ಮಹಾಲಕ್ಷ್ಮಿದೇಗುಲದ ಸಮುದಾಯ ಭವನ ಉದ್ಘಾಟನೆ
ತುಮಕೂರು, ಆ. ೨೫- ಇಲ್ಲಿನ ಶ್ರೀರಾಮ ನಗರದ ಮಹಾಲಕ್ಷ್ಮಿ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಹಾಗೂ ನೂತನ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿತ್ತು. ಇದರ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ತಿಗಳ ಸಮುದಾಯದ ಯಜಮಾನರುಗಳಾದ ಶಿವಕುಮಾರ್, ಚಂದ್ರಪ್ಪ, ಸಣ್ಣನಂಜಯ್ಯ, ಲಕ್ಷ್ಮಣಮೂರ್ತಿ, ಹನುಮಂತರಾಜು, ರಮೇಶ್, ಕುಮಾರಣ್ಣ, ಪುಟ್ಟಯ್ಯನವರು ಸಮುದಾಯ ಭವನ ಉದ್ಘಾಟಿಸಿದರು.
ದೊಡ್ಡನಂಜಯ್ಯನವರ ವಂಶಸ್ಥರು ಅನಾದಿಕಾಲದಿಂದಲೂ ಈ ಮಹಾಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಸಮಾಜದ ಕಾರ್ಯಕ್ರಮಗಳ ಅನುಕೂಲಕ್ಕಾಗಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಸಮುದಾಯ ಭವನ ಉದ್ಘಾಟನೆಯಾಯಿತು.
ಇದರ ಅಂಗವಾಗಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಯಮುನಾಪೂಜೆ, ಗೋಪೂಜೆ, ವೇದಿಕಾರ್ಚನೆ, ಮಹಾಗಣಪತಿ ಆದಿತ್ಯಾದಿ ನವಗ್ರಹ ಪರಸ್ಪರ ಮೃತ್ಯುಂಜಯ ಹೋಮ, ಮಹಾಲಕ್ಷ್ಮಿ ಮೂಲಮಂತ್ರ ಹೋಮ, ಸತ್ಯನಾರಾಯಣ ಹೋಮ, ಮಹಾಪೂರ್ಣಾಹುತಿ, ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ, ಮಂತ್ರಪುಷ್ಪ ಮಂಗಳಾರತಿಯನ್ನು ಪ್ರಧಾನ ಅರ್ಚಕ ಹನುಮಂತರಾಯಪ್ಪ ಹಾಗೂ ಆಗಮಿಕರಾದ ಕೆ.ಶ್ರೀಕಾಂತ್ ಶರ್ಮಾ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಿ.ಹರುವೇಸಂದ್ರ ಪಾಳ್ಯದ ದೊಡ್ಡನಂಜಪ್ಪನವರ ಅಧ್ಯಕ್ಷತೆಯ ಈ ಕಾರ್ಯಕ್ರಮದಲ್ಲಿ ತಿಗಳ ಸಮುದಾಯದ ಮುಖಂಡರಾದ ಟಿ.ಎಲ್.ಕುಂಭಯ್ಯ, ಗಂಗಣ್ಣ, ಚೇಳೂರು ಗಂಗಣ್ಣ, ಮಂಜುನಾಥ್, ಲಕ್ಷ್ಮಯ್ಯ, ಟೈಲರ್ ಗಂಗಣ್ಣ, ಚಂದ್ರಶೇಖರ್, ನರಸಿಂಹಮೂರ್ತಿ, ಚಂದ್ರಪ್ಪ, ತಿಮ್ಮರಾಯಪ್ಪ, ಗಂಗರಾಜು, ರವೀಶ್, ದಿಣ್ಣೆ ರಾಜಣ್ಣ, ಹೆಗ್ಗೆರೆ ನಾಗರಾಜ್ ಮತ್ತಿತರ ಮುಖಂಡರ ಭಾಗವಹಿಸಿದ್ದರು.