ಎಪಿಎಂಸಿ ಅಡಿಕೆ  ದಲ್ಲಾಲರು- ವರ್ತಕರಿಂದ ಭದ್ರೆಗೆ ಬಾಗಿನ ಅರ್ಪಣೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೨೫;ಪ್ರತಿವರ್ಷದಂತೆ ಈ ವರ್ಷವೂ ಶ್ರಾವಣ ಮಾಸದಲ್ಲಿ ದಾವಣಗೆರೆ ಜಿಲ್ಲೆ ರೈತರ ಜೀವನಾಡಿ ಭದ್ರಾ ಜಲಾಶಯ ಭರ್ತಿ ಆಗಿರುವುದರಿಂದ ದಾವಣಗೆರೆ ಎಪಿಎಂಸಿ ಅಡಿಕೆ ದಲಾಲರು ಮತ್ತು ವರ್ತಕರು ಭದ್ರ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಅಡಿಕೆ ದಲಾಲರು ಮತ್ತು ವರ್ತಕರಾದ ಕುಕ್ಕುವಾಡ ಸುರೇಂದ್ರಪ್ಪ, ಬಿ ಎನ್ ಟಿ ಸದಣ್ಣ ,ಆರ್‌ಎಚ್ ಎಂ ಜಯಣ್ಣ ರಾಮಗೊಂಡನಹಳ್ಳಿಬಸಣ್ಣ, ಲೋಕಿಕೆರೆ ರವಿಣ್ಣ, ಬನಶಂಕರಿ ಶಂಕ್ರಣ್ಣ,ಪಾಂಡುಮಟ್ಟಿ ರವಿಣ್ಣ, ಬಿಕೆಬಿ ಸೋಮಣ್ಣ,ಬೆಳ್ಳುಳ್ಳಿ ಗುರುಸ್ವಾಮಿ, ದೊಗ್ಗಳ್ಳಿ ಶಿವಕುಮಾರ್, ಷಡಕ್ಷರಪ್ಪ ಎಂ ಬೇತೂರು, ವಿಠಲಪುರದ ಕಿರಣ್, ಎಂ ಆರ್ ಗೋಪಿ, ಶಾಮನೂರು ಶಿವಣ್ಣ, ಬೇತೂರು ಸತೀಶ್, ಅಣಬೇರು ವಿನಯ್, ತೊಗಲೇರಿ ಮುರುಗೇಶ್  ಭರಮಸಾಗರ ಮಹಾಂತೇಶ್, ಬಾಡದರಮೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.