ಹೊಸಹಳ್ಳಿ ಪ್ರಾ.ಕೃ.ಪ.ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ತೊಂದರೆ ತಹಸೀಲ್ದಾರ್‍ಗೆ ದೂರು
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಆ.25:– ಡೋರನಹಳ್ಳಿ ಗ್ರಾಮದಲ್ಲಿ ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಅನಗತ್ಯವಾಗಿ ಡೋರ್ನಹಳ್ಳಿ ಚರ್ಚ್ ನ ಫಾದರ್ ಹಾಗೂ ಕೆಲ ಜನರು ತೊಂದರೆ ನೀಡುತ್ತಿದ್ದು ಸಹಕಾರ ಸಂಘದ ಎಲ್ಲಾ ದಾಖಲೆಗಳನ್ನು ನೀಡಿದ್ದೇವೆ ಸಂಘದ ಆಸ್ತಿ ಉಳಿವಿಗಾಗಿ ಹೋರಾಟ ಕೂಡ ಮಾಡುತ್ತೇವೆ ಎಂದು ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಹೇಮಲತಚಂದ್ರು ಹಾಗು ಸಿಇಓ ಎಂ.ಜಿ.ಸಂತೋಷ್, ನಿರ್ದೇಶಕರು ಒಟ್ಟಾಗಿ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸುಮಾರು 60 ವರ್ಷಗಳ ಹಿಂದೆಯೇ ಸ್ಥಾಪನೆಗೊಂಡು ಹಾಲಿ ಸಂಘವು 23 ಗ್ರಾಮಗಳನ್ನು ಹೊಂದಿದ್ದು, ಎಲ್ಲಾ ಸದಸ್ಯ ರೈತರಿಗೆ ಕೆ.ಸಿ.ಸಿ ಬೆಳೆ ಸಾಲವನ್ನು 0% ಬಡ್ಡಿ ದರದಲ್ಲಿ ನೀಡುತ್ತಿದ್ದು, ಹಾಗೆಯೇ ಮಾಧ್ಯವಧಿ ಸಾಲಗಳಾದ ಕೊಳವೇ ಬಾವಿ ಸಾಲ, ಐ.ಪಿ.ಸೆಟ್ಸ್ ಸಾಲ, ಹೈನುಗಾರಿಕೆ ಸಾಲ, ಕೋಳಿಸಾಕಾಣಿಕೆ ಸಾಲ, ಕುರಿಸಾಲ, ಟ್ಯಾಕ್ಟರ್‍ಸಾಲ, ಟಿಲ್ಲರ್ ಸಾಲ, ಮಹಿಳೆಯರಿಗೆ ಎಸ್, ಹೆಚ್.ಜಿ ಸಾಲ, ಎಸ್.ಜಿ.ಎಸ್.ವೈ ಸಾಲ, ಗ್ಯಾಸ್ ಸಿಲಿಂಡರ್ ಸಾಲ ಇತ್ಯಾದಿ ಸಾಲಗಳನ್ನು ರೈತರಿಗೆ ನೀಡುತ್ತಿದ್ದು ಸರ್ಕಾರಿ ಯೋಜನೆಗಳಾದ ಯಶಶ್ವಿನಿ ಯೋಜನೆ, ಸಾಲಮನ್ನಾ ಯೋಜನೆ, ರೈತರು ಪಡೆದ ಸಾಲಕ್ಕೆ ಬಡ್ಡಿ ಸಹಾಯಧನ ಯೋಜನೆ, ಇತ್ಯಾದಿ ಯೋಜನೆಗಳನ್ನು ರೈತರಿಗೆ ನೀಡುತ್ತಿರುತ್ತೇವೆ. ಸುಮಾರು 60 ವರ್ಷಗಳಿಂದ ಸಹಕಾರ ಸಂಘದಿಂದ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ ಎಂದರು.
