ಅಂಬೇಡ್ಕರ್ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆ
ಹುಳಿಯಾರು, ಆ. ೨೫- ಹುಳಿಯಾರು ಸಮೀಪದ ಹರೇನಹಳ್ಳಿಗೇಟ್‌ನಲ್ಲಿ ನಡೆದ ೨೦೨೪-೨೫ನೇ ಸಾಲಿನ ಹಂದನಕೆರೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹಂದನಕೆರೆಯ ಡಾ. ಅಂಬೇಡ್ಕರ್ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳು ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಾಲಿಬಾಲ್‌ನಲ್ಲಿ ಬಾಲಕರು ಹಾಗೂ ಬಾಲಕಿಯರು ಪ್ರಥಮ, ಬಾಲಕಿಯರು ಖೋ.ಖೊ. ಪ್ರಥಮ. ಬಾಲಕಿಯರ ೪೦೦ ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
೧೦೦ ಮೀಟರ್ ಓಟದಲ್ಲಿ ಎಚ್.ಎಸ್.ದರ್ಶನ್ ಪ್ರಥಮ, ಗುಂಡು ಎಸೆತದಲ್ಲಿ ಮೋಹನಕುಮಾರ್ ಪ್ರಥಮ, ಚಕ್ರ ಎಸೆತದಲ್ಲಿ ಎಚ್.ಎ. ಮಾನ್ಯ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಜಯಣ್ಣ, ಶಿಕ್ಷಕರಾದ ಆನಂದ್, ಸಿದ್ದರಾಜು, ಶಂಭವಿ, ಜಂಶಿದಾ ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.