ಸದಸ್ಯತ್ವ ನೋಂದಣಿ ಅಭಿಯಾನ ಸದುಪಯೋಗಕ್ಕೆ ಕರೆ
ಚಿಕ್ಕಬಳ್ಳಾಪುರ,ಆ೨೪:ಜಮಾತ್ ಅಹಲೆ ಇಸ್ಲಾಂ ಚಿಕ್ಕಬಳ್ಳಾಪುರ ಸಂಸ್ಥೆಯ ೩೧ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದ್ದು,ಮತ ಚಲಾಯಿಸಲು ಸದಸ್ಯತ್ವ ನೋಂದಣಿ ಅಭಿಯಾನ ಶುರುವಾಗಿದೆ.ನಗರದ ಮುಸ್ಲಿಂ ಬಾಂಧವರು ಈ ಕೂಡಲೇ ನೋಂದಣಿ ಮಾಡಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಂ. ಬಾಷಾ ಮನವಿ ಮಾಡಿದ್ದಾರೆ.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಪ್ರತಿಷ್ಠಿತ ಮುಸ್ಲಿಂ ಸಂಸ್ಥೆಯಾದ ಜಮಾತ್ ಅಹಲೆ ಇಸ್ಲಾಂಗೆ ಚುನಾವಣೆ ನಡೆಯದೇ ಅಡಳಿತಾಧಿಕಾರಿಯಾಗಿ ಸುಮಾರು ವರ್ಷಗಳ ಕಾಲ ಹಲವರು ಆಡಳಿತಾಧಿಕಾರ ನಡೆಸಿಕೊಂಡು ಬಂದಿರುತಿದ್ದರೆ ಆದರೆ ಸಂಸ್ಥೆಯ ನಿಯಮ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು,ಕಳೆದ ವರ್ಷ ಚುನಾವಣೆ ಸಮಯ ನಿಗಧಿ ಮಾಡಿ ಜಮಾತ್ ಅಹಲೆ ಇಸ್ಲಾಂ ಸದಸ್ಯತ್ವ ಅಭಿಯಾನಕ್ಕೆ ರಾಜ್ಯ ವಕ್ಫ್ ಮಂಡಳಿ ಆದೇಶ ಹೊರಡಿಸಿದೆ.
ಇನ್ನು ಅದರ ಸದಸ್ಯತ್ವ ನೋಂದಾವಣೆಗೆ ಸುಮಾರು ೧೦ ಸಾವಿರ ಪುರುಷ ಮತದಾರರು ಇದ್ದರೂ ಕೇವಲ ೨೫೦೦ ಸದಸ್ಯರ ನೋಂದಣಿ ಮಾತ್ರ ನಡೆದಿತ್ತು ಹೆಚ್ಚಿನ ಸದಸ್ಯತ್ವಕ್ಕೆ ಸಮಯಾವಕಾಶ ಕೇಳಿದರು ನಮ್ಮ ಮಾತನ್ನು ಪರಿಗಣಿಸಲಿಲ್ಲ ನಾವು ಕೋರ್ಟ್ ಮೊರೆ ಹೋಗಿದ್ದು ತದನಂತರ ಹೆಚ್ಚಿನ ಸದಸ್ಯತ್ವಕ್ಕಾಗಿ ನ್ಯಾಯಾಲಯದಿಂದ ಒಂದು ತಿಂಗಳ ಕಾಲ ಸಮಯಾವಕಾಶ ವನ್ನು ನೀಡಿ ಚುನಾವಣೆಗೆ ಸಮ್ಮತ ನೀಡಿದ್ದು ರಾಜ್ಯ ಹಾಗೂ ಜಿಲ್ಲಾ ವಕ್ಫ್ ಮಂಡಳಿ, ಜಮಾತ್ ಅಹಲೆ ಇಸ್ಲಾಂ ಸದಸ್ಯತ್ವ ಹಾಗೂ ಚುನಾವಣೆಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಗಳನ್ನು ಸರ್ಕಾರಿ ಅಧಿಕಾರಿಗಳನ್ನು ನೇಮಿಸಿ ಹಾಗೂ ಈ ಹಿಂದೆ ನೋಂದಾಣಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಶಮ್ಸ್ ಮೊಯಿಜ್ ರವರ ಸ್ಥಾನಕ್ಕೆ ಬೇರೆ ಅಧಿಕಾರಿಯನ್ನು ನೇಮಿಸಿ ಚುನಾವಣೆಯನ್ನ ಪಾರದರ್ಶಕವಾಗಿ ನಡೆಸಿಕೊಡಲು ಎಂ.ಎಂ.ಬಾಷಾ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಮಾನುಲ್ಲ, ಇಬ್ರಾಹಿಮ್,ಹಾಶಿಂ ಬನ್ನೂರು, ಸಫೀರ್, ಅಬುಬಕರ್,ರಾಜಶೇಖರ್, ಅಬ್ಬಾಸ್ ರಜಾ, ಮನೋಜ್, ನವಾಜ್ ಮತ್ತು ಇತರರು ಇದ್ದರು.