ಸಂಘವು ಸುಮಾರು 2023-24ನೇ ಸಾಲಿನಲ್ಲಿ ರೈತರಿಗೆ ರೂ 8.50ಕೋಟಿ ಕೃಷಿ ಸಾಲವನ್ನು ನೀಡಿದ್ದು ರೂ.25.00 ಕೋಟಿ ರೂ ವ್ಯವಹಾರ ನಡೆದಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಮಂಡಳಿಯು ಸಂಘದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ಒಂದು ಕಛೇರಿಯನ್ನು ಹೊಸದಾಗಿ ತೆರೆದು ಕೌಂಟನ್ನು ಸ್ಥಾಪನೆ ಮಾಡಿ ಭದ್ರತೆಯನ್ನು ಮಾಡಲು ಆಡಳಿತ ಮಂಡಳಿಯು ದಿ.08.09.2023 ಶುಕ್ರವಾರದಂದು ಅಡಳಿತ ಮಂಡಳಿ ಸಭೆಯನ್ನು ಕರೆದು ಆಡಳಿತ ಮಂಡಳಿಯವರು ನನ್ನ ಅಧ್ಯಕ್ಷತೆಯಲ್ಲಿ ಕಛೇರಿಯ ನೂತನ ಕಟ್ಟಡವನ್ನು ಕಟ್ಟಲು ತೀರ್ಮಾನ ಮಾಡಿ ದಿ: 10.09.2023ರಂದು ನೂತನ ಕಟ್ಟಡದ ಗುದ್ದಲಿ ಪೂಜೆ ಮಾಡಿಸಲು ಹೋದಾಗ ಡೋರಹಳ್ಳಿ ಗ್ರಾಮದ ಕ್ರೈಸ್ತ ಮತದ ಫಾದರ್ ಮತ್ತು ಗ್ರಾಮದ ಕೆಲ ಜನರು ಬಂದು ಗಲಾಟೆ ಮಾಡಿ ಪೆÇೀಲೀಸ್ ಠಾಣೆಯಲ್ಲಿ ಅಧ್ಯಕ್ಷೆಯಾದ ನನ್ನ ಮೇಲೆ ಮತ್ತು ಮಾಜಿ ಕಾರ್ಯದರ್ಶಿ ಗಿರೀಶ್ ಅವರ ಮೇಲೆ ದೂರು ನೀಡಿದ್ದಾರೆ. ಆದ್ದರಿಂದ ನಮ್ಮ ದಾಖಲೆಗಳನ್ನು ಪರಿಶೀಲಿಸಿ ನಮ್ಮ ಸಹಕಾರ ಸಂಘಕ್ಕೆ ಸೇರಿದ ಕಟ್ಟಡ, ಖಾಲಿ ನಿವೇಶನವನ್ನು ಕಂದಾಯ ಗ್ರಾಮಕ್ಕೆ ಸೇರಿಸಿಕೊಡಿ ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ರೈತರ ಸೇವೆಯನ್ನು ಮಾಡಲು ಒಂದು ಸ್ವಂತ ಕಛೇರಿ ಮತ್ತು ರೈತರ ಸಭಾಂಗಣದ ಅವಶ್ಯಕತೆ ಇರುವುದರಿಂದ ನಮ್ಮ ಸಂಘದ ಹೆಸರಿಗೆ ರಿಜಿಸ್ಟರ್ ಆಗಿರುವ. ಕ್ರಯಪತ್ರದ ಪ್ರಕಾರ 8್ಠ080 ಅಡಿಗಳು ಹಾಗೂ 2್ಠ080ಅಡಿಗಳು ಗ್ರೂಪ್ ಪಂಚಾಯಿತಿ ಆಡಳಿತಾಧಿಕಾರಿಯವರ ಮತ್ತು ಕಾರ್ಯದರ್ಶಿ ಯವರ ಮೀಟಿಂಗ್ ನಡಾವಳಿ ಮತ್ತು ಡಿಮ್ಯಾಂಡ್ ರಿಜಿಸ್ಟರ್ ಹೊಂದಿದ್ದು ಒಟ್ಟಾರೆ 100+80 ಅಡಿಗಳ ಖಾಲಿ ನಿವೇಶನ ಮತ್ತು ಗೋದಾಮು ಕಟ್ಟಡವನ್ನು ಸಂಘದ ಹೆಸರಿಗೆ ಖಾತೆ ಮಾಡಿ ಕೊಡಬೇಕೆಂದು ಒತ್ತಾಯಿಸಿದರು.
ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಹೇಮಲತಚಂದ್ರು, ಉಪಾಧ್ಯಕ್ಷ ಲೋಕೇಶ್(ಗುಡ್ಡಪ್ಪ), ನಿರ್ದೇಶಕರಾದ ಎಲ್.ಎಸ್.ಮಹೇಶ್, ರಮೇಶ್, ಎಂ.ಮಹದೇವ್ ,ಹೆಚ್.ಎ.ವಿಜಯ್ ಕುಮಾರ್, ಎ.ಎಂ.ಜಯಣ್ಣ, ವಸಂತೇಗೌಡ, ಪುಟ್ಟಸಿದ್ದಮ್ಮ, ದೇವನಾಯಕ, ಬಿ.ಜೆ.ಮಾದಯ್ಯ, ಸಹಕಾರ ಸಂಘದ ಸಿಇಓ ಎಂ.ಜಿ.ಸಂತೋಷ್, ಮಾಜಿ ಸಿಇಓ ಗಿರೀಶ್, ಸಹಕಾರ ಸಂಘದ ಸದಸ್ಯ ಬಸವರಾಜು, ಇದ್ದರು.