ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ಸಭೆ: ಜಿಲ್ಲಾಧಿಕಾರಿ ಅವರಿಂದ ಕುಂದುಕೊರತೆಗಳ ಆಲಿಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.25– ಪರಿಶಿಷ್ಟ ಜಾತಿಜನಾಂಗದ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಸಂಬಂಧನಗರದಲ್ಲಿಂದುಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ಸಭೆಯುಜಿಲ್ಲಾಧಿಕಾರಿಗಳಾದ ಶಿಲ್ಪಾನಾಗ್ ಅವರಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ.ಸಭಾಂಗಣದಲ್ಲಿಂದುನಡೆದಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿಸಭೆಯಲ್ಲಿಮೊದಲಿಗೆಜಿಲ್ಲೆಯ ಪರಿಶಿಷ್ಟ ಸಮುದಾಯದ ಮುಖಂಡರಿಂದಸಮಸ್ಯೆ, ಕುಂದುಕೊರತೆಗಳನ್ನು ಜಿಲ್ಲಾಧಿಕಾರಿಯವರು ಆಲಿಸಿದರು.
ಜಿಲ್ಲೆಯ ಹಲವು ಭಾಗಗಳಲ್ಲಿ ಜೀತಪದ್ದತಿಯಿಂದ ವಿಮುಕ್ತರಾದವರಿಗೆ ಪುನರ್ವಸತಿ ಕಲ್ಪಿಸಿರುವುದಿಲ್ಲ.ಜೀತಮುಕ್ತರಾದವರಿಗೆಗುರುತಿನಚೀಟಿಇಲ್ಲದಿರುವುದರಿಂದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಮೀಸಲಾಗಿದ್ದಜಮೀನಿನ ಸಾಗುವಳಿಗೆ ಹಕ್ಕುಪತ್ರ ನೀಡಿದ್ದರೂ ಸದರಿಜಮೀನಿನಲ್ಲಿ ಬೇರೆಯವರುಕೃಷಿ ಮಾಡುತ್ತಿದ್ದಾರೆ. ಸರ್ಕಾರಿಜಾಗಇರುವೆಡೆಸೂಕ್ತ ಜಮೀನುಕೊಟ್ಟುಜೀತಮುಕ್ತರಿಗೆಹಾಗೂ ಪುನರ್ವಸತಿಕಲ್ಪಿಸಬೇಕುಎಂದುಸಮುದಾಯದ ಮುಖಂಡರುಸಭೆಯಲ್ಲಿತಿಳಿಸಿದರು.
ಈ ಸಂಬಂಧಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಮುಂಬರುವ ಸೆಪ್ಟೆಂಬರ್ ಮಾಹೆಯಲ್ಲಿಜಿಲ್ಲೆಯಾದ್ಯಂತಜೀತಮುಕ್ತಜಿಲ್ಲೆಅಭಿಯಾನಹಮ್ಮಿಕೊಳ್ಳಲಾಗುವುದು.ಅಭಿಯಾನ ಅಂಗವಾಗಿ ಜಿಲ್ಲೆಯ ಪ್ರತಿಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಗ್ರಾಮಸಭೆಏರ್ಪಡಿಸಿ ಜೀತಮುಕ್ತರಿಗೆ ಪುನರ್ವಸತಿಕಲ್ಪಿಸಲುಗ್ರಾಮಪಂಚಾಯತ್ ಅಧಿಕಾರಿಗಳಿಗೆ ಸೂಚಿಸಲಾಗುವುದುಎಂದು ಹೇಳಿದರು.
