ಶೈಕ್ಷಣಿಕ ಪ್ರಗತಿಯಿಂದ ಅಭಿವೃದ್ಧಿ ಸಾದ್ಯ
ಮಾಲೂರು ಆ ೨೪: ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ವಿದ್ಯಾರ್ಥಿಗಳು ಶಿಸ್ತು ಸಂಯಮ ಸಮಯ ಪಾಲನೆ ಏಕಾಗ್ರತೆ ಅಳವಡಿಸಿಕೊಂಡು ಸತತ ಪರಿಶ್ರಮದಿಂದ ಓದಿನಲ್ಲಿ ತೊಡಗಿಸಿಕೊಂಡರೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಬಹುದು ಎಂದು ನಿವೃತ್ತ ಪ್ರಾಂಶುಪಾಲ ನಟರಾಜ್ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ೨೦೦೩-೦೬ನೇ ಸಾಲಿನ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಗುರುವಂದನ ಕಾರ್ಯಕ್ರಮ ಇದೊಂದು ದೊಡ್ಡ ಸಂಭ್ರಮದ ವಾತಾವರಣವನ್ನು ಮೂಡಿಸಿದೆ ಆಗಿನ ವಿದ್ಯಾರ್ಥಿಗಳ ಉತ್ಸಾಹ ಸಂಭ್ರಮ ೧೮ ವರ್ಷಗಳ ಹಿಂದಿನ ನೆನಪು ಮೆಲುಕು ಹಾಕುವಂತಾಯಿತು.
ಹಳೆಯ ವಿದ್ಯಾರ್ಥಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ರೆಡ್ಡಿ ಮಾತನಾಡಿ ೨೦೦೩-೦೬ನೇ ಸಾಲಿನ ಬಿಎ, ಬಿಕಾಂ, ಮಾಡುತ್ತಿರುವಾಗ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಉತ್ತಮ ರೀತಿಯಲ್ಲಿ ಬೋಧನೆ ಮಾಡುವುದರ ಜೊತೆಗೆ ನಮ್ಮ ಜೀವನಕ್ಕೆ ಅಗತ್ಯವಾಗಿರುವ ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಕಾಲೇಜು ಜೀವನ ಚಿನ್ನದ ಜೀವನ ಎಂಬಂತೆ ನಾವು ಓದುವಾಗ ನಮ್ಮ ಸ್ನೇಹಿತರು ನಾವು ಅವರೊಂದಿಗೆ ಸ್ನೇಹ ಶಿಕ್ಷಕರು ನಮಗೆ ನೀಡಿದ ಮಾರ್ಗದರ್ಶನ ಇವೆಲ್ಲವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರಿಂದ ಸಮಾಜದಲ್ಲಿ ಉತ್ತಮ ಪ್ರಜೆಯಾಗುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದೇವೆ.ಸ್ನೇಹಿತರೆಲ್ಲರೂ ಒಗ್ಗೂಡಿ ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ್ದಾರೆ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ೨೦೦೩-೦೬ ನೇ ಸಾಲಿನ ನಿವೃತ್ತ ಪ್ರಾಂಶುಪಾಲರಾದ ನಟರಾಜ್, ಶಂಕರನಾರಾಯಣ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಶ್ವತ್ ನಾರಾಯಣ, ಹೊಸಕೋಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮುನಿನಾರಾಯಣಪ್ಪ, ಪ್ರಾಧ್ಯಾಪಕರಾದ ಅನಂತಮೂರ್ತಿ, ಮುನಿಯಪ್ಪ, ಅಮೃತ, ಶ್ರೀಕಾಂತ್, ಸೋಮಶೇಖರ್, ವರಲಕ್ಷ್ಮಿ, ಅಂಜಲಿ, ಚಿಕ್ಕರಾಜು, ಸೌಭಾಗ್ಯ, ರವೀಂದ್ರ, ಮುನಿರಾಜು, ವಿನುತಾ, ಡಾ.ಲಕ್ಷ್ಮಿ ಗ್ರಂಥಪಾಲಕ ವೇಣು, ಅನಂತರಾಜು, ಅವರನ್ನು ಗುರುವಂದನ ಸಲ್ಲಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ರಾಘವೇಂದ್ರ, ಡಿವಿ ವೆಂಕಟೇಶ್, ಲಕ್ಷ್ಮಿಕಾಂತಗೌಡ, ಮುರಳಿ, ಪ್ರಸಾದ್, ಮಹೇಶ್, ಸುಬ್ರಮಣಿ, ಶಂಕರ್, ಪ್ರಕಾಶ್ ರೆಡ್ಡಿ, ನವೀನ್, ಮಂಜುನಾಥ್, ಸಂಪತ್, ಬೈರೇಗೌಡ, ಪದ್ಮಶ್ರೀ, ಶೈಲಾ, ಮಂಜುಳಾ, ಸವಿತಾ, ಶಿಲ್ಪ, ಇನ್ನಿತರರು ಹಾಜರಿದ್ದರು.