ನಾಡಹಬ್ಬ ಗಜಪಡೆಗೆ ತೂಕ ಪ್ರಕ್ರಿಯೆ
ಸಂಜೆವಾಣಿ ನ್ಯೂಸ್
ಮೈಸೂರು:ಆ.25:- ನಗರದ ಧನ್ವಂತ್ರಿ ರಸ್ತೆಯಲ್ಲಿರೋ ಶ್ರೀನಿವಾಸ ವೇ ಬ್ರಿಡ್ಜ್‍ನಲ್ಲಿ ಆನೆಗಳ ತೂಕ ಪರೀಕ್ಷೆ ಮಾಡಲಾಯಿತು.
ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ಪದ್ಧತಿ ವಿತರಣೆ ಬಳಿಕ ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ನಡೆಯಲಿದೆ. ಬೆಳಗ್ಗೆ- ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ನಡೆಯಲಿರುವ ತಾಲೀಮು ನಿತ್ಯ ನಡೆಯಲಿದೆ. ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡುವುದೇ ತಾಲೀಮಿನ ಉದ್ದೇಶವಾಗಿದೆ.
ಮತ್ತಿಗೋಡು ಕ್ಯಾಂಪ್ ನಲ್ಲಿ ಮಹೇಂದ್ರ, ಭೀಮ, ಏಕಲವ್ಯ ಆನೆಯನ್ನು ಪರಿಶೀಲಿಸುತ್ತಿರುವ ಡಿಸಿಎಫ್ ಶರಣಬಸಪ್ಪ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ತೂಕ ಮಾಡಿದರು.
ವಿವರ : ಅಭಿಮನ್ಯು: 5560ಕೆಜಿ, ಭೀಮ:4945 ಕೆಜಿ, ಏಕಲವ್ಯ:4730 ಕೆಜಿ, ಕಂಜನ್ : 4515 ಕೆಜಿ, ಧನಂಜಯ: 5155 ಕೆಜಿ, ಲಕ್ಷ್ಮಿ:2480 ಕೆಜಿ, ವರಲಕ್ಷ್ಮಿ: 3495 ಕೆಜಿ, ರೋಹಿತ: 3625 ಕೆಜಿ, ಗೋಪಿ : 4970 ಕೆಜಿ.ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯು ನಂಬರ್ ಆಗಿದ್ದನು.
ಅರಮನೆಗೆ ಬಂದ ಗಜಪಡೆಗೆ ತೂಕ ಪರೀಕ್ಷೆ ಮಾಡಲಾಗಿದೆ. ಆನೆಗಳ ಆರೋಗ್ಯದ ಬಗ್ಗೆ ಗಮನ ಹರಿಸಲಾಗಿದೆ. ಆನೆಗಳ ತೂಕದ ಮೇಲೆ ಪೌಷ್ಟಿಕ ಆಹಾರ ನೀಡಲಾಗುತ್ತೆ. ದಸರಾಗೆ ಮುನ್ನ ಮತ್ತೆ ಆನೆಗಳ ತೂಕ ಪರೀಕ್ಷೆ ಮಾಡುತ್ತೇವೆ. ಎಲ್ಲಾ ಆನೆಗಳ ಆರೋಗ್ಯ ಚೆನ್ನಾಗಿದೆ. ನಾಳೆಯಿಂದಲೇ ಗಜಪಡೆಗಳ ತಾಲೀಮು ಆರಂಭವಾಗಿಲಿದೆ ಎಂದು ಡಿಸಿಎಫ್ ಡಾ ಪ್ರಭುಗೌಡ ಹೇಳಿದರು.