ಸಮುದಾಯದಮುಖಂಡರೊಬ್ಬರು ಮಾತನಾಡಿ ಮುಕ್ಕಡಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 8 ಜನರುಜೀತ ವಿಮುಕ್ತರಾಗಿದ್ದಾರೆ.ಇವರಿಗೆ 10 ಸಾವಿರ ಪರಿಹಾರ ಬಿಟ್ಟರೆ ಬೇರೆಯಾವುದೇ ಪರಿಹಾರ ಸಿಕ್ಕಿಲ್ಲ. ಮನೆ, ಜಮೀನುಕೊಡಿಸುವಂತೆಮನವಿ ಮಾಡಿದರು.ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಅವರುಇದನ್ನುವಿಶೇಷ ಪ್ರಕರಣವಾಗಿಪರಿಗಣಿಸಿ ಸಂತ್ರಸ್ಥಕುಟುಂಬಗಳಿಗೆ ಸರ್ಕಾರಿ ಜಾಗದಲ್ಲಿ ಪುನರ್ವಸತಿಕಲ್ಪಿಸಲುಕ್ರಮವಹಿಸಲಾಗುವುದು.ಒಂದು ವೇಳೆ ಸರ್ಕಾರಿಜಾಗಇಲ್ಲದಿದ್ದರೆಖಾಸಗಿಯವರಿಂದಜಾಗ, ಜಮೀನುಖರೀದಿಸಿ ಕೊಡಲಾಗುವುದು.ಅಲ್ಲದೆ ಗ್ರಾಮಪಂಚಾಯಿತಿಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ಜೀತಮುಕ್ತರಿಗೆಆದ್ಯತೆ ನೀಡಲಾಗುವುದು.ಈ ಬಗ್ಗೆ ಸಭಾ ನಡಾವಳಿಗಳಲ್ಲಿ ನಮೂದಿಸಿ ಕಾರ್ಯರೂಪಕ್ಕೆತರಲು ತಿಳಿಸಲಾಗುವುದುಎಂದರು.
ತಾಲೂಕಿನ ಬಸವನಪುರಗ್ರಾಮದಲ್ಲಿರುವ 3.20 ಎಕರೆ ಸರ್ಕಾರಿಜಾಗದ ಪೈಕಿ 1 ಎಕರೆಜಾಗವನ್ನು ಪರಿಶಿಷ್ಟ ಜನಾಂಗದ ಸ್ಮಶಾನಕ್ಕೆ ಮಂಜೂರಾಗಿದ್ದರೂ ಅಧಿಕಾರಿಗಳು ಅದನ್ನುಖಾಸಗಿ ವ್ಯಕ್ತಿಗೆಖಾತೆ ಮಾಡಿಕೊಟ್ಟಿದ್ದಾರೆ. ಯಣಗುಂಬ ಗ್ರಾಮದಲ್ಲಿ 5 ಜನರಿಗೆ ಸಾಗುವಳಿ ಚೀಟಿಇದ್ದರುಖಾತೆ ಮಾಡಿಕೊಟ್ಟಿಲ್ಲ. ಅಲ್ಲದೇ ಹನೂರು ತಾಲೂಕಿನಅಂಬಿಕಾಪುರಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿಪಡಿಸಿಲ್ಲ. ದಲಿತ ಕುಟುಂಬಗಳಿಗೆಗ್ರಾಮದಲ್ಲಿರುವ 1.53 ಎಕರೆಜಾಗದಲ್ಲಿ ನಿವೇಶನ ನೀಡುವಕುರಿತಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರುಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ತಹಸೀಲ್ದಾರ್‍ಗೆ ನಿರ್ದೇಶನ ನೀಡಿದರು.
ಸಿದ್ದಯ್ಯನಪುರ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದಲೂ ಸಾಗುವಳಿ ಮಾಡುತ್ತಿದ್ದು ಈ ಸಂಬಂಧ ತಹಸೀಲ್ದಾರ್‍ಗೆ ಅರ್ಜಿ ಸಲ್ಲಿಸಿದ್ದರೂಯಾವುದೇ ಕ್ರಮಕೈಗೊಂಡಿಲ್ಲ. ವಿದ್ಯಾರ್ಥಿನಿಲಯಗಳು ಊರಿನ ಹೊರಭಾಗದಲ್ಲಿಇರುವುದರಿಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಿಬರಲುಕಷ್ಟವಾಗುತ್ತಿದೆ.ನಗರದಕೇಂದ್ರ ಭಾಗಕ್ಕೆ ವಿದ್ಯಾರ್ಥಿ ನಿಲಯವನ್ನು ಸ್ಥಳಾಂತರಿಸಿಕೊಡಬೇಕು ಎಂಬ ಮುಖಂಡರೊಬ್ಬರ ಪ್ರಶ್ನೆಗೆಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರುಡಿನೋಟಿಫಿಕೇಶನ್‍ಗೆ ಸರ್ಕಾರಕ್ಕೆ ಕಳುಹಿಸಲಾಗಿದೆ.ಅಲ್ಲದೆ ಸಿದ್ದಯ್ಯನಪುರ ಕಂದಾಯಗ್ರಾಮಕ್ಕೆ ಪ್ರಸ್ತಾವನೆಕೂಡ ಕಳುಹಿಸಿಕೊಡಲಾಗಿದೆ.ಸೂಕ್ತ ನಿರ್ದೇಶನದಬಳಿಕ ಕ್ರಮವಹಿಸಲಾಗುವುದು.ಅಲ್ಲದೆ ವಿದ್ಯಾರ್ಥಿನಿಲಯಗಳ ಸಂಬಂಧ ಸಮಾಜಕಲ್ಯಾಣಇಲಾಖೆಯಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಮಧ್ಯಭಾಗದಲ್ಲಿ ವಿದ್ಯಾರ್ಥಿನಿಲಯಗಳ ಸ್ಥಾಪನೆಗೆ ಒತ್ತು ನೀಡಿ ಮೂಲಸೌಲಭ್ಯಕಲ್ಪಿಸಲಾಗುವುದುಎಂದರು.
