ಯಾನ ಸೇವಾ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ
ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಆ.೨೪: ತಾಲೂಕಿನ ವ್ಯಾಸನತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೆಂಗಳೂರಿನ ಯಾನ ಸೇವಾ ಸಂಸ್ಥೆ ವತಿಯಿಂದ ಉಚಿತವಾಗಿ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಕ್ಕಳಿಗೆ ಬ್ಯಾಗ್ ವಿತರಿಸಿ ಮಾತನಾಡಿದ ಯಾನ ಸೇವಾ ಸಂಸ್ಥೆ ಸಂಸ್ಥಾಪಕಿ ಸುರಭಿ ದೇಶಪಾಂಡೆ ನಮ್ಮ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಒಂದಿಲ್ಲೊAದು ಇಂತಹಸೇವಾಕಾರ್ಯಗಳನ್ನು ಮಾಡುತ್ತಾ ಬಂದಿದೆ ಜೊತೆಗೆ ಮರುಬಳಕೆ ಮಡಬಹುದಾದ ಉಪಯುಕ್ತ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ ಹೊಸ ಉತ್ಪನ್ನಗಳಾಗಿ ತಯಾರಿಸುವ ಕಾರ್ಯಕ್ಕೆ ನಮ್ಮ ಸಂಸ್ಥೆ ಮುಂದಾಗಿದೆ ಎಂದು ಹೇಳಿದರು.ಮುಖ್ಯ ಶಿಕ್ಷಕ ಕೆ.ಎಸ್.ಉಸ್ಮಾನ ಮಾತನಾಡಿ ಬೆಂಗಳೂರಿನ ಯಾನ ಸೇವಾ ಸಂಸ್ಥೆಯು ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಉಚಿತವಾಗಿ ಬ್ಯಾಗ್‌ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಮನುಷ್ಯನಿಗೆ ಸಹಾಯ, ಸಹಕಾರ ಗುಣ ಇದ್ದಾಗ ಮಾತ್ರ ಇಂತಹ ಸೇವಾ ಕಾರ್ಯಗಳನ್ನು ಮಾಡಲು ಸಾಧ್ಯ ಎಂದು ಹೇಳಿದರು. ಸಮಾಜ ಸೇವಕಿ ನಾಗಮಣಿ ಮಾತನಾಡಿ ಸುರಭಿ ದೇಶಪಾಂಡೆಯವರು ಒಬ್ಬ ಸಾಪ್ಟ್ವೇರ್ ಇಂಜಿನಿಯರ್ ಆಗಿ ಇಂತಹ ಸಮಾಜಮುಖಿ ಕೆಲಸದಲ್ಲಿ ತೊಡಗಿರುವುದು ತುಂಬಾ ಸಂತಷದ ಸಂಗತಿ ಎಂದು ಹೇಳಿದರು. ಸೇವಾ ಸಂಸ್ಥೆಯ ಸ್ವಯಂಸೇವಕ ರಾಘವೇಂದ್ರ ಮಾತನಾಡಿದರು.ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎಲ್.ಸೋಮಶೇಖರನಾಯ್ಕ್, ಮುಖ್ಯ ಶಿಕ್ಷಕ ಕೆ.ಎಸ್.ಉಸ್ಮಾನ್, ಗ್ರಾ.ಪಂ ಸದಸ್ಯರಾದ ಹರಪನಹಳ್ಳಿ ಚೌಡಮ್ಮ ನಾಗಪ್ಪ, ಮಾಜಿ ಸದಸ್ಯ ಎಲ್.ಸಂತೋಷಕುಮಾರ, ಮುಖಂಡರಾದ ದೇವೇಂದ್ರನಾಯ್ಕ್, ಬಸವರಾಜನಾಯ್ಕ್, ಅನಂದನಾಯ್ಕ, ಕೊಟ್ರೇಶನಾಯ್ಕ್, ಕಮಾರನಾಯ್ಕ್, ಚಂದ್ರಬಾಯ್ಕ್, ಶಿಕ್ಷಕರಾದ ವೀರಣ್ಣ, ಕೊಟ್ರೇಶ, ವೆಂಕಟೇಶನಾಯ್ಕ್ ಸೇರಿದಂತೆ ಇತರರು ಇದ್ದರು.