಪಾವಗಡ ಶ್ರೀ ರಾಮ್ ಸಂಸ್ಥಾಪಕ ಅಧ್ಯಕ್ಷರು ಮಾದಿಗ ದಂಡೋರ ಮತ್ತು ಹೈಕೋರ್ಟ್ ವಕೀಲರು ಬೆಂಗಳೂರು, ಪ್ರೆಸ್ ಸುಬ್ಬರಾಯಪ್ಪ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಗುಡಿಬಂಡೆ, ಎಂಪಿ ಉಪೇಂದ್ರ ಸಮಾಜಸೇವಕರು ಮಂಡಿಕಲ್ ಚಿಕ್ಕಬಳ್ಳಾಪುರ, ಮದು ಗ್ರಾಮ ಪಂಚಾಯ್ತಿ ಸದಸ್ಯರು ಮಂಚನಬೆಲೆ, ಕೃಷ್ಣಾಚಾರಿ ಎ ಜಿಲ್ಲಾಧ್ಯಕ್ಷರು ನಮ್ಮ ಕರ್ನಾಟಕ ಅಹಿಂದ ಜನಪದ ವೇದಿಕೆ ಚಿಕ್ಕಬಳ್ಳಾಪುರ, ಉಮೇಶ್ ಜಿ ಅಧ್ಯಕ್ಷರು ವರುಣ ಸೇವಾ ಟ್ರಸ್ಟ್ ಚಿಕ್ಕಬಳ್ಳಾಪುರ, ನಂಜುಂಡಯ್ಯ ಹೆಚ್ ಆರಕ್ಷಕ ಉಪನಿಧಿಕ್ಷಕರು ನಗರ ಠಾಣೆ ಚಿಕ್ಕಬಳ್ಳಾಪುರ ಮತ್ತು ಎಲ್ಲಾ ವಿದ್ಯಾರ್ಥಿಯ ವಿದ್ಯಾರ್ಥಿನಿಯರು ಮತ್ತು ಕಲಾಬಳಗ ಉಪಸ್ಥಿತರಿದ್ದರು