ಸರಗಳ್ಳತನಕ್ಕೆ ಯತ್ನ:ಸಾರ್ವಜನಿಕರಿಂದ ಗೂಸಾ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.25: ಹಾಡುಹಗಲೇ ಸರಗಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರೆ ಹಿಡಿದು ಪೆÇೀಲೀಸರಿಗೊಪ್ಪಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಕೃಷ್ಣಾಪುರ ಗ್ರಾಮದ ಶ್ರೀನಿವಾಸ ಎಂಬ ವ್ಯಕ್ತಿಯೆ ಸಾರ್ವಜನಿಕರಿಂದ ಗೂಸಾ ತಿಂದು ಪೆÇೀಲೀಸರ ಅಥಿತಿಯಾಗಿದ್ದಾನೆ.
ಘಟನೆ ವಿವರ:-ಪಟ್ಟಣದ ಹೇಮಗಿರಿ ರಸ್ತೆಯಲ್ಲಿರುವ (ಬಿ.ಎಲ್.ಡಿ.ಪೆಟ್ರೋಲ್ ಬಂಕ್ ಬಳಿ) ಸಂಪತ್ ಎಂಬುವವರು ತಮ್ಮ ವಾಣಿಜ್ಯ ಮಳಿಗೆಯಲ್ಲಿ ನಡೆಸುತ್ತಿರುವ ಲಕ್ಷ್ಮೀ ವೆಂಕಟೇಶ್ವರ ಪ್ರಾವಿಷನ್ ಸ್ಟೋರ್ ಗೆ ಮಧ್ಯಾಹ್ನ ಸುಮಾರು ಎರಡು ಗಂಟೆಯ ಸಮಯದಲ್ಲಿ ಟಿವಿಎಸ್ ಸ್ಕೂಟರ್ ನಲ್ಲಿ ಬಂದ ಸರಗಳ್ಳ ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದಿದ್ದಾನೆ ಈ ವೇಳೆ ಅಂಗಡಿ ಬಳಿ ಯಾರೂ ಇಲ್ಲದ ಸಮಯ ನೋಡಿ ಏಕಾಏಕಿ ಅಂಗಡಿಯಲ್ಲಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕೀಳಲು ಯತ್ನಿಸಿದ್ದಾನೆ ಕೂಡಲೆ ಎಚ್ಚೆತ್ತ ಮಹಿಳೆ ಕಳ್ಳನಿಂದ ಬಿಡಿಸಿಕೊಳ್ಳಲು ಅಲ್ಲೇ ಇದ್ದ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದಾಗ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಿಡಿದು ಪಟ್ಟಣ ಪೆÇೀಲಿಸರಿಗೆ ಒಪ್ಪಿಸಿದ್ದಾರೆ.