ನರೇಗಾ ಅವ್ಯವಹಾರ ಆರೋಪ ಸತ್ಯಕ್ಕೆ ದೂರ
ಕನಕಪುರ.ಆ.೨೫- ತಾಲೂಕಿನ ಉಯ್ಯಂಬಳ್ಳಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕಾಮಗಾರಿಗೆ ಸಂಬಂಧಿಸಿದಂತೆ ಚಂದ್ರಶೆಟ್ಟಿ ಎಂಬುವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದ್ದದ್ದು ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹೆಚ್.ಕೆ.ರವಿ ಸ್ಪಷ್ಟಪಡಿಸಿದ್ದಾರೆ.
ಉಯ್ಯಂಬಳ್ಳಿಯ ಗ್ರಾಮ ಪಂಚಾಯತಿ ಮುಂಭಾಗ ಪತ್ರಿಕಾ ಹೇಳಿಕೆ ನೀಡಿ ಮಾತನಾಡುತ್ತ ಚಂದ್ರಶೆಟ್ಟಿಯವರು ವಯುಕ್ತಿಕ ದ್ವೇಷದಿಂದ ಆರೋಪ ಮಾಡಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದಾರೆ. ಆದರೆ ದುರದೃಷ್ಟ ಕರ ಸಂಗತಿಯೆಂದರೆ ಇದೇ ಚಂದ್ರಶೆಟ್ಟಿ ಎಂಬುವರು ಒಬ್ಬರೇ ಬೇರೆ ಬೇರೆಯವರ ಹೆಸರಿನಲ್ಲಿ ೧೦ ಲಕ್ಷ ವೆಚ್ಚದಲ್ಲಿ ೯ ಕಾಮಗಾರಿಗಳನ್ನು ಮಾಡುವ ಮೂಲಕ ಅಕ್ರಮವೆಸಗಿದ್ದಾರೆ ಎಂದು ಹೆಚ್.ಕೆ.ರವಿ ಆರೋಪಿಸಿದರು.
ಉಯ್ಯಂಬಳ್ಳಿ ಗ್ರಾಮ ಪಂಚಾಯತಿಯಲ್ಲಿ ಪಕ್ಷ ಬೇದ ಮರೆತು ನರೇಗಾ ಕಾಮಗಾರಿಗೆ ಅನುಮೋಧನೆ ನೀಡಲಾಗಿದೆ. ಗ್ರಾಮ ಪಂಚಾಯತಿ ಸಿಬ್ಬಂಧಿ sಸುಮತಿ ಎಂಬುವರ ಮೇಲೆ ಆರೋಪ ಮಾಡಿದ್ದಾರೆ.
ಇವರ ಪತಿಯು ತಮ್ಮ ಸ್ವಂತ ಜಮೀನಿನಲ್ಲಿ ವಯುಕ್ತಿಕ ಕಾಮಗಾರಿಯ ಕೆಲಸ ಮಾಡಿದ್ದಾರೆ. ನರೇಗಾ ಕಾಮಗಾರಿಯನ್ನು ೫ಲಕ್ಷದವರೆಗೆ ಮಾಡಬಹುದು ಎಂಬ ನಿಯಮವಿದ್ದು ಸಿಬ್ಬಂದಿಯ ಪತಿ ೧.೨೫ ಲಕ್ಷ ಕಾಮಗಾರಿ ಮಾಡಿದ್ದಾರೆದ್ದು ಯಾವುದೇ ನಿಮಯ ಭಾಹಿರವಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಅವ್ಯವಹಾರವಾಗಿದ್ದರೆ ಯಾವುದೇ ತನಿಖೆಗೆ ಸಿದ್ಧರಿದ್ದೇವೆ ತಮ್ಮ ಕೆಲಸಗಳು ಆಗಲಿಲ್ಲವೆಂಬುವರು ಈ ರೀತಿ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕೆಂದು ಸ್ಪಷ್ಟಪಡಿಸಿದ್ದಾರೆ.
ಅರಣ್ಯ ಭೂಮಿಯಲ್ಲಿ ಕಂದಕ ಬದು ತೋಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಕಂದಕಬದು ಇರುವುದು ವಯುಕ್ತಿಕ ಕಾಮಗಾರಿ ಮಾಡುವುದಕ್ಕೆ ಹೊರತು ಅರಣ್ಯ ಇಲಾಖೆಗೂ ಇದಕ್ಕೂ ಸಂಬಂಧವಿಲ್ಲ, ಅರಣ್ಯ ಭೂಮಿಯಲ್ಲಿ ನಾಲ ಬದು ಮಾಡಲಾಗಿದೆ ಎಂದು ಸಷ್ಟ ಪಡಿಸಿದ್ದಾರೆ.
ಒಂದು ವೇಳೆ ಅವ್ಯವಹಾರವಾಗಿದ್ದರೆ ಸಿಬಿಐ, ಇಡಿ, ಸೇರಿದಂತೆ ಯಾವುದೇ ತನಿಖೆ ಮಾಡಿಸಲಿ ಎಲ್ಲಾ ಉನ್ನತ ಮಟ್ಟದ ತನಿಖಾ ಸಂಸ್ಥೆಗಳು ಅವರ ಕೈಯಲ್ಲೇ ಇವೆ. ಜೊತೆಗೆ ರಾಜ್ಯಪಾಲರೂ ಸಹ ಅವರು ಹೇಳಿದ ಹಾಗೆ ಕೇಳುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಶಿವರಾಜು ಮುಖಂಡರಾದ ಹೆಗ್ಗನೂರು ವಿಜಯಕುಮರ್ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅದ್ಯಕ್ಷ ದೇರಾಜು ಉಪಸ್ಥಿತರಿದ್ದರು.