ಕಾರು- ಟಿವಿಎಸ್ ನಡುವೆ ಡಿಕ್ಕಿ ದಂಪತಿಗಳಿಬ್ಬರು ಗಂಭೀರ ಗಾಯ
ಆಳಂದ: ಆ.25:ಪಟ್ಟಣದ ಚಿಲ್ಲಾಳ ಪೆಟ್ರೋಲ್ ಪಂಪ್‍ಬಳಿ ಶನಿವಾರ ಕಾರು ಮತ್ತು ಟಿವಿಎಸ್ ದ್ವಿಚಕ್ರವಾನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಗುಳ್ಳೊಳ್ಳಿ ಗ್ರಾಮದ ದಂಪತ್ತಿಗಳಿಬ್ಬರು ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ನೆರೆಯ ಗುಳ್ಳೊಳ್ಳಿ ಗ್ರಾಮದ ನಿವಾಸಿ ಮೌಲಾಲಿ ಉಸ್ಮಾನ (47) ಮತ್ತು ಮಹಿಬೂಬಿ ಮೌಲಾಲಿ (40), ಎಂಬುವರೆ ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣಕ್ಕೆ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಸಲಾಗಿತ್ತಾದರು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿಕೊಂಡಿವೆ.
ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.