ಸಮುದಾಯದ ಮಕ್ಕಳಿಗೆ ಅನುಕೂಲವಾಗುವಂತೆಜಿಲ್ಲೆಯ ಪ್ರತಿಷ್ಠಿತ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಲುಆದ್ಯತೆ ನೀಡುವಂತೆ ಮುಖಂಡರೊಬ್ಬರ ಮನವಿಗೆ ಉತ್ತರಿಸಿದ ಜಿಲ್ಲಾಧಿಕಾರಿಯವರು ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಸಮಸ್ಯೆಪರಿಹರಿಸಲಾಗುವುದುಎಂದರು.
ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಬೇಕು.ಜನರಿಗೆ ಬ್ಯಾಂಕುಗಳಲ್ಲಿ ದೊರೆಯುವ ಸಾಲಸೌಲಭ್ಯ ಸಕಾಲದಲ್ಲಿ ಸಿಗುತ್ತಿಲ್ಲ.
ಇದರಿಂದ ಪರಿಶಿಷ್ಟ ಸಮುದಾಯದಅರ್ಥಿಕ ಸಬಲೀಕರಣಕುಂಠಿತವಾಗಿದೆ. ಇದನ್ನುತಕ್ಷಣವೇ ಪರಿಹರಿಸಬೇಕು.ಸಾಮಾಜಿಕ ಬಹಿಷ್ಕಾರ, ಆಸ್ಪøಶ್ಯತೆಆಚರಣೆ ನಿವಾರಣೆಗೆಕ್ರಮಜರುಗಿಸಬೇಕೆಂಬ ಸಮಾಜದ ಮುಖಂಡರ ಮನವಿಗೆ ಉತ್ತರಿಸಿದ ಜಿಲ್ಲಾಧಿಕಾರಿಯವರುಅದಷ್ಟು ಶೀಘ್ರವಾಗಿ ಸಮಸ್ಯೆ ಪರಿಹಾರಕ್ಕೆಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಮಾತನಾಡಿಜಿಲ್ಲೆಯಯಾವುದೇ ಭಾಗದಲ್ಲಿ ಸಾಮಾಜಿಕ ಬಹಿಷ್ಕಾರ, ಅಸ್ಪøಶ್ಯತೆಆಚರಣೆಯನ್ನು ಸಹಿಸುವುದಿಲ್ಲ. ಇದು ಸೂಕ್ಷ್ಮ ವಿಚಾರವಾಗಿದೆ.ಜಿಲ್ಲಾಡಳಿತಇದನ್ನುಗಂಭೀರವಾಗಿ ಪರಿಗಣಿಸಿ ಸೂಕ್ತ ಹಾಗೂ ನಿರ್ಧಾಕ್ಷಿಣ್ಯವಾಗಿಕ್ರಮಜರುಗಿಸಲಿದೆಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಾ.ಬಿ.ಟಿ. ಕವಿತಾಅವರು ಮಾತನಾಡಿಜಿಲ್ಲೆಯಎಲ್ಲಾ ಭಾಗಗಳಲ್ಲಿ ಸಂಚರಿಸಿ ಪರಿಶಿಷ್ಟ ಸಮುದಾಯದ ಮೇಲೆ ಯಾವುದೇ ದೌರ್ಜನ್ಯಗಳಾಗದಂತೆ ಎಚ್ಚರ ವಹಿಸಲಾಗುತ್ತಿದೆ.ಪ್ರತಿತಿಂಗಳು ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಪರಿಶಿಷ್ಟ ಹಿತರಕ್ಷಣಾ ಸಭೆಗಳನ್ನು ಆಯೋಜಿಸಲಾಗುತ್ತಿದೆ.ಅಸ್ಪøಶ್ಯತೆಆಚರಣೆಯಾಗದಂತೆಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಿ ಸಾರ್ವಜನಿಕರಿಗೆಜಾಗೃತಿ ಮೂಡಿಸಲಾಗುತ್ತಿದೆಎಂದರು.
