ತ್ಯಾಜ್ಯ ವಿಲೇವಾರಿ ಸಂಗ್ರಹ ಕೇಂದ್ರವಾಗಿ ಮಾರ್ಪಟ್ಟ ಟೌನ್ ಹಾಲ್…!
ಸಂಜೆವಾಣಿ ವಾರ್ತೆ .
ಸಿಂಧನೂರು ಆ.೨೫ ನಗರದ ಟೌನ್ ಹಾಲ್ ಸುತ್ತಲೂ ಕಸ ,ಪ್ಲಾಸ್ಟಿಕ್ ,ಕಾಗದ ಹಾಗೂ ಚರಂಡಿ ನೀರಿನಿಂದ ತ್ಯಾಜ್ಯ ವಿಲೇವಾರಿ ಸಂಗ್ರಹವಾಗಿ ಮಾರ್ಪಟ್ಟಿದೆ.ನಗರ ಸಭೆಯ ಅಧಿಕಾರಿಗಳೇ ಇತ್ತ ಕಡೆ ಗಮನ ಕೊಡಿ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಟೌನ್ ಹಾಲ್ ಪಕ್ಕದಲ್ಲಿರುವ ಆಸ್ಪತ್ರೆ ,ತರಕಾರಿ ವ್ಯಾಪಾರಿಗಳು ,ಮಾಂಸದ ಅಂಗಡಿಯವರು ಅಳಿದುಳಿದ ತ್ಯಾಜ್ಯ ವನ್ನು ತಂದು ಹಾಕುತ್ತಿದ್ದಾರೆ .ಇಲ್ಲಿರುವ ಖಾಲಿ ಜಾಗ ಅನುಪಯುಕ್ತ ವಸ್ತುಗಳನ್ನು ತಂದು ಹಾಕಲು ಹೇಳಿ ಮಾಡಿಸಿಕೊಟ್ಟಂತಾಗಿದೆ.ಮೂತ್ರ ವಿಸರ್ಜನೆ ,ಬಿಡಾಡಿ ದನಗಳ ವಾಸ ಎಲ್ಲವೂ ಇಲ್ಲೆ ಆಗುತ್ತದೆ. ಮಳೆ ಬಂದು ವಿಪರೀತ ಸೊಳ್ಳೆಗಳ ಹಾವಳಿಯಿಂದ ಡೆಂಗ್ಯೂ, ಮಲೇರಿಯಾ ದಂತಹ ಮಾರಕ ಖಾಯಿಲೆಗಳ ತಾಣವಾಗಿ ಮಾರ್ಪಡುವ ಮುನ್ನ ಮುಂಜಾಗ್ರತೆ ಕ್ರಮವಾಗಿ ಈ ಸ್ಥಳವನ್ನು ಅನುಪಯುಕ್ತ ತ್ಯಾಜ್ಯ ಬಿಸಾಕದಂತೆ ಮತ್ತು ಚರಂಡಿ ನೀರು ನಿಲ್ಲದಂತೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.