ಸದಸ್ಯರ ಮನೆಗಳಿಗೆ ಸಿಎಂಸಿ ಅಧ್ಯಕ್ಷೆ ಇಂದಿರಾಗಾಂಧಿ ಭೇಟಿ
ಕೆಜಿಎಫ್.ಆ.೨೫– ನೂತನವಾಗಿ ನಗರಸಭೆ ಅಧ್ಯಕ್ಷೆ ಯಾಗಿ ಆಯ್ಕೆ ಯಾದ ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ ಮಾಜಿ ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ನಗರಸಭೆ ಸದಸ್ಯ ರ ಮನೆ ಗಳಿಗೆ ಭೇಟಿ ನೀಡಿ ನಗರಸಭೆ ಆಡಳಿತ ನಡೆಸುವಲ್ಲಿ ನಿಮ್ಮ ಸಹಕಾರ ಮುಖ್ಯ ವಾಗಿರುವುದರಿಂದ ನಗರದ ಅಭಿವೃದ್ಧಿ ಗೆ ಪೂರಕವಾಗಿ ಸಲಹೆ ಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ರಾಗಿ ನನ್ನನ್ನು ಶಾಸಕಿ ರೂಪಕಲಾಶಶಿಧರ್ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೊವಿಂದೇಗೌಡರು ಆಯ್ಕೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಇರಲಿಲ್ಲ ಆದರೆ ದಿಡೀರ್ ಎಂದು ಚುನಾವಣೆ ದಿನದಂದು ಬೆಳಿಗ್ಗೆ ವಿಷಯ ತಿಳಿಸಿದ್ದರಿಂದ ನಾನು ನಾಮಪತ್ರ ಸಲ್ಲಿಸಿದೇ ನೀವುಗಳು ಎಲ್ಲರು ನನ್ನನ್ನಬೆಂಬಲಿಸಿದ್ದರಿಂದ ನಾನು ಅಧ್ಯಕ್ಷೆ ಯಾಗಲು ಸಾಧ್ಯವಾಗಿದ್ದು ನನಗೆ ಅಧ್ಯಕ್ಷೆ ಸ್ಥಾನ ಹೊಸದಾಗಿ ರುವುದರಿಂದ ನನಗೆ ನೀವುಗಳು ಮಾಗ೯ದಶ೯ನ ಮಾಡಬೇಕು ಎಂದು ಮನವಿ ಮಾಡಿದರು.
ಒಟ್ಟಾರೆ ನೂತನ ಅಧ್ಯಕ್ಷರಾಗಿ ರುವ ಇಂದಿರಾಗಾಂಧಿ ದಯ ಶಂಕರ್ ನಗರಸಭೆ ಸದಸ್ಯ ರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಮನೆ ಗಳಿಗೆ ಭೇಟಿ ನೀಡಿ ಸಹಕಾರ ಕೊರಿದರು.
ಇನ್ನು ನಗರಸಭೆ ಉಪಾಧ್ಯಕ್ಷ ರಾಗಿರುವ ಜಮ೯ನ್ ಜುಲಿಯನ್ ಚುನಾವಣೆಯಲ್ಲಿ ಭಾಗವಹಿಸಿ ಉಪಾಧ್ಯಕ್ಷ ರಾಗಿ ಆಯ್ಕೆಯಾದ ನಂತರ ವೇಲಂಗಾಣಿ ದೇವಾಲಯ ಕ್ಕೆ ಪಾದಯಾತ್ರೆ ಯಲ್ಲಿ ತೆರಳಿದರು.