ಸಮುದಾಯ ಭವನದ ಮೂಲಸೌಲಭ್ಯ, ಬದನಗುಪ್ಪೆ-ಕೆಲ್ಲಂಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗಗಳಿಗೆ ಪರಿಶಿಷ್ಟರ ಕಡೆಗಣನೆ, ಜಾಗದಒತ್ತುವರಿ, ಸಂಚಾರಕ್ಕೆ ಸುಗಮ ರಸ್ತೆ, ಸ್ಮಶಾನಗಳ ಅಭಿವೃದ್ಧಿ, ಪರಿಶಿಷ್ಟಜಾತಿ ಪ್ರಮಾಣಪತ್ರದದುರುಪಯೋಗ, ಭೂ ಮಂಜೂರಾತಿ ನಿಯಮಗಳ ದುರುಪಯೋಗ, ಸಾಗುವಳಿ ನೀಡದಿರುವಿಕೆ ಸೇರಿದಂತೆ ಹಲವು ಸಮಸ್ಯೆಗಳು ಸಭೆಯಲ್ಲಿವಿವರವಾಗಿಚರ್ಚಿತವಾದವು.
ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿಮೋನಾ ರೋತ್, ಹೆಚ್ಚುವರಿಜಿಲ್ಲಾಧಿಕಾರಿಗೀತಾ ಹುಡೇದ, ಪರಿಶಿಷ್ಟ ವರ್ಗಗಳಕಲ್ಯಾಣ ಇಲಾಖೆಅಧಿಕಾರಿಬಿಂದ್ಯಾಶ್ರೀ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಮುಖಂಡರಾದಸಿ.ಕೆ.ಮಂಜುನಾಥ್, ಸಿ.ಎಂ.ಕೃಷ್ಣಮೂರ್ತಿ, ಕೆ.ಎಂ. ನಾಗರಾಜು, ಅರಕಲವಾಡಿ ನಾಗೇಂದ್ರ, ಸಂಘಸೇನಾ, ಚಾ.ಗು.ನಾಗರಾಜು, ಮುತ್ತಿಗೆ ಮೂರ್ತಿ, ಪರ್ವತ್‍ರಾಜ್,ಸಿ.ಕೆ.ರವಿಕುಮಾರ್, ದಡದಹಳ್ಳಿ ಶಂಕರ,ಬಸವನಪುರರಾಜಶೇಖರ್, ಯರಿಯೂರುರಾಜಣ್ಣ, ಸಿ.ಎಂ. ಕೃಷ್ಣ, ಪ್ರಸನ್ನ, ಅಂಬರೀಷ್, ಸುರೇಶ್ ನಾಯುಕ, ಶ್ರೀಕಂಠ, ದೊಡ್ಡಿಂದುವಾಡಿ ಸಿದ್ದರಾಜು, ನಾಗರಾಜು, ಶಿವಣ್ಣ, ನಾಗೇಶ್, ಮಹೇಶ್, ವಾಸು, ಬ್ಯಾಡಮೂಡ್ಲು ಬಸವಣ್ಣ, ನಟರಾಜು, ಭಾನುಪ್ರಕಾಶ್, ಸಿದ್ದಯ್ಯ, ಸುಭಾಷ್ ಮಾಡ್ರಹಳ್ಳಿ, ಕಂದಹಳ್ಳಿ ನಾರಾಯಣ, ಸೋಮಸುಂದರ್, ಮಾಂಬಳ್ಳಿ ರಜನಿಕಾಂತ್, ರಂಗಸ್ವಾಮಿ, ದೊಡ್ಡರಾಯಪೇಟೆ ಮೂರ್ತಿ, ಸಮುದಾಯದಇತರೆಮುಖಂಡರುಸಭೆಯಲ್ಲಿ ಉಪಸ್ಥಿತರಿದ್ದರು.